ರಬಾಡ: ವಿಶ್ವದ ನಂ.1 ಟೆಸ್ಟ್ ಬೌಲರ್
Team Udayavani, Jan 10, 2018, 1:00 PM IST
ದುಬಾೖ: ದಕ್ಷಿಣ ಆಫ್ರಿಕಾದ ಯುವ ವೇಗಿ ಕಾಗಿಸೊ ರಬಾಡ ಮೊದಲ ಬಾರಿಗೆ ನಂಬರ್ ವನ್ ಟೆಸ್ಟ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಈ ವರೆಗೆ ನಂ.1 ಆಗಿದ್ದ ಇಂಗ್ಲೆಂಡಿನ ಜೇಮ್ಸ್ ಆ್ಯಂಡರ್ಸನ್ ದ್ವಿತೀಯ ಸ್ಥಾನಕ್ಕೆ ಇಳಿದಿದ್ದಾರೆ. ಭಾರತ-ದಕ್ಷಿಣ ಆಫ್ರಿಕಾ ನಡುವಿನ ಕೇಪ್‌ಟೌನ್ ಟೆಸ್ಟ್ ಪಂದ್ಯ ಮುಗಿದೊಡನೆ ಐಸಿಸಿ ರ್‍ಯಾಂಕಿಂಗ್ ಯಾದಿಯನ್ನು ಪರಿಷ್ಕರಿಸಲಾಯಿತು.
22ರ ಹರೆಯದ ರಬಾಡ ಕೇಪ್‌ಟೌನ್ ಟೆಸ್ಟ್‌ನಲ್ಲಿ ಒಟ್ಟು 5 ವಿಕೆಟ್ ಕಿತ್ತು ಐದಂಕ ಸಂಪಾದಿಸಿದರು. ಇದೇ ವೇಳೆ ಆ್ಯಶಸ್ ಸರಣಿಯ ಸಿಡ್ನಿ ಟೆಸ್ಟ್‌ನಲ್ಲಿ ಆ್ಯಂಡರ್ಸನ್ ಕಳಪೆ ಬೌಲಿಂಗ್ ಪ್ರದರ್ಶನದಿಂದಾಗಿ 5 ಅಂಕಗಳನ್ನು ಕಳೆದುಕೊಂಡರು. ಈ ಲೆಕ್ಕಾಚಾರದಂತೆ ರಬಾಡ ಈಗ “ಆ್ಯಂಡಿ’ಗಿಂತ ಕೇವಲ ಒಂದು ಅಂಕದ ಮುನ್ನಡೆ ಹೊಂದಿದ್ದಾರೆ. ಭಾರತದೆದುರಿನ ಮುಂದಿನೆರಡು ಟೆಸ್ಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ರಬಾಡ ಅಂಕದಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
“ವಿಶ್ವದ ನಂಬರ್ ವನ್ ಟೆಸ್ಟ್ ಬೌಲರ್ ಎನಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಇದೊಂದು ವಿಶೇಷ ಗೌರವ. ಕ್ರಿಕೆಟ್ ಆಡಲಾ ರಂಭಿಸಿದ ವೇಳೆ ನಮ್ಮ ಕನಸುಗಳಿಗೆ ಬರವಿಲ್ಲ. ಅದರಲ್ಲೊಂದು ನಂಬರ್ ವನ್ ಪಟ್ಟ. ಇದೀಗ ನನಸಾಗಿದೆ. ಕ್ರಿಕೆಟ್ ಒಂದು ಟೀಮ್ ಗೇಮ್. ನನ್ನ ಯಶಸ್ಸಿನಲ್ಲಿ ತಂಡದ ಎಲ್ಲ ಸದಸ್ಯರ ಸಹಕಾರವಿದೆ’ ಎಂದು ರಬಾಡ ಪ್ರತಿಕ್ರಿಯಿಸಿದ್ದಾರೆ.
75 ರನ್ನಿಗೆ 9 ವಿಕೆಟ್ ಕಿತ್ತು ಭಾರತವನ್ನು ಕೇಪ್‌ಟೌನ್‌ನಲ್ಲಿ ಕಾಡಿದ ವೆರ್ನನ್ ಫಿಲಾಂಡರ್ ಕೂಡ ಬಹಳ ಮೇಲೇರಿದ್ದಾರೆ. ಈ ಸಾಧನೆಗಾಗಿ 67 ಅಂಕ ಪಡೆದ ಫಿಲಾಂಡರ್ ಈಗ 12ರಿಂದ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಟಾಪ್-20 ಆಚೆಗಿನ ಬೌಲಿಂಗ್ ರ್‍ಯಾಂಕಿಂಗ್ ಯಾದಿಯಲ್ಲಿ ಭಾರತದ ಭುವನೇಶ್ವರ್ ಕುಮಾರ್ (22) ಮತ್ತು ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ (28) ಜೀವನಶ್ರೇಷ್ಠ ರ್‍ಯಾಂಕಿಂಗ್ ಗಳಿಸಿದ್ದಾರೆ. ಇವರಿಬ್ಬರದೂ 8 ಸ್ಥಾನಗಳ ನೆಗೆತ.
