ICC ವಿಶ್ವ ಟೆಸ್ಟ್ ಚಾಂಪಿಯನ್ಶಿಪ್: ಭಾರತ, ಆಸ್ಟ್ರೇಲಿಯಕ್ಕೆ ಅವಕಾಶ ಅಧಿಕ
ಫೈನಲ್ ರೇಸ್ನಿಂದ ಹೊರಬಿದ್ದ ವೆಸ್ಟ್ ಇಂಡೀಸ್
Team Udayavani, Aug 20, 2024, 6:20 AM IST
ದುಬಾೖ: ಮೂರನೇ ಆವೃತ್ತಿಯ, 2023-25ನೇ ಸಾಲಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಿಕಟ ಪೈಪೋಟಿ ಕಾಣುವ ಸಾಧ್ಯತೆ ಹೆಚ್ಚಿದೆ. ಆದರೆ ಕ್ರಿಕೆಟ್ ವಿಶ್ಲೇಷಕರ ಪ್ರಕಾರ ಭಾರತ ಮತ್ತು ಆಸ್ಟ್ರೇಲಿಯ ತಂಡಗಳಿಗೆ ಫೈನಲ್ ಅವಕಾಶ ಹೆಚ್ಚು. ಹಾಗೆಯೇ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಕಳೆದುಕೊಂಡ ವೆಸ್ಟ್ ಇಂಡೀಸ್ ಈಗಾಗಲೇ ಫೈನಲ್ ರೇಸ್ನಿಂದ ಹೊರಬಿದ್ದಿದೆ.
ಆಗಸ್ಟ್ 19ಕ್ಕೆ ಅನ್ವಯಿಸಿ ಹೇಳುವುದಾದರೆ, ಪ್ರಸಕ್ತ ಟೆಸ್ಟ್ ಚಾಂಪಿಯನ್ಶಿಪ್ ಆವೃತ್ತಿಯ ಲ್ಲಿನ್ನೂ 14 ಸರಣಿಗಳು ಬಾಕಿ ಉಳಿದಿವೆ. 9 ತಂಡಗಳೂ ಸೆಣಸಾಡಲಿಕ್ಕಿದೆ.
ನಿನ್ನೆಯಷ್ಟೇ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದ ದಕ್ಷಿಣ ಆಫ್ರಿಕಾ 5ನೇ ಸ್ಥಾನದಿಂದ ಮೇಲೆದ್ದಿಲ್ಲ. ಅದರ ಗೆಲುವಿನ ಪ್ರತಿಶತ ಸಾಧನೆ (ಪಿಸಿಟಿ) 38.89 ಮಾತ್ರ. ವೆಸ್ಟ್ ಇಂಡೀಸ್ 18.52 ಪಿಸಿಟಿಯೊಂದಿಗೆ ಕೊನೆಯ ಸ್ಥಾನಿಯಾಗಿದೆ.
ಭಾರತ ಟೇಬಲ್ ಟಾಪರ್
ಪ್ರಸ್ತುತ ಭಾರತ ತಂಡ ಅಗ್ರಸ್ಥಾನಿಯಾಗಿದೆ. 9 ಟೆಸ್ಟ್ಗಳಲ್ಲಿ ಆರನ್ನು ಗೆದ್ದಿರುವ ಭಾರತ, ಎರಡನ್ನು ಸೋತಿದೆ. ಪಿಸಿಟಿ 68.52. ಆಸ್ಟ್ರೇಲಿಯಕ್ಕೆ ದ್ವಿತೀಯ ಸ್ಥಾನ (62.50). ಅದು 12ರಲ್ಲಿ ಎಂಟನ್ನು ಗೆದ್ದಿದೆ; ಮೂರನ್ನು ಕಳೆದುಕೊಂಡಿದೆ. ನ್ಯೂಜಿಲ್ಯಾಂಡ್ 3ನೇ, ಶ್ರೀಲಂಕಾ 4ನೇ ಸ್ಥಾನದಲ್ಲಿವೆ (50.00). ಅನಂತರದ ಸ್ಥಾನದಲ್ಲಿರುವ ತಂಡಗಳೆಂದರೆ ದಕ್ಷಿಣ ಆಫ್ರಿಕಾ (38.89), ಪಾಕಿಸ್ಥಾನ (36.66), ಇಂಗ್ಲೆಂಡ್ (36.54) ಮತ್ತು ಬಾಂಗ್ಲಾದೇಶ (25.00).
ಭಾರತವಿನ್ನು ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್, ನ್ಯೂಜಿಲ್ಯಾಂಡ್ ವಿರುದ್ಧ 3 ಟೆಸ್ಟ್, ಆಸ್ಟ್ರೇಲಿಯ ವಿರುದ್ಧ 5 ಟೆಸ್ಟ್ ಆಡಲಿಕ್ಕಿದೆ. ಬಾಂಗ್ಲಾ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ತವರಿನಲ್ಲಿ ಆಡುವುದರಿಂದ ಮೇಲುಗೈ ನಿರೀಕ್ಷಿಸಲಡ್ಡಿ ಯಿಲ್ಲ. ಆಗ ಭಾರತದ ಅಗ್ರಸ್ಥಾನಕ್ಕೇನೂ ಧಕ್ಕೆ ಆಗದು. ಆದರೆ ಬೋರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ 5 ಪಂದ್ಯಗಳು ಆಸ್ಟ್ರೇಲಿಯದಲ್ಲಿ ನಡೆಯಲಿರುವುದರಿಂದ ಇಲ್ಲಿ ಕಠಿನ ಸವಾಲು ಎದುರಾಗುವ ನಿರೀಕ್ಷೆ ಇದೆ. ಈ ಆವೃತ್ತಿಯಲ್ಲಿ ಆಸ್ಟ್ರೇಲಿಯಕ್ಕೆ ಬೇರೆ ಯಾವುದೇ ಟೆಸ್ಟ್ ಸರಣಿಗಳಿಲ್ಲ.
ಟೆಸ್ಟ್ ಚಾಂಪಿಯನ್ಶಿಪ್
ತಂಡ ಪಿಸಿಟಿ
1. ಭಾರತ 68.52
2. ಆಸ್ಟ್ರೇಲಿಯ 62.50
3. ನ್ಯೂಜಿಲ್ಯಾಂಡ್ 50.00
4. ಶ್ರೀಲಂಕಾ 50.00
5. ದ.ಆಫ್ರಿಕಾ 38.89
6. ಪಾಕಿಸ್ಥಾನ 36.66
7. ಇಂಗ್ಲೆಂಡ್ 36.54
8. ಬಾಂಗ್ಲಾ 25.00
9. ವಿಂಡೀಸ್ 18.52
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.