ಪಾಕಿಸ್ತಾನ ಮಣಿಸಿ ಬೀಗಿದ ಭಾರತ :ಡಕ್‌ವರ್ಥ್ ಪ್ರಕಾರ 124 ರನ್ ಜಯ
Team Udayavani, Jun 5, 2017, 8:49 AM IST
ಬರ್ಮಿಂಗ್‌ಹ್ಯಾಂ: ಮಳೆಯಿಂದ ಅಡಚಣೆ ಗೊಳಗಾದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಡಕ್‌ವರ್ಥ್ ನಿಯಮ ಪ್ರಕಾರ 124 ರನ್ ಗೆಲುವು ಪಡೆಯಿತು. ಈ ಮೂಲಕ ಕೂಟದಲ್ಲಿ ಶುಭಾರಂಭ ಪಡೆದಿದ್ದಲ್ಲದೆ “ಬಿ’ ಗುಂಪಿನಿಂದ ಸೆಮಿಫೈನಲ್‌ನತ್ತ ಮುಖಮಾಡಿದೆ. ಇದಕ್ಕಾಗಿ ಇನ್ನೊಂದು ಗೆಲುವಿನ ಅಗತ್ಯವಿದೆ.
ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತಕ್ಕೆ ಪದೇ ಪದೇ ಮಳೆ ಅಡಚಣೆ ಉಂಟು ಮಾಡಿತ್ತು. ಹೀಗಾಗಿ 48 ಓವರ್‌ಗೆ ಪಂದ್ಯವನ್ನು ಕಡಿತಗೊಳಿಸಲಾಯಿತು. ಹೀಗಿದ್ದರೂ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮ (91 ರನ್) ಹಾಗೂ ಶಿಖರ್ ಧವನ್ (68 ರನ್) ಮೊದಲ ವಿಕೆಟ್‌ಗೆ 136 ರನ್ ಜತೆಯಾಟವಾಡಿದರು. ಅಲ್ಲದೆ ಅಗ್ರ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ (81 *ರನ್) ಹಾಗೂ ಯುವರಾಜ್ ಸಿಂಗ್ ಸ್ಫೋಟಕ (53 ರನ್) ಸಿಡಿಸಿದರು. ಪರಿಣಾಮ ಭಾರತ 48 ಓವರ್‌ಗಳಲ್ಲಿ 3 ವಿಕೆಟ್‌ಗೆ 319 ರನ್ ಗಳಿಸಿತು. ಡಕ್‌ವರ್ಥ್ ನಿಯಮ ಪ್ರಕಾರ ಗೆಲುವಿಗೆ 324 ರನ್ ಗುರಿ ಪಡೆದ ಪಾಕ್ ಎಚ್ಚರಿಕೆಯಿಂದ ಆಡಿತು. ಈ ನಡುವೆ ಮತ್ತೆ ಮಳೆ ಸುರಿದುದರಿಂದ 41 ಓವರ್‌ಗೆ ಪಂದ್ಯವನ್ನು ಸೀಮಿತಗೊಳಿಸಲಾಯಿತು. ಈ ಪ್ರಕಾರವಾಗಿ 41 ಓವರ್‌ಗಳಲ್ಲಿ 289 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಪಾಕ್ ಭಾರತದ ನಿಖರ ದಾಳಿಗೆ ಸಿಲುಕಿ ಕೇವಲ 33.4 ಓವರ್‌ಗಳಲ್ಲಿ 164 ರನ್‌ಗೆ ಸರ್ವಪತನ ಕಂಡಿತು. ಭಾರತದ ಪರ ಉಮೇಶ್ ಯಾದವ್ 30ಕ್ಕೆ3 ಸರ್ವಾಧಿಕ ವಿಕೆಟ್ ಉರುಳಿಸಿದರು
