ICC Womens T20 World Cup; ಹರಿಣಗಳಿಗೆ ಸೋಲುಣಿಸಿ ಚಾಂಪಿಯನ್‌ ಆದ ಕಿವೀಸ್


Team Udayavani, Oct 20, 2024, 10:46 PM IST

1-a-kivi

ದುಬೈ : ಇಲ್ಲಿ ರವಿವಾರ(ಅ 20) ನಡೆದ ಐಸಿಸಿ ವನಿತಾ ಟಿ 20 ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸೋಲುಣಿಸಿದ ನ್ಯೂಜಿಲ್ಯಾಂಡ್ ನೂತನ ಚಾಂಪಿಯನ್‌ ಎನಿಸಿಕೊಂಡಿದೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನ್ಯೂಜಿಲ್ಯಾಂಡ್ 5 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಲಷ್ಟೇ ಶಕ್ತವಾಯಿತು.

ಕಿವೀಸ್ ಪರ ಬ್ಯಾಟಿಂಗ್ ನಲ್ಲಿ ಸುಜಿ ಬೇಟ್ಸ್ 32, ಜಾರ್ಜಿಯಾ ಪ್ಲಿಮ್ಮರ್ 9, ಅಮೆಲಿಯಾ ಕೆರ್ 43, ನಾಯಕಿ ಸೋಫಿ ಡಿವೈನ್ 6, ಬ್ರೂಕ್ ಹ್ಯಾಲಿಡೇ 38, ಮ್ಯಾಡಿ ಗ್ರೀನ್ ಔಟಾಗದೆ 12 ಮತ್ತು ಇಸಾಬೆಲ್ಲಾ ಗೇಜ್ 3 ರನ್ ಕೊಡುಗೆ ಸಲ್ಲಿಸಿದರು.

ಹರಿಣಗಳ ಪರ ಬೌಲಿಂಗ್ ನಲ್ಲಿ ನಾನ್ಕುಲುಲೆಕೊ ಮ್ಲಾಬಾ 2 ವಿಕೆಟ್ ಕಿತ್ತರು. ಕ್ಲೋಯ್ ಟ್ರಯಾನ್ ಮತ್ತು ಅಯಬೊಂಗ ಖಾಕಾ ತಲಾ ಒಂದು ವಿಕೆಟ್ ಪಡೆದರು.

ಹರಿಣಗಳ ಪರ ಮೊದಲ 7 ಓವರ್ ಗಳಲ್ಲಿ ನಾಯಲಿ ಲಾರಾ ವೊಲ್ವಾರ್ಡ್ಟ್ ಮತ್ತು ತಜ್ಮಿನ್ ಬ್ರಿಟ್ಸ್ 51 ರನ್ ಜತೆಯಾಟ ಆಡಿದರು. ಆದರೆ 17 ರನ್ ಗಳಿಸಿದ್ದ ತಜ್ಮಿನ್ ಔಟಾದರು. ಆ ಬಳಿಕ 33 ರನ್ ಗಳಿಸಿದ್ದ ಲಾರಾ ಪೆವಿಲಿಯನ್ ಗೆ ಮರಳಿದರು. ಉಳಿದ ಯಾರಿಗೂ ಗಟ್ಟಿ ನಿಂತು ಕಿವೀಸ್ ದಾಳಿ ಎದುರಿಸಲು ಸಾಧ್ಯವಾಗಲಿಲ್ಲ.

ಈವರೆಗೆ ಆಸ್ಟ್ರೇಲಿಯ (6 ಸಲ), ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ (ತಲಾ ಒಮ್ಮೆ) ಮಾತ್ರ ಪ್ರಶಸ್ತಿ ಎತ್ತಿದ್ದವು. ‘ಆಸ್ಟ್ರೇಲಿಯವನ್ನು ಸೋಲಿಸಿ ದವರಿಗೆ ವಿಶ್ವಕಪ್‌’ ಎಂಬುದು ಈ ಪಂದ್ಯಾವಳಿಗೂ ಅನ್ವಯಿಸಿದ ಮಾತಾಗಿತ್ತು. ಅದು ಸತತ 3 ಬಾರಿಯ ವಿಶ್ವ ಚಾಂಪಿಯನ್‌ ಎಂಬ ಹಿರಿಮೆಯೊಂದಿಗೆ ಕಣಕ್ಕಿಳಿದಿತ್ತು. ಇಲ್ಲಿ ಹರಿಣಗಳ ಪಡೆ ಕಾಂಗರೂ ಕತೆಯನ್ನು ಸೆಮಿಫೈನಲ್‌ನಲ್ಲಿ ಮುಗಿಸಿ ಫೈನಲ್‌ಗೆ ಲಗ್ಗೆ ಹಾಕಿತ್ತು. ಇದು ದಕ್ಷಿಣ ಆಫ್ರಿಕಾ ಕಾಣುತ್ತಿರುವ ಸತತ 2ನೇ ಫೈನಲ್‌ ಸೋಲು. ಕಳೆದ ಸಲ ಆಸ್ಟ್ರೇಲಿಯ ವಿರುದ್ಧ ತವರಿನ ಕೇಪ್‌ಟೌನ್‌ ಅಂಗಳದಲ್ಲೇ 19 ರನ್ನಿನಿಂದ ಸೋತು ಕಣ್ಣೀರು ಸುರಿಸಿತ್ತು. ಈ ಬಾರಿ ನ್ಯೂಜಿಲ್ಯಾಂಡ್‌ ಸವಾಲನ್ನು ಎದುರಿಸಲಾಗದೆ ಸೋಲಿಗೆ ಶರಣಾಗಿದೆ.

