ಚೆಂಡಿನ ರೂಪ ಕೆಡಿಸಿದರೆ ಕಾದಿದೆ ಕಠಿನ ಶಿಕ್ಷೆ : ಐಸಿಸಿ
Team Udayavani, Jul 4, 2018, 6:00 AM IST
ದುಬಾೖ: ಇನ್ನು ಮುಂದೆ ಪಂದ್ಯದ ವೇಳೆ ಚೆಂಡಿನ ರೂಪ ಕೆಡಿಸಿದರೆ ಆಟಗಾರರು ಕಠಿನ ಶಿಕ್ಷೆ ಎದುರಿಸಲಿದ್ದಾರೆ. ಈ ಸಂಬಂಧ ಡಬ್ಲಿನ್ನಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ ವಾರ್ಷಿಕ ಮಹಾಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಚೆಂಡಿನ ರೂಪ ಕೆಡಿಸಿದರೆ ಆರು ಟೆಸ್ಟ್ಗಳಿಗೆ ಅಥವಾ 12 ಏಕದಿನ ಪಂದ್ಯಗಳಿಗೆ ನಿಷೇಧ ಹೇರಲಾಗುತ್ತದೆ. ಇದಲ್ಲದೇ ಮೈದಾನದಲ್ಲಿ ಉತ್ತಮ ನಡವಳಿಕೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಆಶ್ಲೀಲತೆ ಮತ್ತು ವೈಯಕ್ತಿಕ ನಿಂದನೆಯನ್ನು ಲೆವೆಲ್ 3 ಅಪರಾಧವೆಂದು ಪರಿಗಣಿಸಲು ಸಭೆ ನಿರ್ಧರಿಸಿದೆ. ಸ್ಮಿತ್, ವಾರ್ನರ್ ಮತ್ತು ಬ್ಯಾನ್ಕ್ರಾಫ್ಟ್ ಅವರು ಚೆಂಡಿನ ರೂಪ ಕೆಡಿಸಿದ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಈ ಅಪರಾಧವನ್ನು ಲೆವೆಲ್ 2ರಿಂದ ಮೂರಕ್ಕೇರಿಸಲು ನಿರ್ಧರಿಸಲಾಗಿದೆ.
ಆಟಗಾರರ ವರ್ತನೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಕ್ರಿಕೆಟ್ ಸಮಿತಿ ಮಾಡಿದ ಶಿಫಾರಸುಗಳನ್ನು ಬೆಂಬಲಿಸಲು ಐಸಿಸಿಯ ನಿರ್ದೇಶಕರು ಒಪ್ಪಿದ್ದಾರೆ ಎಂದು ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.