ಇಂಗ್ಲೆಂಡನ್ನು ಕೆಡವಿದ ಆಸ್ಟ್ರೇಲಿಯಕ್ಕೆ 4ನೇ ಕಿರೀಟ
Team Udayavani, Nov 26, 2018, 6:00 AM IST
ನಾರ್ತ್ ಸೌಂಡ್ (ಆ್ಯಂಟಿಗುವಾ): ಆಸ್ಟ್ರೇಲಿಯದ ವನಿತೆಯರು ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮರಳಿ ಪ್ರಭುತ್ವ ಸ್ಥಾಪಿಸಿದ್ದಾರೆ. ಶನಿವಾರ ರಾತ್ರಿ ನಡೆದ ಪ್ರಶಸ್ತಿ ಕಾಳಗದಲ್ಲಿ ಇಂಗ್ಲೆಂಡನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸುವ ಮೂಲಕ 4ನೇ ಸಲ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
“ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ’ನಲ್ಲಿ ನಡೆದ ಈ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 19.4 ಓವರ್‌ಗಳಲ್ಲಿ ಕೇವಲ 105 ರನ್ನಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡರೆ, ಮೆಗ್ ಲ್ಯಾನಿಂಗ್ ನೇತೃತ್ವದ ಆಸ್ಟ್ರೇಲಿಯ 15.1 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 106 ರನ್ ಗಳಿಸಿ ಜಯಭೇರಿ ಮೊಳಗಿಸಿತು.
ಇದು 6ನೇ ವಿಶ್ವಕಪ್ ಆವೃತ್ತಿ. ಆದರೆ ಆಸ್ಟ್ರೇಲಿಯ 5 ಆವೃತ್ತಿಗಳಲ್ಲಿ 4ನೇ ಸಲ ಚಾಂಪಿಯನ್ ಆಗಿ ಮೆರೆದಾಡಿತು. 2009ರ ಮೊದಲ ಆವೃತ್ತಿಯಲ್ಲಿ ಇಂಗ್ಲೆಂಡ್ ಪ್ರಶಸ್ತಿ ಎತ್ತಿತ್ತು. ಪ್ರಸಕ್ತ ಕೂಟವೂ ಸೇರಿದಂತೆ, ಅನಂತರ 3 ಸಲ ಫೈನಲ್ ತಲುಪಿದರೂ ಇಂಗ್ಲೆಂಡಿಗೆ ಪ್ರಶಸ್ತಿ ಮರೀಚಿಕೆಯೇ ಆಗಿ ಉಳಿಯಿತು. ಇನ್ನೊಂದೆಡೆ ಆಸ್ಟ್ರೇಲಿಯ 2010, 2012 ಮತ್ತು 2014ರ ಹ್ಯಾಟ್ರಿಕ್ ಸಾಧನೆ ಬಳಿಕ ಒಂದು ಬ್ರೇಕ್ ಪಡೆದು ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಯಿತು.
2016ರ ಕೋಲ್ಕತಾ ಫೈನಲ್‌ನಲ್ಲಿ ಆಸೀಸ್ ಪಡೆ 8 ವಿಕೆಟ್‌ಗಳಿಂದ ವೆಸ್ಟ್ ಇಂಡೀಸಿಗೆ ಶರಣಾಗಿ ಕಪ್ ತಪ್ಪಿಸಿಕೊಂಡಿತ್ತು. ಈ ಬಾರಿ 8 ವಿಕೆಟ್‌ಗಳಿಂದ ಇಂಗ್ಲೆಂಡನ್ನು ಮಣಿಸಿ ಮರಳಿ ಟ್ರೋಫಿ ಎತ್ತಿ ಹಿಡಿಯಿತು. ಇಂಗ್ಲೆಂಡ್ ಸೆಮಿಫೈನಲ್‌ನಲ್ಲಿ ಭಾರತವನ್ನು 8 ವಿಕೆಟ್ ಅಂತರದಿಂದ ಮಣಿಸಿತ್ತು.