ಸಿಡಿದೆದ್ದ ಭಾರತ
ಟಾಸ್ ಗೆದ್ದ ಪಾಕಿಸ್ತಾನ ಭಾರತವನ್ನು ಮೊದಲು ಬ್ಯಾಟಿಂಗಿಗೆ ಆಹ್ವಾನಿಸಿತ್ತು. ಕೊಹ್ಲಿ ಪಡೆ ಇದರ ಭರಪೂರ ಪ್ರಯೋಜನವೆತ್ತಿತು. ರೋಹಿತ್ -ಧವನ್ 24.3 ಓವರ್‌ಗಳ ಜತೆಯಾಟದಲ್ಲಿ ಮೊದಲ ವಿಕೆಟಿಗೆ 136 ರನ್ ಪೇರಿಸಿ ಗಟ್ಟಿಮುಟ್ಟಾದ ಅಡಿಪಾಯ ನಿರ್ಮಿಸಿದರು. ಕೊನೆಯಲ್ಲಿ ಸ್ಫೋಟಿಸಿದ ಹಾರ್ದಿಕ್ ಪಾಂಡ್ಯ ಆರೇ ಎಸೆತಗಳಿಂದ 20 ರನ್ ಬಾರಿಸಿದರು. ಇದರಲ್ಲಿ 3 ಸಿಕ್ಸರ್ ಒಳಗೊಂಡಿತ್ತು. ಇವೆಲ್ಲವೂ ಎಡಗೈ ಸ್ಪಿನ್ನರ್ ಇಮಾದ್ ವಾಸಿಮ್ ಪಾಲಾದ ಅಂತಿಮ ಓವರಿನ ಮೊದಲು 3 ಎಸೆತಗಳಲ್ಲಿ ಸಿಡಿದಿದ್ದವು. ಈ ಓವರಿನಲ್ಲಿ 23 ರನ್ ಹರಿದು ಬಂತು. ಅಂತಿಮ 4 ಓವರ್‌ಗಳಲ್ಲಿ 72 ರನ್ ದೋಚುವ ಮೂಲಕ ಭಾರತ, ಪಾಕ್ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿತು.
ಪಾಕ್ ಒದ್ದಾಟ
ಭಾರತದ ಗುರಿ ಬೆನ್ನಟ್ಟಿದ ಪಾಕ್ ಪರ ಆರಂಭಿಕ ಅಜರ್ ಅಲಿ (50 ರನ್) ಹಾಗೂ ಹಫೀಜ್ (33 ರನ್ ಸಿಡಿಸಲಷ್ಟೇ ಸಾಧ್ಯವಾಯಿತು. ಉಳಿದಂತೆ ಭಾರತದ ದಾಳಿಗೆ ಸಿಲುಕಿ ಪೆವಿಲಿಯನ್ ಪರೇಡ್ ನಡೆಸಿದರು.
ಪಂದ್ಯದ ತಿರುವು
ಚೇಸಿಂಗ್ ಮಾಡಿದ ಪಾಕ್ ಪರ ಉತ್ತಮವಾಗಿ ಆಡುತ್ತಿದ್ದ ಅಜರ್ ಅಲಿಯನ್ನು ರವೀಂದ್ರ ಜಡೇಜ 20.5ನೇ ಎಸೆತದಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು. ನಂತರ 23.3 ಓವರ್ ಆದಾಗ ಸ್ಫೋಟಕ ಬ್ಯಾಟ್ಸ್‌ಮನ್ ಶೋಯಿಬ್ ಮಲಿಕ್ ಅವರನ್ನು ಜಡೇಜ ಆಕರ್ಷಕವಾಗಿ ರನೌಟ್ ಮಾಡಿ ಪಂದ್ಯ ಪಾಕ್ ಕೈ ತಪ್ಪುವಂತೆ ಮಾಡಿದರು.
ಎಲ್ಲಾ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದ್ದೇವೆ. ಆರಂಭಿಕರಾಗಿ ರೋಹಿತ್, ಶಿಖರ್ ಆಟ ಉತ್ತಮವಾಗಿತ್ತು. ಯುವಿ ಆಟ ಅದ್ಭುತ. ವೇಗಿಗಳ ಮತ್ತು ಸ್ಪಿನ್ನರ್‌ಗಳ ಚುರುಕಿನ ದಾಳಿ ನಮ್ಮ ತಂಡದ ಶಕ್ತಿ.
