ಏಕದಿನ ಶ್ರೇಯಾಂಕ: ಕೊಹ್ಲಿ-ಬುಮ್ರಾ ವಿಶ್ವ ನಂ.1
Team Udayavani, Nov 3, 2018, 6:00 AM IST
ದುಬೈ: ಐಸಿಸಿ ನೂತನ ಏಕದಿನ ಶ್ರೇಯಾಂಕ ಪ್ರಕಟವಾಗಿದೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮ ವಿಶ್ವ ನಂ.1, 2 ಸ್ಥಾನ ಉಳಿಸಿಕೊಂಡಿದ್ದಾರೆ. ಬೌಲಿಂಗ್‌ನಲ್ಲಿ ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿದ್ದಾರೆ. ಲೆಗ್‌ಸ್ಪಿನ್ನರ್ ಯಜುವೇಂದ್ರ ಚಹಲ್ ಮೊದಲ ಬಾರಿಗೆ ಅಗ್ರ-10ರ ಪಟ್ಟಿಯನ್ನು ಅಲಂಕರಿಸಿದ್ದಾರೆ. ಭಾರತ-ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಏಕದಿನ ಸರಣಿಯ ಬಳಿಕ ಚಹಲ್ 683 ಅಂಕ ಗಳಿಸಿದ್ದಾರೆ. ಜೊತೆಗೆ ಇಂಗ್ಲೆಂಡಿನ ಸ್ಪಿನ್ನರ್ ಆದಿಲ್ ರಶೀದ್ ಜತೆ ಜಂಟಿ 8ನೇ ಸ್ಥಾನದಲ್ಲಿದ್ದಾರೆ.
ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ರವೀಂದ್ರ ಜಡೇಜ ಒಮ್ಮೆಲೇ 16 ಸ್ಥಾನ ನೆಗೆದು 25ನೇ ಸ್ಥಾನಕ್ಕೆ ಬಂದಿದ್ದಾರೆ. ವಿಂಡೀಸ್ ವಿರುದ್ಧ 4 ಪಂದ್ಯಗಳನ್ನಾಡಿದ ಜಡೇಜ 7 ವಿಕೆಟ್ ಉರುಳಿಸಿದ್ದರು. ಸರಣಿಯ ಕೊನೆಯ 3 ಪಂದ್ಯಗಳಲ್ಲಿ ಆಡಿದ ಜಸ್‌ಪ್ರೀತ್ ಬುಮ್ರಾ 841 ಅಂಕಗಳೊಂದಿಗೆ ಬೌಲಿಂಗ್ ಶ್ರೇಯಾಂಕ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇದು ಬುಮ್ರಾ ಗಳಿಸಿದ ಸರ್ವಾಧಿಕ ರೇಟಿಂಗ್ ಅಂಕವಾಗಿದೆ.
ಧವನ್ 4 ಸ್ಥಾನ ಕುಸಿತ: ವೆಸ್ಟ್ ಇಂಡೀಸ್ ವಿರುದ್ಧ ತೀವ್ರ ರನ್ ಬರಗಾಲ ಅನುಭವಿಸಿದ ಎಡಗೈ ಆರಂಭಕಾರ ಶಿಖರ್
ಧವನ್, ಬ್ಯಾಟಿಂಗ್ ಶ್ರೇಯಾಂಕದಲ್ಲಿ 4 ಸ್ಥಾನ ಕುಸಿದು 9ಕ್ಕೆ ಬಂದು ನಿಂತಿದ್ದಾರೆ. 5 ಪಂದ್ಯಗಳ ಸರಣಿಯಲ್ಲಿ ಧವನ್ ಮೊದಲ ಬಾರಿಗೆ ಅರ್ಧ ಶತಕ ದಾಖಲಿಸುವಲ್ಲಿ ವಿಫಲರಾಗಿದ್ದರು.
