ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ 2.2 ಮಿ. ಡಾಲರ್ ಬಹುಮಾನ
Team Udayavani, May 15, 2017, 1:33 PM IST
ಲಂಡನ್: ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡಕ್ಕೆ 2.2 ಮಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಲಾಗಿದೆ. ಐಸಿಸಿ ತನ್ನ ಪ್ರಕಟನೆಯಲ್ಲಿ ಇದನ್ನು ತಿಳಿಸಿದೆ. ‘ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಒಟ್ಟು ಬಹುಮಾನ ಮೊತ್ತ 4.5 ಮಿಲಿಯನ್ ಡಾಲರ್. ಇದರಲ್ಲಿ 2.2 ಮಿ.ಡಾಲರ್ ವಿಜೇತ ತಂಡಕ್ಕೆ ಲಭಿಸುತ್ತದೆ’ ಎಂದು ಐಸಿಸಿ ತಿಳಿಸಿದೆ.
ಅಂದರೆ, 2013ರ ಪಂದ್ಯಾವಳಿಗಿಂತ 8ನೇ ಆವೃತ್ತಿಯ ಈ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಬಹುಮಾನದ ಮೊತ್ತದಲ್ಲಿ 500,000 ಡಾಲರ್‌ನಷ್ಟು ಏರಿಕೆಯಾದಂತಾಯಿತು. ರನ್ನರ್ ಅಪ್ ತಂಡಕ್ಕೆ 1.1 ಮಿ. ಡಾಲರ್, 2 ಸೆಮಿಫೈನಲ್ ತಂಡಗಳಿಗೆ 450,000 ಡಾಲರ್ ಬಹುಮಾನ ಲಭಿಸಲಿದೆ. ಪ್ರತಿ ವಿಭಾಗದ ತೃತೀಯ ಸ್ಥಾನಿ ತಂಡಕ್ಕೆ ತಲಾ 90 ಸಾವಿರ ಡಾಲರ್, ಪ್ರತಿ ಗುಂಪಿನ ಅಂತಿಮ ಸ್ಥಾನಿ ತಂಡಕ್ಕೆ ತಲಾ 60 ಸಾವಿರ ಡಾಲರ್ ನೀಡಲಾಗುವುದು. ಪಂದ್ಯಾವಳಿ ಜೂ. ಒಂದರಿಂದ 18ರ ತನಕ ಕಾರ್ಡಿಫ್, ಎಜ್‌ಬಾಸ್ಟನ್ ಮತ್ತು ಓವಲ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯ ಆತಿಥೇಯ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ನಡುವೆ ಓವಲ್‌ನಲ್ಲಿ ಸಾಗಲಿದೆ. ಹಾಲಿ ಚಾಂಪಿಯನ್ ಭಾರತ ಜೂ. 4ರಂದು ಎಜ್‌ಬಾಸ್ಟನ್‌ನಲ್ಲಿ ಪಾಕಿಸ್ಥಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್