![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 21, 2022, 8:40 AM IST
ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತನ್ನ ನಿಯಮದಲ್ಲಿ ಬಹಳಷ್ಟು ಬದ ಲಾವಣೆ ಮಾಡಿದೆ. ಸುಮಾರು 8 ನಿಯಮ ಗಳಲ್ಲಿ ಪರಿ ವರ್ತನೆಯಾಗಿದೆ. ಅಕ್ಟೋಬರ್ ಒಂದರಿಂದ ಇವು ಜಾರಿಗೆ ಬರಲಿದ್ದು, ಬದಲಾದ ನಿಯಮ ಗಳೊಂದಿಗೆ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಆಡಲಾಗುವುದು.
ನೂತನ ಬ್ಯಾಟ್ಸ್‌ಮನ್‌ಗೆ ಸ್ಟ್ರೈಕ್ :
ಆಟಗಾರನೊಬ್ಬ ಕ್ಯಾಚ್ ಔಟ್ ಆದಾಗ ಕ್ರೀಸಿಗೆ ಬರುವ ಹೊಸ ಆಟ ಗಾರನೇ ಸ್ಟ್ರೈಕ್ ತೆಗೆದುಕೊಳ್ಳಬೇಕು. ಹಿಂದೆ ನಾನ್ ಸ್ಟ್ರೈಕಿಂಗ್ ತುದಿಯಲ್ಲಿದ್ದ ಆಟ ಗಾರ ಅರ್ಧ ಪಿಚ್ ದಾಟಿದ್ದರೆ ಸ್ಟ್ರೈಕ್ ತೆಗೆದು ಕೊಳ್ಳಬಹುದಿತ್ತು.
ಪಿಚ್‌ನಲ್ಲಿದ್ದೇ ಶಾಟ್ ಬಾರಿಸಬೇಕು :
ಬ್ಯಾಟರ್ ಪಿಚ್ ಒಳಗಿರುವಾಗಲೇ ಶಾಟ್ ಬಾರಿಸಬೇಕು. ದೇಹವು ಪಿಚ್‌ನಿಂದ ಹೊರಹೋದರೆ ಆಗ ಗಳಿಸುವ ರನ್‌ಗಣನೆಗೆ ಬಾರದು. ಆ ಚೆಂಡು ಡೆಡ್ ಬಾಲ್. ಅರ್ಥಾತ್, ಪಿಚ್ ನಿಂದ ಹೊರಹೋದ ಚೆಂಡನ್ನು ಬಾರಿಸಲು ಇನ್ನು ಅವಕಾಶವಿರದು.
ಆಚೀಚೆ ಹೋಗುವಂತಿಲ್ಲ :
ಬೌಲರ್ ರನ್‌ಅಪ್ ಆರಂಭಿಸಿದ ಮೇಲೆ ಫೀಲ್ಡರ್ ತನ್ನ ಸ್ಥಾನದಿಂದ ಆಚೀಚೆ ಹೋಗುವಂತಿಲ್ಲ. ಆಗ ಅಂಪಾಯರ್ ಆ ತಂಡಕ್ಕೆ 5 ರನ್ ದಂಡ ವಿಧಿಸುತ್ತಾರೆ. ಈ ರನ್ ಎದುರಾಳಿ ತಂಡಕ್ಕೆ ಸೇರುತ್ತದೆ. ಹಿಂದೆ ಆ ಎಸೆತ ಡೆಡ್ ಬಾಲ್ ಆಗುತ್ತಿತ್ತು.
ಎರಡೇ ನಿಮಿಷಗಳ ಅವಕಾಶ :
ಟೆಸ್ಟ್ ಹಾಗೂ ಏಕದಿನ ಪಂದ್ಯಗಳ ವೇಳೆ ಓರ್ವ ಆಟಗಾರ ಔಟಾದ 2 ನಿಮಿಷಗಳಲ್ಲಿ ನೂತನ ಆಟಗಾರ ಕ್ರೀಸ್ ಇಳಿಯಬೇಕು. ಟಿ20 ಪಂದ್ಯಗಳಲ್ಲಿ ಒಂದೂವರೆ ನಿಮಿಷ. ಇಷ್ಟರೊಳಗೆ ಹೊಸ ಆಟಗಾರ ಕ್ರೀಸ್‌ಗೆ ಬಾರದಿದ್ದರೆ ಆತನನ್ನು ಔಟ್ ಆಗಲಿದ್ದಾನೆ.
ಎಂಜಲು ಬಳಸುವಂತಿಲ್ಲ :
ಕೊರೊನಾ ಸಮಯದಲ್ಲಿ ಜಾರಿಗೆ ತಂದ, ಚೆಂಡಿಗೆ ಎಂಜಲು ಬಳಕೆ ನಿಷೇಧವನ್ನು ಮುಂದುವರಿಸಲಾಗಿದೆ.
ಮಂಕಡ್ ಔಟ್ ಇಲ್ಲ :
ಬೌಲರ್ ಪಂದ್ಯದಲ್ಲಿ ಚೆಂಡನ್ನೆಸೆಯುವ ಮೊದಲೇ ನಾನ್ ಸ್ಟ್ರೈಕಿಂಗ್‌ನಲ್ಲಿರುವ ಆಟಗಾರ ಕ್ರೀಸ್ ಬಿಟ್ಟರೆ, ಅದಿನ್ನು “ಮಂಕಡ್ ಔಟ್’ ಎನಿಸದು. ಇದನ್ನು ಕೂಡ ರನೌಟ್ ಎಂದೇ ಇನ್ನು ಮುಂದೆ ಎಲ್ಲ ಪಂದ್ಯಗಳಲ್ಲೂ ಪರಿಗಣಿಸಲಾಗುವುದು.
ಓವರ್‌ಗೆ ನಿಗದಿತ ಸಮಯ :
ತಂಡವೊಂದು ನಿಗದಿತ ಸಮಯದಲ್ಲಿ ಓವರ್‌ಗಳನ್ನು ಮುಗಿಸಬೇಕು. ತಪ್ಪಿ ದರೆ ವಿಳಂಬವಾದ ಉಳಿದ ಓವರ್‌ಗಳವೇಳೆ ಫೀಲ್ಡಿಂಗ್ ತಂಡ ಬೌಂಡರಿ ಲೈನ್‌ನಲ್ಲಿದ್ದ ಓರ್ವ ಕ್ಷೇತ್ರರಕ್ಷಕನನ್ನು 30 ಯಾರ್ಡ್ ಸರ್ಕಲ್ ಒಳಗೆ ನಿಲ್ಲಿಸಬೇಕು. ಟಿ20ಯಲ್ಲಿ ಜಾರಿಯಲ್ಲಿದೆ.
ಸ್ಟ್ರೈಕರ್ ರನೌಟ್ ನಿಯಮ :
ಬೌಲಿಂಗ್ ಮಾಡುವ ಮೊದಲೇ ಬ್ಯಾಟರ್ ಕ್ರೀಸ್ ಬಿಟ್ಟು ಮುಂದೆ ಬಂದರೆ, ಬೌಲಿಂಗ್ ಮಾಡದೆ ಚೆಂಡನ್ನು ಸ್ಟಂಪ್‌ಗೆ ಎಸೆದು ಅಥವಾ ಕೀಪರ್‌ಗೆ ನೀಡಿ ರನೌಟ್ ಮಾಡುವ ಅವಕಾಶ ಇರದು. ಬದಲಾಗಿ ಆ ಎಸೆತ ಡೆಡ್ ಬಾಲ್ ಎನಿಸಿಕೊಳ್ಳುತ್ತದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.