Bowling Ranking: 907 ರೇಟಿಂಗ್ ಅಂಕ ಬುಮ್ರಾ ದಾಖಲೆ
Team Udayavani, Jan 1, 2025, 11:21 PM IST
ದುಬಾೖ: ವೇಗಿ ಜಸ್‌ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ನೂತನ ಎತ್ತರ ತಲುಪಿ ಭಾರತೀಯ ದಾಖಲೆ ಸ್ಥಾಪಿಸಿದ್ದಾರೆ. ಅವರೀಗ 907 ಅಂಕ ಹೊಂದಿದ್ದು, ಆರ್. ಅಶ್ವಿನ್ ಅವರ 904 ಅಂಕಗಳ ದಾಖಲೆಯನ್ನು ಮುರಿದು ಮುನ್ನಡೆದರು.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮುನ್ನ ಬುಮ್ರಾ 904 ಅಂಕಗಳೊಂದಿಗೆ ಆರ್. ಅಶ್ವಿನ್ ದಾಖಲೆಯನ್ನು ಸರಿಗಟ್ಟಿದ್ದರು. ಅಶ್ವಿನ್ 2016ರಲ್ಲಿ ಈ ಎತ್ತರ ತಲುಪಿದ್ದರು. ಮೆಲ್ಬರ್ನ್ ಟೆಸ್ಟ್‌ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬುಮ್ರಾ, ತಮ್ಮ ರೇಟಿಂಗ್ ಅಂಕವನ್ನು 907ಕ್ಕೆ ಏರಿಸಿಕೊಂಡರು. ಇದು ಟೆಸ್ಟ್ ರ್‍ಯಾಂಕಿಂಗ್ ರೇಟಿಂಗ್ ಅಂಕದ ಜಂಟಿ 17ನೇ ಸ್ಥಾನ. ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಡೆರೆಕ್ ಅಂಡರ್‌ವುಡ್ ಕೂಡ 907 ಅಂಕ ಹೊಂದಿದ್ದರು.
ಜಸ್‌ಪ್ರೀತ್ ಬುಮ್ರಾ ಈಗ ತಮ್ಮ ನಂ.1 ಬೌಲಿಂಗ್ ಪಟ್ಟವನ್ನು ಇನ್ನಷ್ಟು ಭದ್ರಗೊಳಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿದ್ದ ಕಾಗಿಸೊ ರಬಾಡ 4ಕ್ಕೆ ಕುಸಿದಿದ್ದಾರೆ (832). ಜೋಶ್ ಹೇಝಲ್‌ವುಡ್ (843) ಮತ್ತು ಪ್ಯಾಟ್ ಕಮಿನ್ಸ್ (837) ಒಂದೊಂದು ಸ್ಥಾನ ಮೇಲೇರಿದ್ದು, 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಆಲ್‌ರೌಂಡರ್‌ಗಳ ಯಾದಿಯಲ್ಲೂ ಕಮಿನ್ಸ್ ತೃತೀಯ ಸ್ಥಾನಿಯಾಗಿದ್ದಾರೆ. ಮೆಲ್ಬರ್ನ್ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್‌ಗಳಿಂದ ಒಟ್ಟು 90 ರನ್ ಹೊಡೆದಿದ್ದರು.
ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್ ಅವರದು 6 ಸ್ಥಾನಗಳ ಪ್ರಗತಿ. ಅವರೀಗ 5ನೇ ಸ್ಥಾನಕ್ಕೆ ಏರಿದ್ದಾರೆ (803). ರವೀಂದ್ರ ಜಡೇಜ ಒಂದು ಸ್ಥಾನ ಕುಸಿದು 10ಕ್ಕೆ ಬಂದರು (750).
ಜೈಸ್ವಾಲ್ ನಂ.4
ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್ ಒಂದು ಸ್ಥಾನ ಮೇಲೇರಿದ್ದು, ಜೀವನಶ್ರೇಷ್ಠ 4ನೇ ಸ್ಥಾನ ಅಲಂಕರಿಸಿದ್ದಾರೆ (854). ಜೈಸ್ವಾಲ್ ಮೆಲ್ಬರ್ನ್ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ 80 ಪ್ಲಸ್ ರನ್ ಹೊಡೆದಿದ್ದರು. ಮೆಲ್ಬರ್ನ್ನಲ್ಲಿ ಶತಕ ಬಾರಿಸಿದ ನಿತೀಶ್ ಕುಮಾರ್ ರೆಡ್ಡಿ ಅವರದು 20 ಸ್ಥಾನಗಳ ನೆಗೆತ. ಅವರೀಗ 53ನೇ ಸ್ಥಾನಕ್ಕೆ ಬಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Divorce Rumours: ಚಹಾಲ್ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?
Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video
Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್; ಭಾರತಕ್ಕೆ ಅಲ್ಪ ಮುನ್ನಡೆ
INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.