ಟಿ20 ರ್‍ಯಾಂಕಿಂಗ್: ಒಂದು ಸ್ಥಾನ ಕುಸಿದ ರಾಹುಲ್
Team Udayavani, Nov 17, 2021, 9:00 PM IST
ದುಬಾೖ: ಬುಧವಾರ ಬಿಡುಗಡೆಗೊಂಡ ನೂತನ ಐಸಿಸಿ ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಭಾರತದ ಆರಂಭಕಾರ ಕೆ.ಎಲ್. ರಾಹುಲ್ ಒಂದು ಸ್ಥಾನ ಕುಸಿತ ಕಂಡಿದ್ದಾರೆ.
ಸದ್ಯ ಟಿ20ಯಿಂದ ದೂರ ಉಳಿದಿರುವ ವಿರಾಟ್ ಕೊಹ್ಲಿ 8ನೇ ಸ್ಥಾನದಲ್ಲೇ ಉಳಿದಿದ್ದಾರೆ. ಪಾಕಿಸ್ಥಾನದ ನಾಯಕ ಬಾಬರ್ ಆಜಂ ಅಗ್ರಸ್ಥಾನಲ್ಲಿ ಮುಂದುವರಿದಿದ್ದಾರೆ.
ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಕಂಡ ಪ್ರಮುಖ ಆಟಗಾರನೆಂದರೆ ಮಿಚೆಲ್ ಮಾರ್ಷ್. ಟಿ20 ವಿಶ್ವಕಪ್ ಫೈನಲ್‌ನ ಪಂದ್ಯಶ್ರೇಷ್ಠ ಆಟಗಾರನಾಗಿ ಮೂಡಿಬಂದ ಮಾರ್ಷ್ 6 ಸ್ಥಾನಗಳ ಜಿಗಿತದೊಂದಿಗೆ 13ನೇ ಸ್ಥಾನಕ್ಕೆ ಬಂದಿದ್ದಾರೆ. ಸರಣಿ ಶ್ರೇಷ್ಠ ಆಟಗಾರ ಡೇವಿಡ್ ವಾರ್ನರ್ ಅವರದು 8 ಸ್ಥಾನಗಳ ಪ್ರಗತಿ. ಈಗ ಅವರು 33ನೇ ಸ್ಥಾನದಲ್ಲಿದ್ದಾರೆ.ಡೇವನ್ ಕಾನ್ವೆ 3 ಸ್ಥಾನ ಮೇಲೇರಿ 4ಕ್ಕೆ ಬಂದರೆ, ಟಿ20 ವಿಶ್ವಕಪ್ ವಿಜೇತ ತಂಡದ ನಾಯಕ ಆರನ್ ಫಿಂಚ್ 3 ಸ್ಥಾನ ಕೆಳಗಿಳಿದಿದ್ದಾರೆ (ನಂ. 7).
ಇದನ್ನೂ ಓದಿ:ಗೋವಾ ಟ್ಯಾಕ್ಸಿ ಚಾಲಕರಿಗೆ 4 ವಿಶೇಷ ಯೋಜನೆ ಘೋಷಿಸಿದ ಕೇಜ್ರಿವಾಲ್
ಹಸರಂಗ ನಂ.1
ಬೌಲಿಂಗ್ ವಿಭಾಗದಲ್ಲಿ ಆ್ಯಡಂ ಝಂಪ (3) ಮತ್ತು ಜೋಶ್ ಹ್ಯಾಝಲ್‌ವುಡ್ 2 ಸ್ಥಾನ ಮೇಲೇರಿದ್ದಾರೆ (6). ವನಿಂದು ಹಸರಂಗ ನಂ.1 ಬೌಲರ್ ಆಗಿ ಮುಂದುವರಿದಿದ್ದಾರೆ. ಟಾಪ್-10 ಬೌಲಿಂಗ್ ಯಾದಿಯಲ್ಲಿ ಭಾರತದ ಯಾವುದೇ ಬೌಲರ್‌ಗಳಿಲ್ಲ.
ಟಿ20 ಆಲ್‌ರೌಂಡರ್‌ಗಳಲ್ಲಿ ಇಂಗ್ಲೆಂಡಿನ ಲಿಯಮ್ ಲಿವಿಂಗ್‌ಸ್ಟೋನ್ 7 ಸ್ಥಾನ ಮೇಲೇರಿದರೆ, ಮೊಯಿನ್ ಅಲಿ 3 ಸ್ಥಾನಗಳ ಪ್ರಗತಿ ಕಂಡರು. ಇವರಿಬ್ಬರು ಕ್ರಮವಾಗಿ 3ನೇ ಹಾಗೂ 8ನೇ ಸ್ಥಾನದಲ್ಲಿದ್ದಾರೆ.
ಟಾಪ್-10 ಬ್ಯಾಟ್ಸ್‌ಮನ್
1. ಬಾಬರ್ ಆಜಂ 839
2. ಡೇವಿಡ್ ಮಲಾನ್ 805
3. ಐಡನ್ ಮಾರ್ಕ್‌ರಮ್ 796
4. ಡೇವನ್ ಕಾನ್ವೆ 747
5. ಮೊಹಮ್ಮದ್ ರಿಜ್ವಾನ್ 742
6. ಕೆ.ಎಲ್. ರಾಹುಲ್ 727
7. ಆರನ್ ಫಿಂಚ್ 709
8. ವಿರಾಟ್ ಕೊಹ್ಲಿ 698
9. ಜಾಸ್ ಬಟ್ಲರ್ 674
10. ರಸ್ಸಿ ಡುಸೆನ್ 669
ಟಾಪ್-10 ಬೌಲರ್
1. ವನಿಂದು ಹಸರಂಗ 797
2. ತಬ್ರೇಜ್ ಶಮಿÕ 784
3. ಆ್ಯಂಡಂ ಝಂಪ 725
4. ಆದಿಲ್ ರಶೀದ್ 719
5. ರಶೀದ್ ಖಾನ್ 710
6. ಜೋಶ್ ಹ್ಯಾಝಲ್‌ವುಡ್ 705
7. ಮುಜೀಬ್ ಉರ್ ರೆಹಮಾನ್ 679
8. ಅನ್ರಿಚ್ ನೋರ್ಜೆ 655
9. ಟಿಮ್ ಸೌಥಿ 629
10. ಕ್ರಿಸ್ ಜೋರ್ಡನ್ 619
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.