ICC ವರ್ಷದ ಏಕದಿನ ತಂಡ ಪ್ರಕಟ; ರೋಹಿತ್ ಕ್ಯಾಪ್ಟನ್, ಆರು ಭಾರತೀಯರಿಗೆ ಸ್ಥಾನ
Team Udayavani, Jan 23, 2024, 3:01 PM IST
ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಮಂಗಳವಾರ 2023ರ ವರ್ಷದ ಏಕದಿನ ತಂಡವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ನಾಯಕರಾಗಿರುವ ತಂಡದಲ್ಲಿ ಭಾರತೀಯರು ಮೇಲುಗೈ ಸಾಧಿಸಿದ್ದಾರೆ. ರೋಹಿತ್ ಸೇರಿ ಆರು ಮಂದಿ ಭಾರತೀಯರು ತಂಡದಲ್ಲಿದ್ದಾರೆ.
ತಂಡದಲ್ಲಿ ಇಬ್ಬರು ಆಸ್ಟ್ರೇಲಿಯನ್ನರು, ಇಬ್ಬರು ದಕ್ಷಿಣ ಆಫ್ರಿಕನ್ನರು ಮತ್ತು ನ್ಯೂಜಿಲ್ಯಾಂಡ್ ಆಟಗಾರ ಕೂಡ ಇದ್ದಾರೆ.
ಭಾರತದ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 2023 ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 52 ರ ಸರಾಸರಿಯಲ್ಲಿ 1255 ರನ್‌ಗಳನ್ನು ಗಳಿಸುವುದರೊಂದಿಗೆ ತಮ್ಮ ಗಮನಾರ್ಹ ದಾಖಲೆಯನ್ನು ಮುಂದುವರೆಸಿದರು.
ಭಾರತದ ಬ್ಯಾಟರ್ ಗಳಾದ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಬೌಲರ್ ಗಳಾದ ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಶಮಿ ಸ್ಥಾನ ಪಡೆದಿದ್ದಾರೆ.
ಐಸಿಸಿ ವರ್ಷದ ಏಕದಿನ ತಂಡ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ಟ್ರಾವಿಸ್ ಹೆಡ್, ವಿರಾಟ್ ಕೊಹ್ಲಿ, ಡ್ಯಾರೆಲ್ ಮಿಚೆಲ್, ಹೆನ್ರಿಚ್ ಕ್ಲಾಸೆನ್ (ವಿ.ಕೀ), ಮಾರ್ಕೊ ಜಾನ್ಸೆನ್, ಆ್ಯಡಂ ಜಂಪಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.