Test series defeat; ನಾನು ಯಾರ ಸಾಮರ್ಥ್ಯವನ್ನೂ ಅನುಮಾನಿಸುವುದಿಲ್ಲ: ರೋಹಿತ್ ಶರ್ಮ

ಬ್ಯಾಟರ್ಸ್ ಗಳು ತಮ್ಮ ಯೋಜನೆಗಳನ್ನು ನಂಬಬೇಕು...ಇದು ಸಾಮೂಹಿಕ ವೈಫಲ್ಯ...

Team Udayavani, Oct 26, 2024, 7:17 PM IST

1-a-rohit-bg

ಪುಣೆ: ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ನಾಯಕ ರೋಹಿತ್ ಶರ್ಮ  ಬ್ಯಾಟರ್ಸ್ ಗಳನ್ನು ಹೊಣೆಗಾರರನ್ನಾಗಿಸದಿರಲು ನಿರ್ಧರಿಸಿದ್ದಾರೆ. ಕಠಿನ ಎದುರಾಳಿಗಳ ವಿರುದ್ಧ ಯಶಸ್ವಿಯಾಗಲು ಬ್ಯಾಟರ್ಸ್ ಗಳು ತಮ್ಮ ಯೋಜನೆಗಳನ್ನು ನಂಬಬೇಕು ಎಂದು ಸೂಚನೆ ನೀಡಿದ್ದಾರೆ.

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ “ಯಾರ ಸಾಮರ್ಥ್ಯದ ಬಗ್ಗೆಯೂ ನನಗೆ ಸಂಶಯವಿಲ್ಲ. ನಾನು ಈ ಬಗ್ಗೆ ಹೆಚ್ಚಿನ ಪೋಸ್ಟ್‌ಮಾರ್ಟಮ್ ಮಾಡುವುದಿಲ್ಲ, ಆದರೆ ಬ್ಯಾಟರ್‌ಗಳು ತಮ್ಮ ಯೋಜನೆಗಳೊಂದಿಗೆ ಬರಬೇಕು ಮತ್ತು ನ್ಯೂಜಿಲ್ಯಾಂಡ್ ಬ್ಯಾಟರ್‌ಗಳು ತೋರಿಸಿದ ಯೋಜನೆಗಳ ಮೇಲೆ ನಂಬಿಕೆ ಇಡಬೇಕು ”ಎಂದು  ಹೇಳಿಕೆ ನೀಡಿದ್ದಾರೆ.

“ಇದು ನಿರಾಶಾದಾಯಕವಾಗಿದೆ. ಇದನ್ನು ನಾವು ನಿರೀಕ್ಷಿಸಿದ್ದಲ್ಲ. ಅವರು ನಮಗಿಂತ ಉತ್ತಮವಾಗಿ ಆಡಿದ್ದರಿಂದ ನಾವು ಅವರಿಗೆ ಕ್ರೆಡಿಟ್ ನೀಡಬೇಕಾಗಿದೆ. ಆ ಸವಾಲುಗಳಿಗೆ ಸ್ಪಂದಿಸುವಲ್ಲಿ ನಾವು ವಿಫಲರಾಗಿದ್ದೇವೆ. ನಾವು ಬೋರ್ಡ್‌ನಲ್ಲಿ ರನ್ ಗಳಿಸುವಷ್ಟು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೇವೆ ಎಂದು ನಾನು ಭಾವಿಸುವುದಿಲ್ಲ. ಗೆಲ್ಲಲು ನೀವು 20 ವಿಕೆಟ್‌ಗಳನ್ನು ಕೀಳಬೇಕಾಗಿದ್ದು, ಬ್ಯಾಟರ್ಸ್ ರನ್ ಗಳನ್ನೂ ಗಳಿಸಬೇಕಾಗಿದೆ” ಎಂದರು.

“ಅವರನ್ನು 250ಕ್ಕೆ (ಮೊದಲ ಇನ್ನಿಂಗ್ಸ್‌ನಲ್ಲಿ) ನಿರ್ಬಂಧಿಸಿದ್ದು ಉತ್ತಮ ಹೋರಾಟ. ಆದರೆ, ಇದು ಸವಾಲಿನದು ಎಂದು ನಮಗೆ ತಿಳಿದಿತ್ತು. ಇದು ಬಹಳಷ್ಟು ಸುಲಭವಾದ ಪಿಚ್ ಆಗಿರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಸ್ವಲ್ಪ ಹತ್ತಿರವಾಗುತ್ತಿದ್ದರೆ ವಿಷಯಗಳು ಸ್ವಲ್ಪ ವಿಭಿನ್ನವಾಗಿರುತ್ತಿದ್ದವು” ಎಂದು ರೋಹಿತ್ ಹೇಳಿದರು.

