ಐಸಿಸಿ ವನಿತಾ ವಿಶ್ವಕಪ್: ಇಂದು ಭಾರತಕ್ಕೆ ಆಸ್ಟ್ರೇಲಿಯ ಸವಾಲು
Team Udayavani, Jul 20, 2017, 5:25 AM IST
ಡರ್ಬಿ: ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ಭಾರತ ಗೆಲ್ಲುವುದು ಬಹಳ ಕಷ್ಟವೆಂದು ಎಲ್ಲರೂ ಭಾವಿಸಿರಬಹುದು. ಆದರೆ ಬಹಳಷ್ಟು ಆತ್ಮವಿಶ್ವಾಸದಲ್ಲಿರುವ ಭಾರತೀಯ ವನಿತೆಯರು ಐಸಿಸಿ ವನಿತಾ ವಿಶ್ವಕಪ್‌ನ ಗುರುವಾರ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಗೆಲ್ಲುವ ಉತ್ಸಾಹದಲ್ಲಿದೆ.
ಆಸ್ಟ್ರೇಲಿಯ ವಿರುದ್ಧ ಭಾರತದ ದಾಖಲೆ ಕೂಡ ಕಳಪೆಯಾಗಿದೆ. ಉಭಯ ತಂಡಗಳ ನಡುವೆ ನಡೆದ 42 ಪಂದ್ಯಗಳಲ್ಲಿ ಭಾರತ 34 ಪಂದ್ಯಗಳಲ್ಲಿ ಸೋತಿದೆ. ಆದರೆ ಮಿಥಾಲಿ ರಾಜ್ ನಾಯಕತ್ವದ ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಸೋಲಿನ ಸರಮಾಲೆಗೆ ಅಂತ್ಯ ಹಾಡುವ ಗುರಿಯನ್ನು ಇಟ್ಟುಕೊಂಡು ಹೋರಾಟಕ್ಕೆ ಇಳಿಯಲಿದೆ.
ಒಂದು ವೇಳೆ ಭಾರತ ಗೆದ್ದರೆ ವಿಶ್ವಕಪ್ ಇತಿಹಾಸದಲ್ಲಿಯೇ ದ್ವಿತೀಯ ಬಾರಿಗೆ ಲಾರ್ಡ್ಸ್‌ನಲ್ಲಿ ನಡೆಯಲಿರುವ ಫೈನಲ್ ಹೋರಾಟಕ್ಕೆ ಅರ್ಹತೆ ಗಳಿಸಲಿದೆ. ಭಾರತ ಈ ಹಿಂದೆ 2005ರಲ್ಲಿ ನಡೆದ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಈ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಕ್ಕೆ ಶರಣಾಗಿತ್ತು.
ರೌಂಡ್ ರಾಬಿನ್ ಹಂತದ ಪಂದ್ಯಗಳು ಮುಗಿದಾಗ ಭಾರತ ಐದು ಗೆಲುಉ ಮತ್ತು ಎರಡು ಸೋಲಿನೊಂದಿಗೆ ಮೂರನೇ ಸ್ಥಾನ ಪಡೆದಿದ್ದರೆ ಆಸ್ಟ್ರೇಲಿಯ ಆರು ಗೆಲುವಿನೊಂದಿಗೆ ದ್ವಿತೀಯ ಸ್ಥಾನ ಪಡೆದಿತ್ತು.
ಸೆಮಿಫೈನಲ್ ಹೋರಾಟವು ಇಲ್ಲಿನ ಕೌಂಟಿ ಗ್ರೌಂಡ್‌ನಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಭಾರತ ರೌಂಡ್ ರಾಬಿನ್ ಹಂತದಲ್ಲಿ ನಾಲ್ಕು ಪಂದ್ಯಗಳನ್ನು ಆಡಿದೆ. ಹಾಗಾಗಿ ಇಲ್ಲಿನ ಪಿಚ್ ಹೇಗೆ ವರ್ತಿಸುತ್ತದೆ ಎಂಬುದು ಭಾರತೀಯ ಆಟಗಾರ್ತಿಯರಿಗೆ ಮನದಟ್ಟಾಗಿದೆ. ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಅಂತಿಮ ಲೀಗ್ ಪಂದ್ಯವೂ ಇದರಲ್ಲಿ ಸೇರಿದೆ. ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಮೋಘವಾಗಿ ಆಡಿ ಭಾರೀ ಅಂತರದಿಂದ ಗೆಲುವು ಸಾಧಿಸಿ ಸೆಮಿಫೈನಲಿಗೇರಿತ್ತು.