ಸ್ಮಿತ್ ಅಗ್ರಸ್ಥಾನದಲ್ಲೇ…
ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಂಗ್ ಯಾದಿಯಲ್ಲಿ ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ 947 ಅಂಕಗಳೊಂದಿಗೆ ಅಗ್ರಸ್ಥಾನದಲ್ಲೇ ವಿರಾಜಮಾನ ರಾಗಿದ್ದಾರೆ. ಆದರೆ ವರ್ಷಾಂತ್ಯದ ರ್‍ಯಾಂಕಿಂಗ್ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಈಗ ಮೂರಕ್ಕಿಳಿದಿದ್ದಾರೆ. ಜೋ ರೂಟ್ ಎರಡಕ್ಕೇರಿದ್ದಾರೆ. ರೂಟ್-ಕೊಹ್ಲಿ ನಡುವೆ ಕೇವಲ ಒಂದಂಕದ ವ್ಯತ್ಯಾಸವಷ್ಟೇ ಇದೆ. ಸಿಡ್ನಿ ಟೆಸ್ಟ್ ಸಾಧನೆಗಾಗಿ ರೂಟ್ 26 ಅಂಕ ಗಳಿಸಿದರೆ, ಕೇಪ್‌ಟೌನ್ ವೈಫಲ್ಯದಿಂದಾಗಿ ಕೊಹ್ಲಿ 13 ಅಂಕ ಕಳೆದುಕೊಂಡರು.
ಚೇತೇಶ್ವರ್ ಪೂಜಾರ ಕೂಡ ಕುಸಿತ ಕಂಡಿದ್ದು, ಮೂರರಿಂದ ಐದಕ್ಕೆ ಇಳಿದಿದ್ದಾರೆ. ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್, ಹಾಶಿಮ್ ಆಮ್ಲ ಕೂಡ 3 ಸ್ಥಾನ ಕೆಳಕ್ಕಿಳಿದಿದ್ದಾರೆ. 2014ರ ಅಂಡರ್-19 ವಿಶ್ವಕಪ್ ಪಂದ್ಯಾವಳಿಯ ಸರಣಿಶ್ರೇಷ್ಠ ಆಟಗಾರ ಐಡನ್ ಮಾರ್ಕ್‌ರಮ್, ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕ್ರಮವಾಗಿ 6 ಹಾಗೂ 24 ಸ್ಥಾನಗಳ ಜಿಗಿತ ಕಂಡಿದ್ದಾರೆ. ಇವರಿಬ್ಬರು ಕ್ರಮವಾಗಿ 48ನೇ ಹಾಗೂ 49ನೇ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಆಲ್‌ರೌಂಡರ್‌ಗಳ ಯಾದಿ ಯಲ್ಲಿ ಶಕಿಇಬ್ ಅಲ್ ಹಸನ್, ರವೀಂದ್ರ ಜಡೇಜ ಮೊದಲೆರಡು ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸೋತರೂ ಭಾರತದ ನಂ.1 ಸ್ಥಾನಕ್ಕೆ ಧಕ್ಕೆಯಾಗಿಲ್ಲ.
ಆಫ್ರಿಕಾದ 7ನೇ ಬೌಲರ್
ಕಾಗಿಸೊ ರಬಾಡ ನಂ.1 ಗೌರವಕ್ಕೆ ಪಾತ್ರರಾದ ದಕ್ಷಿಣ ಆಫ್ರಿಕಾದ 7ನೇ ಟೆಸ್ಟ್ ಬೌಲರ್. ಉಳಿದವರೆಂದರೆ ಯುಬ್ರೆ ಫಾಕ್ನರ್, ಹಗ್ ಟೆಫೀಲ್ಡ್, ಪೀಟರ್ ಪೋಲಾಕ್, ಶಾನ್ ಪೋಲಾಕ್, ಡೇಲ್ ಸ್ಟೇನ್ ಮತ್ತು ವೆರ್ನನ್ ಫಿಲಾಂಡರ್.
ಟಾಪ್-10
ಟೆಸ್ಟ್ ಬ್ಯಾಟ್ಸ್‌ಮನ್
1. ಸ್ಟೀವನ್ ಸ್ಮಿತ್ (947)
2. ಜೋ ರೂಟ್ (881)
3. ವಿರಾಟ್ ಕೊಹ್ಲಿ (880)
4. ಕೇನ್ ವಿಲಿಯಮ್ಸನ್ (855)
5. ಚೇತೇಶ್ವರ್ ಪೂಜಾರ (848)
6. ಡೇವಿಡ್ ವಾರ್ನರ್ (827)
7. ಅಜರ್ ಅಲಿ (755)
8. ದಿನೇಶ್ ಚಂಡಿಮಾಲ್ (743)
9. ಅಲಸ್ಟೇರ್ ಕುಕ್ (742)
10. ಹಾಶಿಮ್ ಆಮ್ಲ (740).
ಟೆಸ್ಟ್ ಬೌಲರ್
1. ಕಾಗಿಸೊ ರಬಾಡ (888)
2. ಜೇಮ್ಸ್ ಆ್ಯಂಡರ್ಸನ್ (887)
3. ರವೀಂದ್ರ ಜಡೇಜ (861)
4. ಆರ್. ಅಶ್ವಿನ್ (830)
5. ಹ್ಯಾಝಲ್‌ವುಡ್ (814)
6. ವೆರ್ನನ್ ಫಿಲಾಂಡರ್ (806)
7. ರಂಗನ ಹೆರಾತ್ (799)
8. ನೀಲ್ ವ್ಯಾಗ್ನರ್ (784)
9. ಮಕಿಚೆಲ್ ಸ್ಟಾರ್ಕ್ (769)
10. ನಥನ್ ಲಿಯೋನ್ (769).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.