ICC World Cup; ಇಂಗ್ಲೆಂಡ್ ಗೆ ಇನ್ನೂ ಇದೆ ಸೆಮಿ ಫೈನಲ್ ಅವಕಾಶ: ಇಲ್ಲಿದೆ ಲೆಕ್ಕಾಚಾರ?
Team Udayavani, Nov 2, 2023, 7:05 PM IST
ಮುಂಬೈ: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡುತ್ತಿದೆ. ಆಡಿರುವ ಆರು ಪಂದ್ಯಗಳಲ್ಲಿ ಜೋಸ್ ಬಟ್ಲರ್ ನಾಯಕತ್ವದ ತಂಡವು ಗೆದ್ದಿರುವುದು ಕೇವಲ ಒಂದು ಮಾತ್ರ. ಉಳಿದ ಐದು ಪಂದ್ಯಗಳಲ್ಲಿ ಸೋಲನುಭವಿಸಿರುವ ಆಂಗ್ಲರು ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ.
ಕಳೆದ ವರ್ಷದ ಫೈನಲ್ ಪಂದ್ಯವನ್ನು ಸೂಪರ್ ಓವರ್ ನಲ್ಲಿ ಗೆದ್ದುಕೊಂಡಿದ್ದ ಇಂಗ್ಲೆಂಡ್ ಈ ಬಾರಿ ಸೆಮಿ ಫೈನಲ್ ತಲುಪುವುದು ಬಹುತೇಕ ಅನುಮಾನ. ಆದರೆ ಐದು ಪಂದ್ಯ ಸೋತರೂ ಇದುವರೆಗೆ ಅಧಿಕೃತವಾಗಿ ಕೂಟದಿಂದ ಹೊರಬಿದ್ದಿಲ್ಲ.
ಇನ್ನೂ ಸೆಮಿ ಫೈನಲ್ ಪ್ರವೇಶಿಸಲು ಇಂಗ್ಲೆಂಡ್ ಗೆ ಅಲ್ಪ ಅವಕಾಶವಿದೆ. ಅದಕ್ಕಾಗಿ ಬಟ್ಲರ್ ಬಳಗವು ಉಳಿದಿರುವ ಮೂರು ಪಂದ್ಯಗಳನ್ನು ಉತ್ತಮ ರನ್ ರೇಟ್ ನೊಂದಿಗೆ ಗೆಲ್ಲಬೇಕಿದೆ. ಇಂಗ್ಲೆಂಡ್ ತಂಡವು ಮುಂದೆ ಆಸ್ಟ್ರೇಲಿಯಾ, ನೆದರ್ಲ್ಯಾಂಡ್ ಮತ್ತು ಪಾಕಿಸ್ತಾನ ವಿರುದ್ಧ ಆಡಲಿದೆ. ಈ ಮೂರರಲ್ಲಿ ಒಂದನ್ನು ಸೋತರೂ ಇಂಗ್ಲೆಂಡ್ ನ ಸೆಮಿ ಅವಕಾಶ ಶೂನ್ಯವಾಗುತ್ತದೆ.
ಇಂಗ್ಲೆಂಡ್ ಗೆಲುವುದು ಮಾತ್ರವಲ್ಲ, ಮತ್ತೊಂದೆಡೆ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಮುಂದಿನ ತಮ್ಮ ಎಲ್ಲಾ ಪಂದ್ಯಗಳನ್ನು ಸೋಲಬೇಕು. ಈ ವೇಳೆ ಎಂಟು ಅಂಕಪಟ್ಟಿ ಪಡೆಯುವ ಇಂಗ್ಲೆಂಡ್ ಅದೃಷ್ಟದ ಬಲದಿಂದ ಸೆಮಿ ಫೈನಲ್ ಪ್ರವೇಶಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cooch Behar Trophy: ಸೆಹವಾಗ್ ಪುತ್ರನಿಂದ ದ್ವಿಶತಕ
Pro Kabaddi; ವಿಜಯ್ ಮಲಿಕ್ ಅಮೋಘ ಆಟ: ತೆಲುಗು ಟೈಟಾನ್ಸ್ ಗೆ ಗೆಲುವು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.