ಆದರೆ ಆಸ್ಟ್ರೇಲಿಯ ಇನ್ನೂ ಈ ಪಿಚ್‌ನಲ್ಲಿ ಯಾವುದೇ ಪಂದ್ಯ ಆಡಿಲ್ಲ. ಹಾಗಾಗಿ ಭಾರತ ಇದರ ಲಾಭ ಪಡೆದು ಗಮನಾರ್ಹ ನಿರ್ವಹಣೆ ನೀಡಲು ಪ್ರಯತ್ನಿಸಬೇಕಾಗಿದೆ. ಲೀಗ್ ಹಂತದಲ್ಲಿ ಭಾರತ ಆಸ್ಟ್ರೇಲಿಯಕ್ಕೆ ಭಾರೀ ಅಂತರದಿಂದ ಸೋತಿತ್ತು. ಹಾಗಾಗಿ ಸೇಡು ತೀರಿಸಿಕೊಳ್ಳಲು ಭಾರತ ಪ್ರಯತ್ನಿಸಬೇಕಾಗಿದೆ.
ಇದು ನಮ್ಮ ಹೋಮ್ ಗ್ರೌಂಡ್. ನಾವಿಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದೇವೆ ಮತ್ತು ಇಲ್ಲಿನ ಪಿಚ್ ಹೇಗೆ ವರ್ತಿಸಲಿದೆ ಎಂಬುದು ನಮಗೆ ತಿಳಿಸಿದೆ. ನಮ್ಮ ಆಟಗಾರ್ತಿಯರು ತವರಿನಲ್ಲಿ ಆಡುವ ಅನುಭವ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.
ವಿಶ್ವಕಪ್ ಫೈನಲ್ ಮತ್ತು ಈ ಸಲ ರೌಂಡ್ ರಾಬಿನ್ ಹಂತದಲ್ಲಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಇದು ಸರಿಯಾದ ಸಮಯವಾಗಿದೆ. ಬ್ರಿಸ್ಟಲ್‌ನಲ್ಲಿ ಒಂದು ವಾರ ಹಿಂದೆ ನಡೆದ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯ 8 ವಿಕೆಟ್‌ಗಳ ಜಯ ಸಾಧಿಸಿತ್ತು. ಹಾಗಾಗಿ ನಿರ್ಣಾಯಕ ಹಂತದಲ್ಲಿ ಭಾರತ ಸೇಡು ತೀರಿಸಿದರೆ ಸುಲಭವಾಗಿ ಫೈನಲಿಗೇರಲಿದೆ. ಆದರೆ ಇದನ್ನು ಹೇಳುವುದು ಬಲು ಸುಲಭ. ಆದರೆ ಕಾರ್ಯರೂಪಕ್ಕೆ ತರಳು ಬಹಳ ಕಷ್ಟ. ಪಂದ್ಯದ ಪ್ರತಿಯೊಂದು ವಿಭಾಗದಲ್ಲಿಯೂ ಭರ್ಜರಿ ಆಟವಾಡಿದರೆ ಭಾರತವು ಆಸ್ಟ್ರೇಲಿಯವನ್ನು ಉರುಳಿಸಬಹುದು.
ರೌಂಡ್ ರಾಬಿನ್ ಹಂತದಲ್ಲಿ ಆಸ್ಟ್ರೇಲಿಯ ವಿರುದ್ಧ ಮಿಥಾಲಿ ಅಮೋಘವಾಗಿ ಆಡಿದ್ದರೆ ಪೂನಂ ರಾವತ್ ಶತಕ ಬಾರಿಸಿದ್ದರು. ಅವರಿಬ್ಬರು ಸೆಮಿಫೈನಲ್ ಹೋರಾಟದಲ್ಲಿ ಉತ್ತಮವಾಗಿ ಆಡಿದರೆ ಭಾರತಕ್ಕೆ ಮುನ್ನಡೆಯುವ ಅವಕಾಶವಿದೆ. ನ್ಯೂಜಿಲ್ಯಾಂಡ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಪಂದ್ಯದಲ್ಲಿ ಮಿಥಾಲಿ ಆಕರ್ಷಕ ಶತಕ ದಾಖಲಿಸಿದ್ದರೆ ವೇದಾ ಕೃಷ್ಣಮೂರ್ತಿ ಸ್ಫೋಟಕ ಆಟವಾಡಿ ಭಾರತದ ಉತ್ತಮ ಮೊತ್ತಕ್ಕೆ ಕಾರಣರಾಗಿದ್ದರು. ಅವರಿಬ್ಬರಲ್ಲದೇ ಹರ್ಮನ್‌ಪ್ರೀತ್ ಕೌರ್ ಕೂಡ ಅರ್ಧಶತಕ ಹೊಡೆದಿದ್ದರು.
