ಐಸಿಸಿ ವಿಶ್ವಕಪ್ ಟೆಸ್ಟ್ ಚಾಂಪಿಯನ್‌ಶಿಪ್ ನಲ್ಲಿ ಚಾಂಪಿಯನ್ ಆದ ನ್ಯೂಜಿಲ್ಯಾಂಡ್
Team Udayavani, Jun 23, 2021, 11:15 PM IST
ಸೌತಾಂಪ್ಟನ್: ಕೊನೆಗೂ ಮೂರನೇ ಪ್ರಯತ್ನದಲ್ಲಿ ನ್ಯೂಜಿಲ್ಯಾಂಡ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೇನ್ ವಿಲಿಯಮ್ಸನ್ ಪಡೆ ಭಾರತವನ್ನು 8 ವಿಕೆಟ್‌ಗಳಿಂದ ಮಣಿಸಿ ಚೊಚ್ಚಲ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಕಿರೀಟ ಏರಿಸಿಕೊಂಡು ಮೆರೆದಿದೆ. ಸಾಂಪ್ರದಾಯಿಕ ಕ್ರಿಕೆಟಿನ ಮೊದಲ ಸಾಮ್ರಾಟನೆನಿಸಿದೆ.
ಮೀಸಲು ದಿನಕ್ಕೆ ವಿಸ್ತರಿಸಲ್ಪಟ್ಟ ಫೈನಲ್ ಹಣಾಹಣಿಯಲ್ಲಿ ಭಾರತದ ದ್ವಿತೀಯ ಇನ್ನಿಂಗ್ಸ್ ಪತನ ಎನ್ನುವುದು ಸ್ಪಷ್ಟ ಫಲಿತಾಂಶಕ್ಕೆ ರಹದಾರಿ ಒದಗಿಸಿತು. ಇಲ್ಲವಾದರೆ ಎರಡೂ ತಂಡಗಳು ಒಟ್ಟಿಗೇ ಕಪ್ ಗೌರವ ಸಂಪಾದಿಸಬಹುದಿತ್ತು. ಆರನೇ ದಿನದ ಶುಭ್ರ ಹಾಗೂ ಸ್ವತ್ಛಂದ ವಾತಾವರಣದಲ್ಲಿ 139 ರನ್ನುಗಳ ಗುರಿ ಪಡೆದ ನ್ಯೂಜಿಲ್ಯಾಂಡ್ 2 ವಿಕೆಟಿಗೆ 140 ರನ್ ಬಾರಿಸಿ ನೂತನ ಇತಿಹಾಸ ನಿರ್ಮಿಸಿತು. ಆಗ ವಿಲಿಯಮ್ಸನ್ 52 ಮತ್ತು ಟೇಲರ್ 47 ರನ್ ಮಾಡಿ ಅಜೇಯರಾಗಿದ್ದರು.
ಕೊಹ್ಲಿ, ಪೂಜಾರ ಫೇಲ್ :
ಬುಧವಾರದ ಮೊದಲ ಅವಧಿಯ ಆಟ ಕೈಲ್ ಜಾಮೀಸನ್‌ಗೆ ಮೀಸಲಾಯಿತು. ಕಿವೀಸ್ ವೇಗಿ ಎರಡು ದೊಡ್ಡ ಬೇಟೆಯ ಮೂಲಕ ಭಾರತದ ಮೇಲೆ ಒತ್ತಡ ಹೇರಿದರು. ನಾಯಕ ವಿರಾಟ್ ಕೊಹ್ಲಿ ಮತ್ತು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅವರನ್ನು “ಜಾಮಿ’ ಸತತ ಓವರ್‌ಗಳಲ್ಲಿ, ಒಂದೇ ರನ್ ಅಂತರದಲ್ಲಿ ಪೆವಿಲಿಯನ್ನಿಗೆ ಅಟ್ಟಿದರು. 2ಕ್ಕೆ 64ರಲ್ಲಿದ್ದ ಭಾರತ 72ಕ್ಕೆ ತಲಪುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿತು.
ಕೊಹ್ಲಿ ಗಳಿಕೆ ಕೇವಲ 13 ರನ್. ಎರಡೂ ಇನ್ನಿಂಗ್ಸ್‌ಗಳಲ್ಲಿ ಇವರ ವಿಕೆಟ್ ಜಾಮೀಸನ್ ಪಾಲಾಯಿತು. ಅಂತಿಮ ದಿನ ಕ್ರೀಸಿಗೆ ಬರುವ ಮುನ್ನ ಕೀಪರ್ ವಾಟಿÉಂಗ್‌ಗೆ ಶೇಕ್‌ಹ್ಯಾಂಡ್ ಮಾಡಿದ್ದ ಕೊಹ್ಲಿ, ತಮ್ಮ ಕ್ಯಾಚನ್ನೂ ವಾಟಿÉಂಗ್‌ಗೇ ನೀಡಿ ವಾಪಸಾದರು. 29 ಎಸೆತ ಎದುರಿಸಿದ ಕೊಹ್ಲಿ ಒಂದೂ ಬೌಂಡರಿ ಶಾಟ್ ಬಾರಿಸಲಿಲ್ಲ. ಪೂಜಾರ 80 ಎಸೆತ ನಿಭಾಯಿಸಿದರೂ ಮತ್ತೆ ನಿಧಾನ ಗತಿಯ ಬ್ಯಾಟಿಂಗ್‌ಗೆ ಮೊರೆಹೋದರು. 15 ರನ್ನಿಗೆ 80 ಎಸೆತ ವ್ಯಯಿಸಿದರು. ಹೊಡೆದದ್ದು 2 ಫೋರ್.
