ಆತಿಥೇಯ ಇಂಗ್ಲೆಂಡಿಗೆ 8 ವಿಕೆಟ್ ಸೋಲು: ಪಾಕಿಸ್ಥಾನ ಫೈನಲಿಗೆ
Team Udayavani, Jun 15, 2017, 3:02 PM IST
ಕಾರ್ಡಿಫ್: ಅಸಾಮಾನ್ಯ ಆಟದ ಪ್ರದರ್ಶನ ನೀಡಿದ ಪಾಕಿಸ್ಥಾನ ತಂಡವು ಬುಧವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿ ಚೊಚ್ಚಲ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಹಂತಕ್ಕೇರಿತು.
ಪಾಕಿಸ್ಥಾನ ಬೌಲರ್‌ಗಳ ಮತ್ತೂಂದು ವೃತ್ತಿಪರ ನಿರ್ವಹಣೆಯಿಂದಾಗಿ ಇಂಗ್ಲೆಂಡ್ ಕೇವಲ 211 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಪಾಕಿಸ್ಥಾನ 37.1 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟದಲ್ಲಿ 215 ರನ್ ಪೇರಿಸಿ ಜಯಭೇರಿ ಬಾರಿಸಿತು.
ಪಾಕಿಸ್ಥಾನ ತಂಡವು ರವಿವಾರ ನಡೆಯುವ ಫೈನಲ್ ಹೋರಾಟದಲ್ಲಿ ಭಾರತ ಅಥವಾ ಬಾಂಗ್ಲಾದೇಶವನ್ನು ಎದುರಿಸಲಿದೆ. ಇದೇ ದಿನ ವಿಶ್ವ ಹಾಕಿ ಲೀಗ್ ಕೂಟದಲ್ಲಿ ಭಾರತ ಮತ್ತು ಪಾಕಿಸ್ಥಾನ ಮುಖಾಮುಖೀಯಾಗುತ್ತಿದೆ. ಕ್ರಿಕೆಟ್‌ನಲ್ಲೂ ಭಾರತ ಮತ್ತು ಪಾಕಿಸ್ಥಾನ ಸೆಣಸಾಡಬಹುದೆಂದು ನಿರೀಕ್ಷಿಸಲಾಗಿದೆ.
ಭರ್ಜರಿ ಆರಂಭ
ಪಾಕಿಸ್ಥಾನದ ಆರಂಭಿಕರಾದ ಅಜರ್ ಅಲಿ ಮತ್ತು ಫಾಕರ್ ಜಮಾನ್ ಭರ್ಜರಿ ಆಟವಾಡಿ ತಂಡ ಸುಲಭವಾಗಿ ಗೆಲ್ಲುವ ಸೂಚನೆ ನೀಡಿದರು. ಅವರಿಬ್ಬರು ಮೊದಲ ವಿಕೆಟಿಗೆ 21.1 ಓವರ್‌ಗಳಲ್ಲಿ 118 ರನ್ ಪೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಬಿರುಸಿನ ಆಟವಾಡಿದ ಜಮಾನ್ 58 ಎಸೆತ ಎದುರಿಸಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದರು. ಅಜರ್ ಅಲಿ ತಾಳ್ಮೆಯ ಆಟವಾಡಿದರಲ್ಲದೇ ಬಾಬರ್ ಅಜಮ್ ಜತೆ ದ್ವಿತೀಯ ವಿಕೆಟಿಗೆ ಮತ್ತೆ ಒಳ್ಳೆಯ ಜತೆಯಾಟದಲ್ಲಿ ಪಾಲ್ಗೊಂಡರು. 100 ಎಸೆತ ಎದುರಿಸಿದ ಅವರು 76 ರನ್ ಹೊಡೆದರು.
ಬಾಬರ್ ಮತ್ತು ಮೊಹಮ್ಮದ್ ಹಫೀಜ್ ಮತ್ತೆ ಕುಸಿತ ಆಗದಂತೆ ನೋಡಿಕೊಂಡು ತಂಡಕ್ಕೆ ಭರ್ಜರಿ ಜಯ ತಂದಕೊಟ್ಟರು. ಬಾಬರ್ 38 ಮತ್ತು ಹಫೀಜ್ 31 ರನ್ ಗಳಿಸಿ ಅಜೇಯರಾಗಿ ಉಳಿದರು.