ಆಬಳಿಕ ಭಾರತೀಯ ಬೌಲರ್‌ಗಳು ಈ ಕೂಟದಲ್ಲಿ ಮೊದಲ ಬಾರಿ ಉತ್ಕೃಷ್ಟಮಟ್ಟದ ದಾಳಿ ನಡೆಸಿದರು. ಇದರಿಂದ ದಿಗಿಲುಗೊಂಡ ನ್ಯೂಜಿಲ್ಯಾಂಡ್ ವನಿತೆಯರು ಕೇವಲ 79 ರನ್ನಿಗೆ ಆಲೌಟಾದರು. ಇದರಿಂದ ಭಾರತ 186 ರನ್ನುಗಳ ಭಾರೀ ಅಂತರದ ಜಯ ಸಾಧಿಸಿತು.
ಆದರೆ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರ ಫಾರ್ಮ್ ಚಿಂತೆಗೆ ಕಾರಣವಾಗಿದೆ. ಕೂಟದ ಆರಂಭದ ಕೆಲವು ಪಂದ್ಯಗಳಲ್ಲಿ ಭರ್ಜರಿ ಆಟವಾಡಿದ್ದ ಅವರು ಆಬಳಿಕ ಬೇಗನೇ ಔಟಾಗಿ ನಿರಾಸೆ ಮೂಡಿಸಿದ್ದಾರೆ. ಒಂದು ವೇಳೆ ಅವರು ಕೂಡ ಫಾರ್ಮ್ಗೆ ಮರಳಿದರೆ ಭಾರತ ಗೆಲ್ಲಲು ಪ್ರಯತ್ನಿಸಬಹುದಾಗಿದೆ.
ಬೌಲಿಂಗ್‌ನಲ್ಲಿ ಭಾರತೀಯ ನಿಧಾನಗತಿಯ ಬೌಲರ್‌ಗಳು ಗಮನಾರ್ಹ ನಿರ್ವಹಣೆ ನೀಡಿದ್ದಾರೆ. ಆದರೆ ಖ್ಯಾತ ಬೌಲರ್ ಜೂಲನ್ ಗೋಸ್ವಾಮಿ ಮಾತ್ರ ನಿರೀಕ್ಷಿತ ದಾಳಿ ಸಂಘಟಿಸಿಲ್ಲ. ಆದರೆ ಆಸ್ಟ್ರೇಲಿಯ ಜೂಲನ್ ಅವರ ದಾಳಿಯನ್ನು ಹಗುರವಾಗಿ ಕಾಣುವ ಸಾಧ್ಯತೆಯಿಲ್ಲ. ಒಟ್ಟು 190 ವಿಕೆಟ್ ಪಡೆದಿರುವ ಅವರು ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಆಟಗಾರ್ತಿಯಾಗಿದ್ದಾರೆ. 2003ರಲ್ಲಿ ಏಕದಿನ ಕ್ರಿಕೆಟಿಗೆ ಪಾದಾರ್ಪಣೆಗೈದಿರುವ ಅವರು 200 ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂದೆನಿಸಿಕೊಳ್ಳಲು ಪ್ರಯತ್ನಿಸುವ ಸಾಧ್ಯತೆಯಿದೆ.
