ಪಾಕ್ ವಿರುದ್ಧ ಭಾರತ ಫೇವರಿಟ್; ಇಂಗ್ಲೆಂಡಿಗೆ ಚಾಂಪಿಯನ್ ಪಟ್ಟ!
Team Udayavani, Jun 1, 2017, 11:07 AM IST
ಇದು ಬುಕ್ಕಿಗಳ ಲೆಕ್ಕಾಚಾರ…
ಲಂಡನ್: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಕ್ಷಣಗಣನೆ ಆರಂಭವಾಗಿರು ವಂತೆಯೇ ಬುಕ್ಕಿಗಳು ಬಾಲ ಬಿಚ್ಚಿದ್ದಾರೆ. ಈ ಕೂಟದಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗುತ್ತದೆಂದೂ, ಪಾಕಿಸ್ಥಾನ ವಿರುದ್ಧ ಭಾರತ ಗೆಲ್ಲುವ ತಂಡವೆಂದೂ ತೀರ್ಮಾನಿಸಿ “ಬಾಜಿ ಕಟ್ಟಿ ನೋಡು ಬಾರಾ…’ ಎನ್ನುತ್ತಿದ್ದಾರೆ!
ಈ ಪಂದ್ಯಾವಳಿಯ ದೊಡ್ಡ ಪಂದ್ಯವೆಂದರೆ ಭಾರತ-ಪಾಕಿಸ್ಥಾನ ನಡುವಿನ ರವಿವಾರದ ಮುಖಾಮುಖೀ. ಬರ್ಮಿಂಗಂನಲ್ಲಿ ನಡೆಯಲಿ ರುವ ಈ ಗ್ರೂಪ್ “ಬಿ’ ಹಣಾಹಣಿಯಲ್ಲಿ ಭಾರತವೇ ಗೆಲ್ಲುವ ತಂಡವೆಂದು ಬುಕ್ಕಿಗಳು ಲೆಕ್ಕ ಹಾಕಿದ್ದಾರೆ. ಆ ಪ್ರಕಾರ ಕೊಹ್ಲಿ ತಂಡದ ಮೇಲೆ 50 ಪೈಸೆಯನ್ನೂ, ಪಾಕಿಸ್ಥಾನದ ಮೇಲೆ 1.44 ರೂ. ಮೊತ್ತವನ್ನು ನಿಗದಿ ಮಾಡಿದ್ದಾರೆ.
ಭಾರತಕ್ಕೆ 4ನೇ ಸ್ಥಾನ!
ಬುಕ್ಕಿಗಳ ಪ್ರಕಾರ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಆತಿಥೇಯ ಇಂಗ್ಲೆಂಡ್. ಆನಂತರದ 2 ಸ್ಥಾನ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ಪಾಲಾಗಿದೆ.
ಭಾರತಕ್ಕೇನಿದ್ದರೂ 4ನೇ ಸ್ಥಾನ.
ಬುಕ್ಕಿಗಳ ಈ ಲೆಕ್ಕಾಚಾರವನ್ನು ವೆಬ್‌ಸೈಟ್ ಒಂದು ಪ್ರಕಟಿಸಿದ್ದು, ತನ್ನ ಟ್ವೀಟ್ ಖಾತೆಗೂ ಲಿಂಕ್ ಕೊಟ್ಟಿದೆ.
ಬುಕ್ಕಿಗಳು ಇಂಗ್ಲೆಂಡ್ ಮೇಲೆ 4 ರೂ., ಆಸ್ಟ್ರೇಲಿಯ ಮೇಲೆ 4.4 ರೂ., ದಕ್ಷಿಣ ಆಫ್ರಿಕಾ ಮೇಲೆ 4.7 ರೂ. ಹಾಗೂ ಭಾರತದ ಮೇಲೆ 5.9 ರೂ. ಬೆಲೆ ನಿಗದಿಗೊಳಿಸಿದ್ದಾರೆ. ಬಾಂಗ್ಲಾ ದೇಶಕ್ಕೆ ಕೊನೆಯ ಸ್ಥಾನ ಮೀಸಲಿರಿಸಿದ್ದಾರೆ.
ಇಂಗ್ಲೆಂಡ್ ಮೇಲೆ ಯಾರಾದರೂ ಒಂದು ಸಾವಿರ ರೂ. ಬೆಟ್ಟಿಂಗ್ ನಡೆಸಿದರೆ, ಇಂಗ್ಲೆಂಡ್ ಗೆದ್ದ ಬಳಿಕ ಅವರಿಗೆ ರೂ. 4ರ ಪ್ರಕಾರ 4 ಸಾವಿರ ರೂ. ಲಭಿಸಲಿದೆ. ಇದೇ ಮೊತ್ತವನ್ನು “ಅಂತಿಮ ಸ್ಥಾನಿ’ ಬಾಂಗ್ಲಾದೇಶದ ಮೇಲೆ ಬೆಟ್ ಮಾಡಿದರೆ, ಅಕಸ್ಮಾತ್ ಬಾಂಗ್ಲಾ ಚಾಂಪಿಯನ್ ಆಗಿ ಮೂಡಿಬಂದರೆ ಆಗ ಬೆಟ್ ಮಾಡಿದವರಿಗೆ ಆರೂವರೆ ಲಕ್ಷ ರೂ. ಸಿಗುತ್ತದೆ. ಇದು ಬೆಟ್ಟಿಂಗ್ ರೀತಿ.
“ಎ’ ವಿಭಾಗದಿಂದ ಇಂಗ್ಲೆಂಡ್, ಆಸ್ಟ್ರೇ ಲಿಯ; “ಬಿ’ ವಿಭಾಗದಿಂದ ಭಾರತ, ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸಲಿವೆ ಎಂಬುದು ಬುಕ್ಕಿಗಳ ಲೆಕ್ಕಾಚಾರ. ಈ ಕೂಟ ದಲ್ಲಿ ಡೇವಿಡ್ ವಾರ್ನರ್ ಅತ್ಯಧಿಕ ರನ್ ಬಾರಿಸುತ್ತಾರೆಂದೂ, ಮಿಚೆಲ್ ಸ್ಟಾರ್ಕ್ ಅತ್ಯಧಿಕ ವಿಕೆಟ್ ಕೀಳುತ್ತಾರೆಂದೂ ಬುಕ್ಕಿಗಳು ಲೆಕ್ಕ ಹಾಕಿದ್ದಾರೆ. ಬೇಕಿದ್ದರೆ ಇದಕ್ಕೂ ಬೆಟ್ ಕಟ್ಟಬಹುದು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.