ಈ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆಯಿತು. ಆದರೆ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡ ಕಾರಣ ಆತಿಥೇಯ ತಂಡ 211 ರನ್ನಿಗೆ ಆಲೌಟಾಯಿತು. ಇದೇ ಮೈದಾನದಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧ ನಡೆದಿದ್ದ ಅಂತಿಮ ಲೀಗ್ ಪಂದ್ಯದಲ್ಲಿ ಸಾಹಸದ ಬ್ಯಾಟಿಂಗ್ ಪ್ರದರ್ಶಿಸಿ ಗೆಲುವು ಒಲಿಸಿಕೊಂಡಿದ್ದ ಪಾಕಿಸ್ಥಾನ ಈ ಪಂದ್ಯದಲ್ಲಿಯೂ ಅದೇ ರೀತಿಯ ಆಟ ಪ್ರದರ್ಶಿಸಿದರೆ ಗೆಲುವು ತನ್ನದಾಗಿಸಿಕೊಳ್ಳುವ ಸಾಧ್ಯತೆಯಿದೆ.
ಇನ್ನಿಂಗ್ಸ್ ಆರಂಭಿಸಿದ ಜಾನಿ ಬೇರ್‌ಸ್ಟೊ ಮತ್ತು ಅಲೆಕ್ಸ್ ಹೇಲ್ಸ್ ಬಿರುಸಿನ ಆಟಕ್ಕೆ ಇಳಿದರು. ಈ ಮೂಲಕ ಬೃಹತ್ ಮೊತ್ತ ಪೇರಿಸುವ ಸೂಚನೆಯಿತ್ತರು. ಪಾಕ್ ದಾಳಿಯನ್ನು ಮೆಟ್ಟಿ ನಿಂತ ಅವರಿಬ್ಬರು 5.5 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 34 ರನ್ ಪೇರಿಸಿದರು. ಈ ಹಂತದಲ್ಲಿ 13 ರನ್ ಗಳಿಸಿದ ಹೇಲ್ಸ್ ಔಟಾದರು. ಬೇರ್‌ಸ್ಟೋ ಮತ್ತು ಜೋ ರೂಟ್ ಆಬಳಿಕ ತಾಳ್ಮೆಯ ಆಟವಾಡಿ ರನ್ ಏರಿಸತೊಡಗಿದರು. ದ್ವಿತೀಯ ವಿಕೆಟಿಗೆ 46 ರನ್ ಹರಿದು ಬಂತು. ಬೇರ್‌ಸ್ಟೋ 57 ಎಸೆತ ಎದುರಿಸಿ 4 ಬೌಂಡರಿ ನೆರವಿನಿಂದ 43 ರನ್ ಗಳಿಸಿ ಎರಡನೆಯವರಾಗಿ ಔಟಾದರು.
ರೂಟ್ ಮತ್ತು ನಾಯಕ ಇವೋನ್ ಮಾರ್ಗನ್ ಮತ್ತೆ ಎಚ್ಚರಿಕೆಯ ಆಟವಾಡಿ ಮೂರನೇ ವಿಕೆಟಿಗೆ 48 ರನ್ ಪೇರಿಸಿದರು. ಈ ಜೋಡಿ ಮುರಿದ ಬಳಿಕ ಇಂಗ್ಲೆಂಡ್ ಕುಸಿಯುತ್ತ ಹೋಯಿತು. ಪಾಕಿಸ್ಥಾನ ಮೇಲುಗೈ ಸಾಧಿಸಿತು. ಹಸನ್ ಅಲಿ, ಜುನೇದ್ ಖಾನ್ ಮತ್ತು ರುಮಾನ್ ರಯೀಸ್ ಅವರ ಬಿಗು ದಾಳಿಗೆ ಇಂಗ್ಲೆಂಡ್ ನಲುಗಿತು.
46 ರನ್ ಗಳಿಸಿದ ರೂಟ್ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅಗ್ರ ಕ್ರಮಾಂಕದ ನಾಲ್ಕು ಮಂದಿ ಸಾಧಾರಣ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ ಉಳಿದವರೆಲ್ಲ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು. ಆಸ್ಟ್ರೇಲಿಯ ವಿರುದ್ಧ ಭರ್ಜರಿ ಶತಕ ದಾಖಲಿಸಿ ತಂಡದ ಗೆಲುವಿಗೆ ಕಾರಣರಾಗಿದ್ದ ಬೆನ್ ಸ್ಟೋಕ್ಸ್ 34 ರನ್ ಗಳಿಸಲಷ್ಟೇ ಶಕ್ತರಾದರು.
ಪಾಕ್ ದಾಳಿಯ ತೀವ್ರತೆಗೆ ತತ್ತರಿಸಿದ ಇಂಗ್ಲೆಂಡ್ 70 ರನ್ನಿಗೆ ಕೊನೆಯ 7 ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ 141 ರನ್ನಿಗೆ 4 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ 211 ರನ್ ತಲುಪುತ್ತಲೇ ಆಲೌಟಾಯಿತು.
