40ನೇ ವಯಸ್ಸಿನಲ್ಲಿ ನಂ.1 ಟೆಸ್ಟ್ ಬೌಲರ್ ಆದ ಆ್ಯಂಡರ್ಸನ್: ನಂ.2 ಸ್ಥಾನದಲ್ಲಿ ಭಾರತದ ಬೌಲರ್
Team Udayavani, Feb 22, 2023, 4:36 PM IST
ನವದೆಹಲಿ: ನೂತನ ಐಸಿಸಿ ಟೆಸ್ಟ್ ಬೌಲಿಂಗ್ ರ‍್ಯಾಕಿಂಗ್ ನಲ್ಲಿ ಇಂಗ್ಲೆಂಡ್ ತಂಡದ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್ ನಂ.1 ಸ್ಥಾನವನ್ನು ಪಡೆದುಕೊಂಡು, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ನಂ.1 ಬೌಲರ್ ಪಯಣಕ್ಕೆ ಬ್ರೇಕ್ ಹಾಕಿದ್ದಾರೆ.
ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 40 ವರ್ಷದ ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆ್ಯಂಡರ್ಸನ್ 7 ವಿಕೆಟ್ ಗಳನ್ನು ಪಡೆದುಕೊಂಡು ಭರ್ಜರಿ ಪ್ರದರ್ಶನ ನೀಡಿದ ಪರಿಣಾಮ, ಅವರು ಟೆಸ್ಟ್ ನಲ್ಲಿ ನಂ.1 ಬೌಲರ್ ಆಗಿ ಸ್ಥಾನ ಪಡೆದುಕೊಂಡಿದ್ದಾರೆ. 2016 ರಲ್ಲಿಯೂ ಜೇಮ್ಸ್ ಆ್ಯಂಡರ್ಸನ್ ನಂ.1 ಟೆಸ್ಟ್ ಬೌಲರ್ ಆಗಿ ಮಿಂಚಿದ್ದರು.
ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಕಳೆದ 4 ವರ್ಷದಿಂದ ಟೆಸ್ಟ್ ನಲ್ಲಿ ನಂ.1 ಬೌಲರ್ ಆಗಿ ಸ್ಥಾನವನ್ನು ಕಾಯ್ದುಕೊಂಡಿದ್ದರು. ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿನ ಸೋಲು, ಹಾಗೂ ಅವರ ಪ್ರದರ್ಶನದಿಂದ ಅವರ ಬೌಲಿಂಗ್ ರ‍್ಯಾಕಿಂಗ್ ಮೇಲೂ ಪರಿಣಾಮ ಬೀರಿದೆ.
ಸದ್ಯ 866 ಅಂಕಗಳೊಂದಿಗೆ ಜೇಮ್ಸ್ ಆ್ಯಂಡರ್ಸನ್ ನಂ.1 ಸ್ಥಾನದಲ್ಲಿದ್ದು, ಆಸೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯದಲ್ಲಿ 14 ವಿಕೆಟ್ ಪಡೆದುಕೊಂಡಿರುವ ಆರ್. ಅಶ್ವಿನ್ 864 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ 858 ಅಂಕದೊಂದಿಗೆ ಪ್ಯಾಟ್ ಕಮಿನ್ಸ್ ಇದ್ದಾರೆ. ಇನ್ನು ಆಸೀಸ್ ವಿರುದ್ಧದ ಮೊದಲ ಎರಡು ಪಂದ್ಯದಲ್ಲಿ ಶ್ರೇಷ್ಠಮಟ್ಟದ ಬೌಲಿಂಗ್ ದಾಳಿ ಮಾಡಿರುವ ರವಿಂದ್ರ ಜಡೇಜಾ 9ನೇ ಸ್ಥಾನಕ್ಕೆ ಜಿಗಿದಿದ್ದಾರೆ.
Pat Cummins dethroned by Jimmy 👑
Ravindra Jadeja back in the top 10 ⚔️#ICCRankings pic.twitter.com/abrrX1fVxv
— ESPNcricinfo (@ESPNcricinfo) February 22, 2023
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.