ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
ಕೊನೆ ಕ್ಷಣದಲ್ಲಿ ಗಾಯಾಳಾಗಿ ನಿವೃತ್ತಿಯಾದ ನಾಯಕಿ ಕೌರ್
Team Udayavani, Oct 6, 2024, 6:53 PM IST
ದುಬೈ : ಇಲ್ಲಿನ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಯಲ್ಲಿ ರವಿವಾರ(ಅ6) ನಡೆದ ಐಸಿಸಿ ವನಿತಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ಭಾರತ ಗೆಲುವಿನ ನಗೆ ಬೀರಿದೆ.
ಪಾಕಿಸ್ಥಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತಾದರೂ ಭಾರತದ ಬಿಗಿ ದಾಳಿಗೆ ನಲುಗಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 105 ರನ್ ಗಳನ್ನಷ್ಟೇ ಕಲೆ ಹಾಕಲು ಶಕ್ತವಾಯಿತು. ಗುರಿ ಬೆನ್ನಟ್ಟಿದ ಭಾರತ 18.5 ಓವರ್ ಗಳಲ್ಲಿ 108 ರನ್ ಗಳಿಸಿ 6 ವಿಕೆಟಿಗಳ ಗೆಲುವು ತನ್ನದಾಗಿಸಿಕೊಂಡಿತು.
ಸ್ಮೃತಿ ಮಂಧಾನ 7 ರನ್ ಗಳಿಸಿ ಬೇಗನೆ ನಿರ್ಗಮಿಸಿದರು.ತಾಳ್ಮೆಯ ಆಟವಾಡಿದ ಶಫಾಲಿ ವರ್ಮ 32 ರನ್, ಜೆಮಿಮಾ ರಾಡ್ರಿಗಸ್ 23 ಗಳಿಸಿ ಔಟಾದರು. ರಿಚಾ ಘೋಷ್ ಶೂನ್ಯಕ್ಕೆ ನಿರ್ಗಮಿಸಿದರು. ದೀಪ್ತಿ ಶರ್ಮ ಔಟಾಗದೆ 7 ರನ್, ಎಸ್ ಸಜನಾ ಔಟಾಗದೆ 4 ಕೊಡುಗೆ ನೀಡಿದರು.
ಕೊನೆ ಕ್ಷಣದಲ್ಲಿ ಗಾಯಾಳಾಗಿ ನಿವೃತ್ತಿಯಾದ ನಾಯಕಿ ಕೌರ್
ಗೆಲ್ಲಲು ಎರಡೇ ರನ್ ಬಾಕಿಯಿದ್ದಾಗ ದೊಡ್ಡ ಹೊಡೆತಕ್ಕೆ ಮುಂದಾದ ನಾಯಕಿ ಕೌರ್ ಸ್ಟಂಪ್ ಔಟ್ ಆಗುವುದನ್ನು ತಪ್ಪಿಸಲು ಹೋಗಿ ಕತ್ತು ಉಳುಕಿಸಿಕೊಂಡು ಗಾಯಾಳಾಗಿ ನಿವೃತ್ತಿಯಾದರು. ಅವರು ಉತ್ತಮ ಆಟವಾಡಿ 29 ರನ್ ರನ್ ಕೊಡುಗೆ ನೀಡಿದರು.
ಪಾಕ್ ಆರಂಭಿಕ ಆಟಗಾರ್ತಿ ಮುನೀಬಾ ಅಲಿ 17, ನಿದಾ ದಾರ್ 28, ನಾಯಕಿ ಫಾತಿಮಾ ಸನಾ 13 ರನ್ ಗಳಿಸಿ ಔಟಾದರು. ಉಳಿದ ಆಟಗಾರ್ತಿಯರು ಹೆಚ್ಚು ಹೊತ್ತು ನಿಲ್ಲಲು ಭಾರತದ ಬೌಲರ್ಸ್ ಅವಕಾಶ ಮಾಡಿಕೊಡಲಿಲ್ಲ. ಕೊನೆಯಲ್ಲಿ ಸೈಯದಾ ಅರೂಬ್ ಶಾ ಔಟಾಗದೆ 14 ರನ್ ಗಳಿಸಿ ತಂಡ ನೂರರ ಗಡಿ ದಾಟಲು ನೆರವಾದರು.
ಭಾರತದ ಪರ ಬಿಗಿ ದಾಳಿ ನಡೆಸಿದ ಆರುಂಧತಿ ರೆಡ್ಡಿ 19 ರನ್ ನೀಡಿ 3 ವಿಕೆಟ್ ಕಿತ್ತರು. ಕನ್ನಡತಿ ಶ್ರೇಯಾಂಕಾ ಪಾಟೀಲ್ 12 ರನ್ ನೀಡಿ 2 ವಿಕೆಟ್ ಕಿತ್ತರು. 1 ಮೇಡನ್ ಓವರ್ ಕೂಡ ಶ್ರೇಯಾಂಕಾ ಎಸೆದರು. ರೇಣುಕಾ ಸಿಂಗ್, ದೀಪ್ತಿ ಶರ್ಮ, ಆಶಾ ಶೋಭನಾ ತಲಾ ಒಂದು ವಿಕೆಟ್ ಕಿತ್ತರು.
ಮೊದಲ ಮುಖಾಮುಖಿಯಲ್ಲಿ ನ್ಯೂಜಿಲ್ಯಾಂಡ್ ಎದುರು ಆಘಾತಕಾರಿ ಸೋಲು ಅನುಭವಿಸಿದ್ದ ಭಾರತ ತಂಡಕ್ಕೆ ಸಾಂಪ್ರ ದಾಯಿಕ ಎದುರಾಳಿಯ ಎದುರು ಗೆಲುವು ಹೊಸ ಉತ್ಸಾಹ ತುಂಬಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.