ಟಾಪ್ ನ್ಯೂಸ್

RJD

Election: ಝಾರ್ಖಂಡ್‌ನ‌ಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ ವಿಪಕ್ಷಕ್ಕೆ ಬೆಂಬಲ: ಆರ್‌ಜೆಡಿ

Panaji

Panaji: ಮುಟ್ಟಾದ ಮಹಿಳೆ ಮನೆಯಿಂದ ಹೊರಗೆ: ಸುಪ್ರೀಂ ನ್ಯಾಯಮೂರ್ತಿ ಕಳವಳ

Raja-Acci

Accident: ರಾಜಸ್ಥಾನದಲ್ಲಿ ಟೆಂಪೋ-ಬಸ್‌ ಡಿಕ್ಕಿ: 12 ಮಂದಿ ದುರ್ಮರಣ

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Isha-Found

Compliant: ಈಶಾ ಸಂಸ್ಥೆಯಲ್ಲಿ ಮಗನಿಗೆ ಲೈಂಗಿಕ ದೌರ್ಜನ್ಯ: ದಂಪತಿ ಆರೋಪ

ODISHA-GIRL

Odisha: ಕುಟುಂಬಸ್ಥರ ಕಣ್ತಪ್ಪಿಸಲು ಟ್ರಂಕ್‌ನಲ್ಲಿ ಪ್ರಿಯಕರನ ಬಚ್ಚಿಟ್ಟ ಯುವತಿ!

Newz-Air

Policy: ವಿಮಾನ ನಿಲ್ದಾಣದಲ್ಲಿ ಅಪ್ಪುಗೆಗೆ ಸಮಯ ಮಿತಿ ಹೇರಿದ ನ್ಯೂಜಿಲೆಂಡ್‌ ಸರಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kar-kerala

Ranaji Trophy: ಕರ್ನಾಟಕ-ಕೇರಳ ಮೂರನೇ ದಿನದಾಟ ರದ್ದು

BNg-Bulls

Pro Kabaddi: ಬೆಂಗಳೂರು ಬುಲ್ಸ್‌ಗೆ ಮತ್ತೊಂದು ಸೋಲು

1-aa-bree

New Zealand ವಿರುದ್ಧ ಟೆಸ್ಟ್‌ : ಟೀಮ್ ಇಂಡಿಯಾಕ್ಕೆ ವಾಷಿಂಗ್ಟನ್ ಸುಂದರ್ ಸೇರ್ಪಡೆ

WTC 2024: How is the Test Championship standings after India’s defeat?

WTC 2025: ಭಾರತದ ಸೋಲಿನ ಬಳಿಕ ಹೇಗಿದೆ ಟೆಸ್ಟ್‌ ಚಾಂಪಿಯನ್‌ ಶಿಪ್‌ ಅಂಕಪಟ್ಟಿ

INDvsNZ: A huge win for New Zealand in Bengaluru

INDvsNZ: ನಡೆಯದ ಮ್ಯಾಜಿಕ್;‌ 36 ವರ್ಷದ ಬಳಿಕ ಭಾರತದಲ್ಲಿ ಟೆಸ್ಟ್‌ ಗೆದ್ದ ಕಿವೀಸ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

RJD

Election: ಝಾರ್ಖಂಡ್‌ನ‌ಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ ವಿಪಕ್ಷಕ್ಕೆ ಬೆಂಬಲ: ಆರ್‌ಜೆಡಿ

Panaji

Panaji: ಮುಟ್ಟಾದ ಮಹಿಳೆ ಮನೆಯಿಂದ ಹೊರಗೆ: ಸುಪ್ರೀಂ ನ್ಯಾಯಮೂರ್ತಿ ಕಳವಳ

Raja-Acci

Accident: ರಾಜಸ್ಥಾನದಲ್ಲಿ ಟೆಂಪೋ-ಬಸ್‌ ಡಿಕ್ಕಿ: 12 ಮಂದಿ ದುರ್ಮರಣ

Chattsi-Blood

Chhattisgarh: ಅಜ್ಜಿಯ ನರಬಲಿ ನಡೆಸಿ ಶಿವಲಿಂಗಕ್ಕೆ ರಕ್ತ ಅರ್ಪಣೆ!

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.