ಬಿಗು ದಾಳಿ ಸಂಘಟಿಸಿದ ಹಸನ್ ಅಲಿ ತನ್ನ 10 ಓವರ್‌ಗಳ ದಾಳಿಯಲ್ಲಿ 35 ರನ್ನಿಗೆ 3 ವಿಕೆಟ್ ಕಿತ್ತರೆ ಜುನೇದ್ ಖಾನ್ ಮತ್ತು ರುಮನ್ ರಯೀಸ್ ತಲಾ ಎರಡು ವಿಕೆಟ್ ಕಿತ್ತರು.
ಸ್ಕೋರುಪಟ್ಟಿ
ಇಂಗ್ಲೆಂಡ್
ಜಾನಿ ಬೇರ್‌ಸ್ಟೋ ಸಿ ಹಫೀಜ್ ಬಿ ಹಸನ್ 43
ಅಲೆಕ್ಸ್ ಹೇಲ್ಸ್ ಸಿ ಬಾಬರ್ ಬಿ ರಯೀಸ್ 13
ಜೋ ರೂಟ್ ಸಿ ಸಫìರಾಜ್ ಬಿ ಶಾದಾಬ್ 46
ಇವೋನ್ ಮಾರ್ಗನ್ ಸಿ ಸಫìರಾಜ್ ಬಿ ಹಸನ್ 33
ಬೆನ್ ಸ್ಟೋಕ್ಸ್ ಸಿ ಹಫೀಜ್ ಬಿ ಹಸನ್ 34
ಜೋಸ್ ಬಟ್ಲರ್ ಸಿ ಸಫìರಾಜ್ ಬಿ ಜುನೇದ್ 4
ಮೋಯಿನ್ ಅಲಿ ಸಿ ಜಮಾನ್ ಬಿ ಜುನೇದ್ 11
ಅದಿಲ್ ರಶೀದ್ ರನೌಟ್ 7
ಲಿಯಮ್ ಪ್ಲಂಕೆಟ್ ಸಿ ಅಜರ್ ಬಿ ರಯೀಸ್ 9
ಮಾರ್ಕ್ ವುಡ್ ರನೌಟ್ 3
ಜೇಕ್ ಬಾಲ್ ಔಟಾಗದೆ 2
ಇತರ: 6
ಒಟ್ಟು (49.5 ಓವರ್‌ಗಳಲ್ಲಿ ಆಲೌಟ್) 211
ವಿಕೆಟ್ ಪತನ: 1-34, 2-80, 3-128, 4-141, 5-148, 6-162, 7-181, 8-201, 9-206
ಬೌಲಿಂಗ್:
ಜುನೇದ್ ಖಾನ್ 8.5-0-42-2
ರುಮಾನ್ ರಯೀಸ್ 9-0-44-2
ಇಮದ್ ವಸೀಮ್ 5-0-16-0
ಶಾದಾಮ್ ಖಾನ್ 9-0-40-1
ಹಸನ್ ಅಲಿ 10-0-35-3
ಮೊಹಮ್ಮದ್ ಹಫೀಜ್ 8-0-33-0
ಪಾಕಿಸ್ಥಾನ
ಅಜರ್ ಅಲಿ ಬಿ ಬಾಲ್ 76
ಫಾಕರ್ ಜಮಾನ್ ಸ್ಟಂಪ್ಡ್ ಬಟ್ಲರ್ ಬಿ ರಶೀದ್ 57
ಬಾಬರ್ ಅಜಮ್ ಔಟಾಗದೆ 38
ಮೊಹಮ್ಮದ್ ಹಫೀಜ್ ಔಟಾಗದೆ 31
ಇತರ: 13
ಒಟ್ಟು (37.1 ಓವರ್‌ಗಳಲ್ಲಿ 2 ವಿಕೆಟಿಗೆ) 215
ವಿಕೆಟ್ ಪತನ: 1-118, 2-173
ಬೌಲಿಂಗ್:
ಮಾರ್ಕ್ ವುಡ್ 8-1-37-0
ಜೇಕ್ ಬಾಲ್ 8-0-37-1
ಬೆನ್ ಸ್ಟೋಕ್ಸ್ 3.1-0-38-0
ಲಿಯಮ್ ಪ್ಲಂಕೆಟ್ 6-0-33-0
ಆದಿಲ್ ರಶೀದ್ 10-0-54-1
ಮೋಯಿನ್ ಅಲಿ 2-0-15-0
ಪಂದ್ಯಶ್ರೇಷ್ಠ: ಹಸನ್ ಅಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.