ಸರಣಿ ಸೋತರೂ, ಕೆಲವೇ ದಿನಗಳಲ್ಲಿ ಮುಂಬೈನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ನೀಡಿದ ಕಪ್ತಾನ ”ನಾವು ವಾಂಖೆಡೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತೇವೆ. ಇದು ಸಾಮೂಹಿಕ ವೈಫಲ್ಯ. ನಾನು ಕೇವಲ ಬ್ಯಾಟರ್ಸ್ ಅಥವಾ ಬೌಲರ್‌ಗಳನ್ನು ದೂಷಿಸುವ ವ್ಯಕ್ತಿ ಅಲ್ಲ. ನಾವು ವಾಂಖೆಡೆಯಲ್ಲಿ ಉತ್ತಮ ಉದ್ದೇಶ, ಉತ್ತಮ ಆಲೋಚನೆಗಳು ಮತ್ತು ಉತ್ತಮ ವಿಧಾನಗಳೊಂದಿಗೆ ಆಡಲಿಳಿಯುತ್ತೇವೆ” ಎಂದು ವಿಶ್ವಾಸದ ನುಡಿಗಳನ್ನಾಡಿದರು.

ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್ ತಂಡ ಭಾರತವನ್ನು 113 ರನ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ  ಸರಣಿಯಲ್ಲಿ 2-0 ಅಂತರದಿಂದ ಸರಣಿ ಗೆದ್ದಿದೆ.

ಟಾಪ್ ನ್ಯೂಸ್

Kodagu-SP

Madikeri: ಅರೆಸುಟ್ಟ ಮೃತದೇಹ ಪ್ರಕರಣ: ಹಣಕ್ಕಾಗಿ ಸಂಚು ರೂಪಿಸಿ ಪತಿಯ ಹತ್ಯೆಗೈದ ಪತ್ನಿ!

1-shabari

Sabarimala;ಯಾತ್ರಾರ್ಥಿಗಳು ವಿಮಾನ ಕ್ಯಾಬಿನ್ ಬ್ಯಾಗೇಜ್‌ನಲ್ಲಿ ತೆಂಗಿನಕಾಯಿ ಒಯ್ಯಬಹುದು

1-isreel

India ನಮ್ಮ ಆತ್ಮರಕ್ಷಣೆ ಹಕ್ಕನ್ನು ಬೆಂಬಲಿಸಿದೆ: ಇಸ್ರೇಲ್ ರಾಯಭಾರಿ ರುವೆನ್ ಅಜರ್

1-hockey

Sultan of Johor Cup men’s hockey: ನ್ಯೂಜಿಲ್ಯಾಂಡ್ ಗೆ ಸೋಲುಣಿಸಿ ಕಂಚು ಗೆದ್ದ ಭಾರತ

1-aree

Deepavali; ಹಸುರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ: ಸಿಎಂ ಸಿದ್ದರಾಮಯ್ಯ

Jio-Bharath

Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!

DK SHI NEW

Bengaluru; ಅನಧಿಕೃತ ಕಟ್ಟಡಗಳೆಲ್ಲ ನೆಲಸಮ ಮಾಡುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi: ಮುಂಬಾ-ಬೆಂಗಾಲ್‌ ರೋಚಕ ಟೈ

Pro Kabaddi: ಮುಂಬಾ-ಬೆಂಗಾಲ್‌ ರೋಚಕ ಟೈ

14

Ranji Trophy: ಕರ್ನಾಟಕದ ಬೌಲಿಂಗ್‌ ದಾಳಿಗೆ ಬಿಹಾರ ತತ್ತರ

1-hockey

Sultan of Johor Cup men’s hockey: ನ್ಯೂಜಿಲ್ಯಾಂಡ್ ಗೆ ಸೋಲುಣಿಸಿ ಕಂಚು ಗೆದ್ದ ಭಾರತ

1

PAK vs ENG: 2021ರ ಬಳಿಕ ತವರಲ್ಲಿ ಟೆಸ್ಟ್‌ ಸರಣಿ ಗೆದ್ದ ಪಾಕ್‌!

INDvsNZ: India trapped by spin in Pune; Series defeat at home after 12 years

INDvsNZ: ಪುಣೆಯಲ್ಲಿ ಸ್ಪಿನ್‌ ಬಲೆಗೆ ಬಿದ್ದ ಭಾರತ; 12 ವರ್ಷಗಳ ಬಳಿಕ ತವರಲ್ಲಿ ಸರಣಿ ಸೋಲು

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Pro Kabaddi: ಮುಂಬಾ-ಬೆಂಗಾಲ್‌ ರೋಚಕ ಟೈ

Pro Kabaddi: ಮುಂಬಾ-ಬೆಂಗಾಲ್‌ ರೋಚಕ ಟೈ

14

Ranji Trophy: ಕರ್ನಾಟಕದ ಬೌಲಿಂಗ್‌ ದಾಳಿಗೆ ಬಿಹಾರ ತತ್ತರ

jenu nona

Belgavi; ಅರಣ್ಯಾಧಿಕಾರಿ, ಸಿಬಂದಿ ಮೇಲೆ ಜೇನು ನೊಣಗಳ ದಾಳಿ

Kodagu-SP

Madikeri: ಅರೆಸುಟ್ಟ ಮೃತದೇಹ ಪ್ರಕರಣ: ಹಣಕ್ಕಾಗಿ ಸಂಚು ರೂಪಿಸಿ ಪತಿಯ ಹತ್ಯೆಗೈದ ಪತ್ನಿ!

1-shabari

Sabarimala;ಯಾತ್ರಾರ್ಥಿಗಳು ವಿಮಾನ ಕ್ಯಾಬಿನ್ ಬ್ಯಾಗೇಜ್‌ನಲ್ಲಿ ತೆಂಗಿನಕಾಯಿ ಒಯ್ಯಬಹುದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.