ಟಿ20 ವಿಶ್ವಕಪ್ ಟ್ರೋಫಿಯ ಆನ್‌ಲೈನ್ ಯಾತ್ರೆ ಆರಂಭ
Team Udayavani, Aug 20, 2021, 6:45 AM IST
ಕಿಂಗ್‌ಸ್ಟನ್ (ಜಮೈಕ): ವೆಸ್ಟ್ ಇಂಡೀಸ್‌ನ ತಾರಾ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೇಟ್ ಟಿ20 ವಿಶ್ವಕಪ್ ಟ್ರೋಫಿಯ ವರ್ಚ್ಯುವಲ್ ಯಾತ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರೊಂದಿಗೆ ವರ್ಷಾಂತ್ಯದ ಪಂದ್ಯಾವಳಿಗೆ ಕ್ಷಣಗಣನೆ ಮೊದಲ್ಗೊಂಡಿತು. ಈ ಟ್ರೋಫಿಯೊಂದಿಗೆ ನನ್ನ ನೆನಪು ಮತ್ತು ನಂಟು ಸ್ಮರಣೀಯ. ನನ್ನ ಕ್ರಿಕೆಟ್ ಬದುಕಿನ ಮಹಾಸಂಭ್ರಮ ಇಲ್ಲಿ ಪ್ರತಿಫಲಿಸುತ್ತಲೇ ಇರುತ್ತದೆ. ಈ ಟ್ರೋಫಿ ಯಾತ್ರೆ ಅತ್ಯಂತ ಯಶಸ್ವಿಯಾಗಲಿ’ ಎಂದು ಬ್ರಾಥ್‌ವೇಟ್ ಹಾರೈಸಿದರು.
ಬ್ರಾಥ್‌ವೇಟ್ ಬೊಂಬಾಟ್ ಆಟ: ಈ ಕಾರ್ಯಕ್ರಮಕ್ಕೆ ಕಾರ್ಲೋಸ್ ಬ್ರಾಥ್‌ವೇಟ್ ಅವರೇ ಚಾಲನೆ ನೀಡಲು ವಿಶೇಷ ಕಾರಣವಿದೆ. 2016ರಲ್ಲಿ ನಡೆದ ಕೊನೆಯ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಬ್ರಾಥ್‌ವೇಟ್ ವಿಂಡೀಸ್ ಗೆಲುವಿನ ಹೀರೋ ಆಗಿದ್ದರು. ಈ ಮುಖಾಮುಖಿ ಇಂಗ್ಲೆಂಡ್ ವಿರುದ್ಧ ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ನಡೆದಿತ್ತು. ಚೇಸಿಂಗ್ ವೇಳೆ ಬೆನ್ ಸ್ಟೋಕ್ಸ್ ಪಾಲಾದ ಅಂತಿಮ ಓವರ್‌ನಲ್ಲಿ ಬ್ರಾಥ್‌ವೇಟ್ 4 ಪ್ರಚಂಡ ಸಿಕ್ಸರ್ ಬಾರಿಸಿ ವಿಂಡೀಸಿಗೆ 2ನೇ ಟಿ20 ವಿಶ್ವಕಪ್ ತಂದಿತ್ತಿದ್ದರು.
“ಕೋವಿಡ್ ಕಾರಣದಿಂದ ಟಿ20 ಟ್ರೋಫಿಯ ವಿಶ್ವ ಪ್ರವಾಸ ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರತಿಯೋರ್ವ ಕ್ರಿಕೆಟ್ ಅಭಿಮಾನಿಯೂ ವರ್ಚ್ಯುವಲ್ ಮಾದರಿಯಲ್ಲೇ ಈ ಟ್ರೋಫಿಯ ವಿಶ್ವದರ್ಶನ ಮಾಡಿಸಬೇಕಿದೆ. ಹಿಂದಿಗಿಂತಲೂ ಹೆಚ್ಚಿನ ಕ್ರಿಕೆಟ್ ದೇಶಗಳನ್ನು ಇದು ತಲುಪುವಂತಾಗಬೇಕು’ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.