ಉಪನಾಯಕ ಅಜಿಂಕ್ಯ ರಹಾನೆ ಕೂಡ ರಕ್ಷಣೆಗೆ ನಿಲ್ಲುವಲ್ಲಿ ವಿಫಲರಾದರು. 40 ಎಸೆತಗಳಿಂದ 15 ರನ್ ಮಾಡಿದ ಅವರು ಬೌಲ್ಟ್ ಬಲೆಗೆ ಬಿದ್ದರು. ಆಗ ಭರ್ತಿ 50 ಓವರ್‌ಗಳ ಆಟ ಮುಗಿದಿತ್ತು; ಸ್ಕೋರ್ 109 ರನ್ ಆಗಿತ್ತು. ಲಂಚ್ ವೇಳೆ ಭಾರತ 130ಕ್ಕೆ 5 ವಿಕೆಟ್ ಕಳೆದುಕೊಂಡು ಅಪಾಯದ ಸುಳಿಗೆ ಸಿಲುಕಿತ್ತು.
ಆಲ್‌ರೌಂಡರ್ ರಿಷಭ್ ಪಂತ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ ಒಂದಿಷ್ಟು ಭರವಸೆ ಮೂಡಿಸಿದರು. ಭಾರತ ಕನಿಷ್ಠ 200 ರನ್ನುಗಳ ಗಡಿಯನ್ನಾದರೂ ತಲುಪೀತು ಎಂಬ ನಿರೀಕ್ಷೆ ಹುಟ್ಟುಹಾಕಿದರು. ಪಂತ್ ಎಂದಿನ ಬೀಸು ಹೊಡೆತಗಳಿಗೆ ಬದಲಾಗಿ ಕ್ರೀಸ್ ಆಕ್ರಮಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದರು. ಇದರಲ್ಲಿ ಬಹುತೇಕ ಯಶಸ್ವಿಯೂ ಆದರು. 88 ಎಸೆತಗಳಿಂದ 41 ರನ್ (4 ಬೌಂಡರಿ) ಮಾಡಿದ ಪಂತ್ ಅವರೇ ಭಾರತದ ಟಾಪ್ ಸ್ಕೋರರ್ ಆಗಿದ್ದರು. ಇಂಥದೊಂದು ಮಹತ್ವದ ಪಂದ್ಯದಲ್ಲಿ ಭಾರತದ ಸರದಿಯಲ್ಲಿ ಒಂದೂ ಅರ್ಧ ಶತಕ ದಾಖಲಾಗದಿದ್ದುದೊಂದು ದುರಂತ.
ಸೌಥಿ 4, ಬೌಲ್ಟ್ 3, ಜಾಮೀಸನ್ 2 ಹಾಗೂ ವ್ಯಾಗ್ನರ್ ಒಂದು ವಿಕೆಟ್ ಕೆಡವಿದರು.
ಸಂಕ್ಷಿಪ್ತ ಸ್ಕೋರ್: ಭಾರತ-217 ಮತ್ತು 170. ನ್ಯೂಜಿಲ್ಯಾಂಡ್-249 ಮತ್ತು 2 ವಿಕೆಟಿಗೆ 140
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Team India: ಇಂಗ್ಲೆಂಡ್ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್ ಗೆ ನಾಯಕತ್ವದ ಹೊಣೆ
Vijay Hazare : ವರುಣ್, ತಿಲಕ್ ಬ್ಯಾಟಿಂಗ್ ವೈಭವ; ಹೈದರಾಬಾದ್ ವಿರುದ್ದ ಸೋತ ಕರ್ನಾಟಕ
Video: ಆಸ್ಪತ್ರೆಯಲ್ಲಿ ‘ಚಕ್ ದೇ ಇಂಡಿಯಾ’ ಹಾಡಿಗೆ ವಿನೋದ್ ಕಾಂಬ್ಳಿ ನೃತ್ಯ.. ವಿಡಿಯೋ ವೈರಲ್
Blitz Chess: ಜೀನ್ಸ್ ಧರಿಸಲು ಫಿಡೆ ಅನುಮತಿ: ಬ್ಲಿಟ್ಜ್ ಚೆಸ್ ಆಡಲು ಕಾರ್ಲ್ಸನ್ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.