ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಮೂವರ ರೇಸ್
Team Udayavani, Jan 5, 2020, 11:45 PM IST
ದುಬಾೖ: 2019ರ ಐಸಿಸಿ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೆ ಮೂವರು ರೇಸ್‌ನಲ್ಲಿದ್ದಾರೆ. ಇವರಲ್ಲಿ ಭಾರತದ ರೋಹಿತ್ ಶರ್ಮ ಕೂಡ ಸೇರಿದ್ದಾರೆ. ಉಳಿದಿಬ್ಬರೆಂದರೆ ಆಸ್ಟ್ರೇಲಿಯದ ವೇಗಿ ಪ್ಯಾಟ್ ಕಮಿನ್ಸ್ ಮತ್ತು ಇಂಗ್ಲೆಂಡಿನ ಆಲ್‌ರೌಂಡರ್ ಬೆನ್ ಸ್ಟೋಕ್ಸ್.
ಕಮಿನ್ಸ್ 99 ವಿಕೆಟ್ ಸಾಹಸ
ಪ್ಯಾಟ್ ಕಮಿನ್ಸ್ 2019ರ ಅಂತಾ ರಾಷ್ಟ್ರೀಯ ಪಂದ್ಯಗಳಿಂದ ಒಟ್ಟು 99 ವಿಕೆಟ್ ಹಾರಿಸಿ ಅಗ್ರಸ್ಥಾನ ಅಲಂಕರಿ ಸಿದ್ದಾರೆ. ಟೆಸ್ಟ್‌ನಲ್ಲಿ 59, ಏಕದಿನದಲ್ಲಿ 31 ಹಾಗೂ ಟಿ20ಯಲ್ಲಿ 9 ವಿಕೆಟ್ ಕಿತ್ತ ಸಾಧನೆ ಕಮಿನ್ಸ್ ಅವರದು. ವಿಶ್ವಕಪ್‌ನಲ್ಲೂ ಮೆರೆದಾಡಿದ ಕಮಿನ್ಸ್ 10 ಪಂದ್ಯಗಳಿಂದ 14 ವಿಕೆಟ್ ಉರುಳಿಸಿದ್ದರು.
ಸ್ಟೋಕ್ಸ್ ಆಲ್‌ರೌಂಡ್ ಶೋ
ಬೆನ್ ಸ್ಟೋಕ್ಸ್ ತಮ್ಮ ಆಲ್‌ರೌಂಡ್ ಸಾಹಸದಿಂದ ಇಂಗ್ಲೆಂಡಿಗೆ ಮೊದಲ ವಿಶ್ವಕಪ್ ತಂದಿತ್ತದ್ದು ಈಗ ಇತಿಹಾಸ. 2019ರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1,500 ರನ್ನಿನ ಜತೆಯಲ್ಲೇ 30 ವಿಕೆಟ್ ಉರುಳಿಸಿದ್ದಾರೆ. ಅಂತಿಮ ವಿಕೆಟಿಗೆ ಜಾಕ್ ಲೀಚ್ ಜತೆಗೂಡಿ ಆ್ಯಶಸ್ ಸರಣಿಯ ಹೇಡಿಂಗ್ಲೆ ಟೆಸ್ಟ್ ಪಂದ್ಯವನ್ನು ಗೆಲ್ಲಿಸಿದ್ದು ಸ್ಟೋಕ್ಸ್ ಅವರ ಮತ್ತೂಂದು ಅಮೋಘ ನಿರ್ವಹಣೆ.
ರೋಹಿತ್ ಬ್ಯಾಟಿಂಗ್ ವೈಭವ
ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟಿನ ಆರಂಭಿಕನಾಗಿ ಭಡ್ತಿ ಪಡೆದು ಮಿಂಚಿದ ವರ್ಷ 2019. ಕೇವಲ 5 ಟೆಸ್ಟ್‌ಗಳಲ್ಲಿ 92.66ರ ಸರಾಸರಿಯೊಂದಿಗೆ 556 ರನ್ ಪೇರಿಸಿದ್ದು ರೋಹಿತ್ ಸಾಧನೆ. 28 ಏಕದಿನ ಪಂದ್ಯಗಳಿಂದ 1,490 ರನ್ ಬಾರಿಸಿ ಮೆರೆದಾಡಿದರು. ವಿಶ್ವಕಪ್ ಒಂದರಲ್ಲಿ ಸರ್ವಾಧಿಕ 5 ಶತಕ ಬಾರಿಸಿದ ವಿಶ್ವದಾಖಲೆಗೂ ಪಾತ್ರರಾದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.