ಈ ವಿಶ್ವಕಪ್‌ನಲ್ಲಿ ಮೊದಲ ಪಂದ್ಯವನ್ನಾಡಿದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಮೊದಲ ಐದು ವಿಕೆಟ್‌ಗಳ ಗೊಂಚಲನ್ನು ಪಡೆದರಲ್ಲದೇ ಏಕಾಂಗಿಯಾಗಿ ನ್ಯೂಜಿಲ್ಯಾಂಡ್ ತಂಡದ ಕುಸಿತಕ್ಕೆ ಕಾರಣರಾಗಿದ್ದಾರೆ. ಹಾಗಾಗಿ ಮಿಥಾಲಿ ರಾಜ್ ಆಸ್ಟ್ರೇಲಿಯ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ತಂಡದಲ್ಲಿ ಉಳಿಸಿಕೊಳ್ಳುವ ನಿರೀಕ್ಷೆಯಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಬೃಹತ್ ಗೆಲುವಿನಿಂದ ಭಾರತ ತಂಡ ಸೆಮಿಫೈನಲ್ ಹೋರಾಟಕ್ಕೆ ಬಹಳಷ್ಟು ಆತ್ಮವಿಶ್ವಾಸದಿಂದ ಸಜ್ಜಾಗಿದೆ.
ಆಸ್ಟ್ರೇಲಿಯ ಅತ್ಯುತ್ತಮ ತಂಡಗಳಲ್ಲಿ ಒಂದಾಗಿದೆ ಮತ್ತು ಬಲಿಷ್ಠ ಕೂಡ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಬಲ್ಲ ಆಟಗಾರ್ತಿಯರಿದ್ದಾರೆ. ಆದರೆ ಪರಿಸ್ಥಿತಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬುದು ಮುಖ್ಯ. ನ್ಯೂಜಿಲ್ಯಾಂಡ್ ವಿರುದ್ಧ ನಾವು ಆಡಿದ ರೀತಿಯಲ್ಲಿಯೇ ಆಸ್ಟ್ರೇಲಿಯ ವಿರುದ್ಧವೂ ಆಡಿದರೆ ನಮಗೂ ಗೆಲ್ಲುವ ಅವಕಾಶವಿದೆ ಎಂದು ಮಿಥಾಲಿ ಹೇಳಿದ್ದಾರೆ.
ತಂಡಗಳು:
ಭಾರತ: ಮಿಥಾಲಿ ರಾಜ್ (ನಾಯಕಿ), ಏಕ್ತ ಬಿಸ್ತ್, ರಾಜೇಶ್ವರಿ ಗಾಯಕ್ವಾಡ್, ಜೂಲನ್ ಗೋಸ್ವಾಮಿ, ಮಾನ್ಸಿ ಜೋಶಿ, ಹರ್ಮನ್‌ಪ್ರೀತ್ ಕೌರ್, ವೇದಾ ಕೃಷ್ಣಮೂರ್ತಿ, ಸ್ಮತಿ ಮಂಧನಾ, ಮೋನಾ ಮೆಶ್ರಾಮ್, ಶಿಖಾ ಪಾಂಡೆ, ಪೂನಂ ಯಾದವ್, ನುಝಾತ್ ಪರ್ವೀನ್, ಪೂನಂ ರಾವತ್, ದೀಪ್ತಿ ಶರ್ಮ, ಸುಷ್ಮಾ ವೆರ್ಮ
ಆಸ್ಟ್ರೇಲಿಯ: ಮೆಗ್ ಲ್ಯಾನಿಂಗ್ (ನಾಯಕಿ), ಸಾರಾ ಆ್ಯಲೆ, ಕ್ರಿಸ್ಟನ್ ಬೀಮ್ಸ್, ಅಲೆಕ್ಸ್ ಬ್ಲ್ಯಾಕ್‌ವೆಲ್, ನಿಕೋಲೆ ಬೋಲ್ಟನ್, ಆಶೆÉ ಗಾರ್ಡ್‌ನರ್, ರಚಾಯೆಲ್ ಹೇಯ್ನ, ಅಲಿಸಾ ಹೀಲಿ, ಜೆಸ್ ಜೋನಾಸ್ಸನ್, ಬೆತ್ ಮೂನಿ, ಎಲಿಸ್ ಪೆರ್ರಿ, ಮೆಗನ್ ಶಟ್, ಬೆಲಿಂಡಾ ವಕರೆವಾ, ಎಲಿಸ್ ವಿಲಾನಿ, ಅಮಂಡಾ ಜೇಡ್ ವೆಲ್ಲಿಂಗ್ಟನ್.
ಪಂದ್ಯ ಆರಂಭ: ಸಂಜೆ 3 (ಭಾರತೀಯ ಕಾಲಮಾನ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ
Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.