World Cup; ಆಸ್ಟ್ರೇಲಿಯ ವಿರುದ್ಧ ಜಯದೊಂದಿಗೆ ಭಾರತದ ಯಶಸ್ವಿ ಆರಂಭ
2 ರನ್ ಆಗುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿದ್ದ ರೋಹಿತ್ ಬಳಗ !
Team Udayavani, Oct 8, 2023, 9:55 PM IST
ಚೆನ್ನೈ:ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ನಡೆದ ವಿಶ್ವಕಪ್ ಪಂದ್ಯಾವಳಿಯ 5ನೇ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ 6 ವಿಕೆಟ್ ಗಳ ಜಯ ಸಾಧಿಸಿ ವಿಶ್ವಕಪ್ ಅಭಿಯಾನ ಯಶಸ್ವಿಯಾಗಿ ಆರಂಭಿಸಿದೆ.
ಇದನ್ನೂ ಓದಿ: World Cup 2023; ಸ್ಪಿನ್ ದಾಳಿಗೆ ಪರದಾಡಿದ ಆಸೀಸ್ ಬ್ಯಾಟರ್ ಗಳು; ಭಾರತಕ್ಕೆ 200 ರನ್ ಗುರಿ
ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ 49.3 ಓವರ್ ಗಳಲ್ಲಿ 199 ರನ್ ಗಳಿಗೆ ಆಲೌಟಾಯಿತು.
ಗುರಿ ಬೆನ್ನಟ್ಟಿದ ಭಾರತ 2 ರನ್ ಆಗುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಭಾರೀ ಆಘಾತಕ್ಕೆ ಸಿಲುಕಿತು. ನಾಯಕ ರೋಹಿತ್ ಶರ್ಮ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ನಿರ್ಗಮಿಸಿದರು. ಆ ಬಳಿಕ ಜವಾಬ್ದಾರಿಯುತ ಆಟವಾಡಿದ ಅನುಭವಿ ಕೊಹ್ಲಿ ಮತ್ತು ರಾಹುಲ್ ಗೆಲುವನ್ನು ತಂದಿಡುವಲ್ಲಿ ಯಶಸ್ವಿಯಾದರು.
ಸಮಯೋಚಿತ ತಾಳ್ಮೆಯ ಅಮೋಘ ಆತ ಪ್ರದರ್ಶಿಸಿದ ವಿರಾಟ್ ಕೊಹ್ಲಿ 116 ಎಸೆತ ಗಳಲ್ಲಿ 85 ರನ್ ಗಳಿಸಿ ಔಟಾದರು. ಹ್ಯಾಜಲ್‌ವುಡ್ ಎಸೆದ ಚೆಂಡನ್ನು ಲಬು ಶೇನ್ ಅವರ ಕೈಗಿತ್ತು ನಿರ್ಗಮಿಸಿದರು. ಕೊಹ್ಲಿ 6 ಬೌಂಡರಿ ಬಾರಿಸಿದ್ದರು.
ಕೊಹ್ಲಿ ಅವರೊಂದಿಗೆ ಗೆಲುವಿನ ಇನ್ನಿಂಗ್ಸ್ ಆಡಿದ ಭರವಸೆ ಕೆ.ಎಲ್. ರಾಹುಲ್ ಅಜೇಯ 97 ರನ್ ಗಳಿಸಿದರು. 115 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಆಕರ್ಷಕ ಸಿಕ್ಸರ್ ಗಳು ರಾಹುಲ್ ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿತ್ತು. ಹಾರ್ದಿಕ್ ಪಾಂಡ್ಯ 11 ರನ್ ಗಳಿಸಿದರು.ಹೇಝಲ್ ವುಡ್ 3 ವಿಕೆಟ್ ಪಡೆದರು.
41.2 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ರೋಹಿತ್ ಬಳಗ ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಅಭಿಯಾನದ ಮೊದಲ ಪಂದ್ಯದಲ್ಲಿ ಸ್ಮರಣೀಯ ಜಯ ತನ್ನದಾಗಿಸಿಕೊಂಡಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.