ICC ವಿಶ್ವಕಪ್ ಕ್ರಿಕೆಟ್ 2ನೇ ಪಂದ್ಯ: ಪಾಕ್ ವಿರುದ್ಧ ವಿಂಡೀಸ್‌ಗೆ 7 ವಿಕೆಟ್ ಭರ್ಜರಿ ಜಯ
Team Udayavani, May 31, 2019, 7:15 PM IST
ಲಂಡನ್ : ನಾಟಿಂಗಂ ನ ಟ್ರೆಂಟ್ ಬ್ರಿಜ್ ನಲ್ಲಿ ಇಂದು ಶುಕ್ರವಾರ ನಡೆದ 2019ರ ಐಸಿಸಿ ವಿಶ್ವ ಕಪ್ ಕ್ರಿಕೆಟ್ ಕೂಟದ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್, ಪಾಕಿಸ್ಥಾನವನ್ನು ಏಳು ವಿಕೆಟ್ ಅಂತರದಲ್ಲಿ ಪರಾಭವಗೊಳಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ವೆಸ್ಟ್ ಇಂಡೀಸ್, ಪಾಕಿಸ್ಥಾನವನ್ನು ಕೇವಲ 105 ರನ್ ಗಳಿಗೆ ಆಲೌಟ್ ಮಾಡಿತು.
106 ರನ್‌ಗಳ ಅಲ್ಪ ಮೊತ್ತದ ವಿಜಯದ ಗುರಿಯನ್ನು ಕೇವಲ ಮೂರು ವಿಕೆಟ್ ನಷ್ಟಕ್ಕೆ ಸಾಧಿಸಿದ ವೆಸ್ಟ್ ಇಂಡೀಸ್, ಏಳು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ವೆಸ್ಟ್ ಇಂಡೀಸ್ ಆರಂಭಕಾರ ಕ್ರಿಸ್ ಗೇಲ್ ಕೇವಲ 34 ಎಸೆತಗಳಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ವಿಂಡೀಸ್ ವಿಜಯಕ್ಕೆ ಭದ್ರ ಬುನಾದಿ ಹಾಕಿದರು.
ಬೌಲಿಂಗ್ ನಲ್ಲಿ ಪಾಕಿಸ್ಥಾನದ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ ಒಶೇನ್ ಥಾಮಸ್, ಗರಿಷ್ಠ ವಿಕೆಟ್ ಬಾಚಿಕೊಂಡ ವಿಂಡೀಸ್ ಎಸೆಗಾರ ಎನಿಸಿಕೊಂಡರಲ್ಲದೆ ಪಂದ್ಯ ಶ್ರೇಷ್ಠರಾಗಿ ಪುರಸ್ಕೃತರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.