ಇಂಗ್ಲೆಂಡ್ ಕಳಪೆ ಬ್ಯಾಟಿಂಗ್
ಭಾರತದೆದುರು ಸೆಮಿಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಇಂಗ್ಲೆಂಡ್, ಪ್ರಶಸ್ತಿ ಕಾಳಗದಲ್ಲಿ ಅಷ್ಟೇ ಕಳಪೆ ಆಟ ಪ್ರದರ್ಶಿಸಿತು. ಆಫ್ಸ್ಪಿನ್ನರ್ ಆ್ಯಶ್ಲಿ ಗಾರ್ಡನರ್ (22ಕ್ಕೆ 3), ಜಾರ್ಜಿಯಾ ವೇರ್‌ಹ್ಯಾಮ್ (11ಕ್ಕೆ 2), ಮಧ್ಯಮ ವೇಗಿ ಮೆಗಾನ್ ಶಟ್ (13ಕ್ಕೆ 2) ಸೇರಿಕೊಂಡು ಇಂಗ್ಲೆಂಡ್ ಬ್ಯಾಟಿಂಗ್ ಸರದಿಯನ್ನು ಶಟ್‌ಡೌನ್ ಮಾಡಿದರು. ವೇರ್‌ಹ್ಯಾಮ್ ಸತತ ಎಸೆತಗಳಲ್ಲಿ ವಿನ್‌ಫೀಲ್ಡ್ ಮತ್ತು ಡಂಕ್ಲಿ ವಿಕೆಟ್ ಉರುಳಿಸಿದರು. ಬ್ಯಾಟಿಂಗಿನಲ್ಲೂ ಮಿಂಚಿದ ಗಾರ್ಡನರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಇಂಗ್ಲೆಂಡ್ ಸರದಿಯಲ್ಲಿ ಎರಡಂಕೆಯ ಸ್ಕೋರ್ ದಾಖಲಿಸಿದ್ದು ಇಬ್ಬರು ಮಾತ್ರ. ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ ಸರ್ವಾಧಿಕ 43, ನಾಯಕಿ ಹೀತರ್ ನೈಟ್ 25 ರನ್ ಹೊಡೆದರು. ಸಿಡಿದದ್ದು 7 ಬೌಂಡರಿ ಮತ್ತು 2 ಸಿಕ್ಸರ್ ಮಾತ್ರ. ಇದರಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ವ್ಯಾಟ್ ಬ್ಯಾಟಿನಿಂದ ಸಿಡಿದಿತ್ತು.
ಆಸೀಸ್ ಸುಲಭ ಚೇಸಿಂಗ್
ಸಣ್ಣ ಮೊತ್ತದ ಸವಾಲನ್ನು ಆಸ್ಟ್ರೇಲಿಯ ಸುಲಭದಲ್ಲೇ ಹಿಂದಿಕ್ಕಿತು. ಓಪನರ್ ಬೆತ್ ಮೂನಿ (14) ಬೇಗನೇ ಔಟಾದರೂ, ಪ್ರಚಂಡ ಫಾರ್ಮ್ನಲ್ಲಿದ್ದ ಅಲಿಸ್ಸಾ ಹೀಲಿ (22), ಆ್ಯಶ್ಲಿ ಗಾರ್ಡನರ್ (ಔಟಾಗದೆ 33), ಮೆಗ್ ಲ್ಯಾನಿಂಗ್ (ಔಟಾಗದೆ 28) ಸೇರಿಕೊಂಡು ಆಸೀಸ್ ಗೆಲುವು ಸಾರಿದರು. ಕೂಟದಲ್ಲೇ ಸರ್ವಾಧಿಕ 225 ರನ್ ಹೊಡೆದ ಹೀಲಿ ಸರಣಿಶ್ರೇಷ್ಠರೆನಿಸಿದರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-19.4 ಓವರ್‌ಗಳಲ್ಲಿ 105 (ವ್ಯಾಟ್ 43, ನೈಟ್ 25, ಗಾರ್ಡನರ್ 22ಕ್ಕೆ 3, ವೇರ್‌ಹ್ಯಾಮ್ 11ಕ್ಕೆ 2, ಶಟ್ 13ಕ್ಕೆ 2). ಆಸ್ಟ್ರೇಲಿಯ-15.1 ಓವರ್‌ಗಳಲ್ಲಿ 2 ವಿಕೆಟಿಗೆ 106 (ಗಾರ್ಡನರ್ ಔಟಾಗದೆ 33, ಲ್ಯಾನಿಂಗ್ ಔಟಾಗದೆ 28, ಹೀಲಿ 22, ಎಕ್Éಸ್ಟೋನ್ 12ಕ್ಕೆ 1, ಹ್ಯಾಜೆಲ್ 19ಕ್ಕೆ 1).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.