ಪಾಕ್ ಹಳ್ಳಿ ಕ್ರಿಕೆಟಿನ ಔಟ್ ಗೊಂದಲಕ್ಕೆ ಐಸಿಸಿ ಪರಿಹಾರ!
Team Udayavani, May 24, 2018, 6:00 AM IST
ಕರಾಚಿ: ಪಾಕಿಸ್ಥಾನದ ಹಳ್ಳಿಯೊಂದರಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದು ಈಗ ವಿಶ್ವದಾದ್ಯಂತ ಸ್ವಾರಸ್ಯಕರ ಚರ್ಚೆಗೆ ಕಾರಣವಾಗಿದೆ. ಬಹುತೇಕ ಗದ್ದೆ ಬಯಲಿನಲ್ಲಿ ನಡೆದ ಕ್ರಿಕೆಟ್ ಪಂದ್ಯವದು. ಅದರ ವೀಡಿಯೋವನ್ನು ಹಮ್ಜಾ ಎಂಬ ಅಭಿಮಾನಿ ಐಸಿಸಿ ಫೇಸ್‌ಬುಕ್ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಅಲ್ಲಿ ಉಂಟಾದ ಗೊಂದಲಕ್ಕೆ ಐಸಿಸಿ ಉತ್ತರಿಸಿ ಕುತೂಹಲಕಾರಿ ಚರ್ಚೆ ಹುಟ್ಟುಹಾಕಿದೆ.
ಆಗಿದ್ದಿಷ್ಟೇ… ಬೌಲರ್ ಒಬ್ಬ ಓಡಿ ಬಂದು ಚೆಂಡು ಎಸೆಯುತ್ತಾನೆ. ಬ್ಯಾಟ್ಸ್‌ಮನ್ ಆ ಎಸೆತವನ್ನು ಬಾರಿಸುತ್ತಾನೆ. ಬ್ಯಾಟ್‌ಗೆ ತಾಗಿ ಸ್ವಲ್ಪ ಮುಂದೆ ಹೋದ ಚೆಂಡು ಜೋರಾದ ಗಾಳಿಯಿಂದ ಹಿಂದಕ್ಕೆ ಬರುತ್ತದೆ. ಬ್ಯಾಟ್ಸ್ ಮನ್ ಚೆಂಡನ್ನು ಬ್ಯಾಟ್‌ನಿಂದ ತಡೆಯಲು ಹರಸಾಹಸಪಟ್ಟರೂ ಸಾಧ್ಯವಾಗಲಿಲ್ಲ. ಚೆಂಡು ಆತನ ಕಾಲಿನಡಿಯಿಂದ ನುಸುಳಿಕೊಂಡು ಸ್ಟಂಪ್‌ಗೆ ಬಡಿದಿದೆ. ಇದರಿಂದ ತಬ್ಬಿಬ್ಟಾದ ಬ್ಯಾಟ್ಸ್‌ಮನ್ ಸ್ವಲ್ಪ ವಾದ ಮಾಡಿದರೂ ಅನಂತರ ಔಟಾದುದನ್ನು ಒಪ್ಪಿಕೊಳ್ಳುತ್ತಾನೆ. ಗಾಳಿಯ ಕಾರಣ ಚೆಂಡು ಹಿಂದಕ್ಕೆ ಚಲಿಸಿದ್ದರಿಂದ ಈ ಔಟ್ ಸಿಂಧುವೋ, ಅಸಿಂಧುವೋ ಎಂಬ ಪ್ರಶ್ನೆ ಉದ್ಭವಿಸಿತ್ತು. ನಿಯಮಗಳ ಪ್ರಕಾರ ಇದು ಔಟ್ ಎಂದು ಐಸಿಸಿ ತೀರ್ಪು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.