● ವಿರಾಟ್ ಕೊಹ್ಲಿ, ಭಾರತ ನಾಯಕ
ಸ್ಕೋರ್ ಪಟ್ಟಿ
ಭಾರತ 48 ಓವರ್‌ಗೆ 319/3
ರೋಹಿತ್ ಶರ್ಮ ರನೌಟ್ 91
ಶಿಖರ್ ಧವನ್ ಸಿ ಅಜರ್ ಅಲಿ ಬಿ ಶಾದಾಬ್ 68
ವಿರಾಟ್ ಕೊಹ್ಲಿ ಅಜೇಯ 81
ಯುವರಾಜ್ ಸಿಂಗ್ ಎಲ್‌ಬಿ ಅಲಿ 53
ಹಾರ್ದಿಕ್ ಪಾಂಡ್ಯ ಅಜೇಯ 20
ಇತರೆ: 6
ವಿಕೆಟ್ ಪತನ: 1-136, 2-192, 3-285
ಬೌಲಿಂಗ್
ಮೊಹಮ್ಮದ್ ಆಮೀರ್ 8.1 1 32 0
ಇಮಾದ್ ವಾಸಿಮ್ 9.1 0 66 0
ಹಸನ್ ಅಲಿ 10 0 70 1
ವಹಾಬ್ ರಿಯಾಜ್ 8.4 0 87 0
ಶಾದಾಬ್ ಖಾನ್ 10 0 52 1
ಶೋಯಿಬ್ ಮಲಿಕ್ 2 0 10 0
ಪಾಕಿಸ್ತಾನ 33.4 ಓವರ್‌ಗೆ 164
ಅಜರ್ ಅಲಿ ಸಿ ಪಾಂಡ್ಯ ಬಿ ಜಡೇಜ 50
ಅಹ್ಮದ್ ಶೆಹಜದ್ ಎಲ್‌ಬಿ ಕುಮಾರ್ 12
ಬಾಬರ್ ಅಜಾಮ್ ಸಿ ಜಡೇಜ ಬಿ ಯಾದವ್ 8
ಮೊಹಮ್ಮದ್ ಹಫೀಜ್ ಸಿ ಕುಮಾರ್ ಬಿ ಜಡೇಜ 33
ಶೋಯಿಬ್ ಮಲಿಕ್ ರನೌಟ್ 15
ಸಫ್ರಾìಜ್ ಅಹ್ಮದ್ ಸಿ ಧೋನಿ ಬಿ ಪಾಂಡ್ಯ 15
ಇಮದ್ ವಾಸಿಂ ಸಿ ಜಾಧವ್ ಬಿ ಪಾಂಡ್ಯ 0
ಶದಬ್ ಖಾನ್ ಅಜೇಯ 14
ಮೊಹಮ್ಮದ್ ಅಮೀರ್ ಸಿ ಜಡೇಜ ಬಿ ಯಾದವ್ 9
ಹಸನ್ ಅಲಿ ಸಿ ಧವನ್ ಬಿ ಯಾದವ್ 0
ವಹಾಬ್ ರಿಯಾಜ್ (ಆಡಿಲ್ಲ) –
ವಿಕೆಟ್: 1-47, 2-61, 3-91, 4-114, 5-131,
6-135, 7-151, 8-164, 9-164
ಬೌಲಿಂಗ್
ಭುವನೇಶ್ವರ್ ಕುಮಾರ್ 5 1 23 1
ಉಮೇಶ್ ಯಾದವ್ 7.4 1 30 3
ಜಸ್‌ಪ್ರೀತ್ ಬುಮ್ರಾ 5 0 23 0
ಹಾರ್ದಿಕ್ ಪಾಂಡ್ಯ 8 0 43 2
ರವೀಂದ್ರ ಜಡೇಜ 8 0 43 2
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.