‘ಡಾಗ್ ಆಫ್ ದಿ ಮಂತ್’: ಫೀಲ್ಡಿಂಗ್ ಮಾಡಿದ ನಾಯಿಗೆ ವಿಶೇಷ ಪುರಸ್ಕಾರ ನೀಡಿದ ಐಸಿಸಿ
Team Udayavani, Sep 14, 2021, 3:00 PM IST
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರತಿ ತಿಂಗಳು ಪ್ಲೇಯರ್ ಆಫ್ ದಿ ಮಂತ್ ಪುರಸ್ಕಾರ ನೀಡುವ ವಿಚಾರ ನಿಮಗೆ ತಿಳಿದೇ ಇದೆ. 2021ರಲ್ಲಿ ಐಸಿಸಿ ಈ ವಿಶೇಷ ಪುರಸ್ಕಾರದ ಯೋಜನೆ ಪ್ರಾರಂಭಿಸಿದೆ. ಆದರೆ ಈ ಬಾರಿ ಐಸಿಸಿ ಮತ್ತೊಂದು ಘೋಷಣೆ ಮಾಡಿದೆ. ಅದುವೇ ‘ಡಾಗ್ ಆಫ್ ದಿ ಮಂತ್’!
ಹೌದು, ಐರ್ಲೆಂಡಿನಲ್ಲಿ ನಡೆದ ಟಿ 20 ಮಹಿಳಾ ಸೆಮಿಫೈನಲ್ ಕ್ರಿಕೆಟ್ ಪಂದ್ಯಾವಳಿ ವೇಳೆ ಮೈದಾನಕ್ಕಿಳಿದು ಅದ್ಭುತವಾದ ಫೀಲ್ಡಿಂಗ್ ನಡೆಸಿದ ನಾಯಿಯನ್ನು ಐಸಿಸಿ ಪುರಸ್ಕರಿಸಿದೆ.
ಏನಿದು ಘಟನೆ: ಉತ್ತರ ಐರ್ಲೆಂಡಿನ ಮಗೇರಮೆಸಾನ್ನಲ್ಲಿರುವ ಬ್ರೆಡಿ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಬ್ರೆಡಿ ಮತ್ತು ಸಿಎಸ್ಎನ್ಐ ಮಹಿಳಾ ತಂಡಗಳ ನಡುವೆ ಆಲ್ ಐರ್ಲೆಂಡ್ ಟಿ20 ಕಪ್ ಸೆಮಿ ಫೈನಲ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಅಬ್ಬಿ ಲೆಖಿ ಚೆಂಡನ್ನು ಆಫ್ಸೈಡ್ ಗೆ ಹೊಡೆಡಿದ್ದಾರೆ ತಕ್ಷಣ ಫೀಲ್ಡರ್ ರನ್ ಔಟ್ ಮಾಡಲು ಚೆಂಡನ್ನು ವಿಕೆಟ್ ಕೀಪರ್ ಕೈಗೆ ಬಿಸಾಡಿದ್ದಾರೆ ಈ ವೇಳೆ ರನ್ ಔಟ್ ಮಾಡಲು ಚೆಂಡನ್ನು ವಿಕೆಟ್ ಗೆ ಎಸೆದ ಚೆಂಡು ಮಿಸ್ ಆಗಿ ಬೇರೆ ಕಡೆಗೆ ಹೋಗಿದೆ. ಅಷ್ಟು ಹೊತ್ತಿಗೆ ಮೈದಾನಕ್ಕೆ ಎಂಟ್ರಿ ಕೊಟ್ಟ ಸಣ್ಣ ಶ್ವಾನ ಓಡಿ ಬಂದು ಚೆಂಡನ್ನು ತನ್ನ ಬಾಯಿಯಿಂದ ಹಿಡಿದು ಮೈದಾನಕ್ಕೆ ಸುತ್ತು ಬಂದಿದೆ.
ಇದನ್ನೂ ಓದಿ:ಕಾಫಿನಾಡಿನ ಕೆಸರು ಗದ್ದೆ ಸ್ಪರ್ಧೆಗೆ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್..!
ಗಂಭೀರವಾಗಿ ಆಡುತ್ತಿದ್ದ ಆಟಗಾರರು ಒಮ್ಮೆ ದಂಗಾಗಿದ್ದಾರೆ. ಆದರೆ ಚೆಂಡನ್ನು ಪಡೆಯಲು ಫೀಲ್ಡರ್ ಗಳು ಶ್ವಾನದ ಹಿಂದೆ ಓಡಬೇಕಾಯಿತು, ಫೀಲ್ಡರ್ ಜೊತೆಗೆ ಶ್ವಾನದ ಮಾಲೀಕನೂ ಅದನ್ನು ಹಿಡಿಯುವ ಪ್ರಯತ್ನ ಮಾಡಿದ್ದಾನೆ. ಕೊನೆಗೆ ಶ್ವಾನ ನಾನ್ ಸ್ಟ್ರೈಕರ್ ಅಯೋಫೆ ಫಿಶರ್ ಅವರ ಬಳಿ ಬಂದು ಚೆಂಡನ್ನು ಬಿಟ್ಟಿದೆ.
Exceptional athleticism in the field ?pic.twitter.com/N5U1szC5ZI
— ICC (@ICC) September 13, 2021
ಶ್ವಾನದ ಅದ್ಬುತ ಫೀಲ್ಡಿಂಗ್ ನೋಡಿದ ಕ್ರಿಕೆಟ್ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆಮಿಫೈನಲ್ ಪಂದ್ಯಾವಳಿಯ ಮಧ್ಯದಲ್ಲಿ ಪ್ರೇಕ್ಷಕರಿಗೆ ಸ್ವಲ್ಪ ಸಮಯ ಮನರಂಜನೆ ಸಿಕ್ಕಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.