ಕೊಹ್ಲಿಗೆ 899 ಅಂಕ: ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ 3 ಶತಕಗಳ ಸಹಿತ ಏಕದಿನದಲ್ಲಿ 10 ಸಾವಿರ ರನ್ ಮೈಲುಗಲ್ಲು ನೆಟ್ಟ ವಿರಾಟ್ ಕೊಹ್ಲಿ 899 ಅಂಕಗಳೊಂದಿಗೆ ನಂ.1 ಬ್ಯಾಟ್ಸ್‌ಮನ್ ಆಗಿ ಮುಂದುವರಿದಿದ್ದಾರೆ. ಜೀವನಶ್ರೇಷ್ಠ 871 ಅಂಕ
ಹೊಂದಿರುವ ರೋಹಿತ್ ಶರ್ಮ ದ್ವಿತೀಯ ಸ್ಥಾನದಲ್ಲಿದ್ದಾರೆ. ಮುಂಬರುವ ಆಸ್ಟ್ರೇಲಿಯ ಪ್ರವಾಸದಲ್ಲಿ ಕೊಹ್ಲಿ-ರೋಹಿತ್ ನಡುವೆ ಅಗ್ರಸ್ಥಾನದ ಪೈಪೋಟಿಯೊಂದು ಕಂಡುಬರಬಹುದು. ಶ್ರೀಲಂಕಾ ವಿರುದಟಛಿದ 5 ಏಕದಿನ ಪಂದ್ಯಗಳ ಸರಣಿಯಲ್ಲಿ ಒಂದೇ
ಅರ್ಧ ಶತಕ ಹೊಡೆದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ 3ನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದ ವಿರುದ್ಧ ಬ್ಯಾಟಿಂಗ್‌ನಲ್ಲಿ ಮಿಂಚಿ 250 ಪ್ಲಸ್ ರನ್ ಬಾರಿಸಿದ ವೆಸ್ಟ್ ಇಂಡೀಸಿನ ಶೈ ಹೋಪ್ 22 ಸ್ಥಾನ ಮೇಲೇರಿದ್ದು, 25ನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಶಿಮ್ರನ್ ಹೆಟ್‌ಮೈರ್ 26ನೇ ಸ್ಥಾನದಲ್ಲಿದ್ದಾರೆ. ಅವರದು 31 ಸ್ಥಾನಗಳ ನೆಗೆತ. ಮಧ್ಯಮ ಕ್ರಮಾಂಕದಲ್ಲಿ ಗಟ್ಟಿಗೊಳ್ಳುವ ಸೂಚನೆ ರವಾನಿಸಿದ ಭಾರತದ ಅಂಬಾಟಿ ರಾಯುಡು 24 ಸ್ಥಾನ ಜಿಗಿದು 48ನೇ ಶ್ರೇಯಾಂಕ
ಪಡೆದಿದ್ದಾರೆ. ಜೀವನಶ್ರೇಷ್ಠ 553 ಅಂಕ ಹೊಂದಿದ್ದಾರೆ.
ಅಗ್ರ ಬ್ಯಾಟ್ಸ್‌ಮನ್ ಅಂಕ
ವಿರಾಟ್ ಕೊಹ್ಲಿ 899
ರೋಹಿತ್ ಶರ್ಮ 871
ಜೋ ರೂಟ್ 807
ಡೇವಿಡ್ ವಾರ್ನರ್ 803
ಬಾಬರ್ ಆಜಂ 798
ಅಗ್ರ 5 ಬೌಲರ್‌ಗಳು ಅಂಕ
ಜಸ್‌ಪ್ರೀತ್ ಬುಮ್ರಾ 841
ರಶೀದ್ ಖಾನ್ 788
ಕಲದೀಪ್ ಯಾದವ್ 723
ಟ್ರೆಂಟ್ ಬೌಲ್ಟ್ 699
ಜೋಶ್ ಹೇಜಲ್‌ವುಡ್ 696
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
MUST WATCH
ಹೊಸ ಸೇರ್ಪಡೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.