ಎಪ್ರಿಲ್‌ನಲ್ಲಿ ಟಿ10 ಉಡುಪಿ ಪ್ರೀಮಿಯರ್ ಲೀಗ್ ಕ್ರಿಕೆಟ್
Team Udayavani, Mar 7, 2017, 5:39 PM IST
ಉಡುಪಿ: ಉಡುಪಿ ಕ್ರಿಕೆಟ್ ಕ್ಲಬ್‌ನ ಆಶ್ರಯದಲ್ಲಿ ಸಾಬ್ ಉಡುಪಿ ಪ್ರೀಮಿಯರ್ ಲೀಗ್ ಟಿ10 ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಕೂಟ ಸೀಸನ್-2 ಮಂಗಳೂರು ಪಣಂಬೂರಿನ ಎನ್‌ಎಂಪಿಟಿ ಮೈದಾನದಲ್ಲಿ ಎ. 17ರಿಂದ 23ರ ವರೆಗೆ ನಡೆಯಲಿದೆ ಎಂದು ಉಡುಪಿ ಪ್ರೀಮಿಯರ್ ಲೀಗ್‌ನ ವೈಸ್ ಚಯರ್‌ಮನ್ ಮಹಮ್ಮದ್ ಮುಬೀನ್ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಉಡುಪಿ ಪ್ರೀಮಿಯರ್ ಲೀಗ್ (ಯುಪಿಎಲ್) 50 ಲ.ರೂ. ನಗದು ಬಹುಮಾನವನ್ನು ಹೊಂದಿದ್ದು ವಿಜೇತ ತಂಡವು ಟ್ರೋಫಿ ಮತ್ತು 25 ಲ.ರೂ.,ರನ್ನರ್ ಅಪ್ ತಂಡ 12 ಲ.ರೂ. ಪಡೆಯಲಿದೆ. ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳಿಗೆ ತಲಾ 3 ಲ.ರೂ. ನೀಡಲಾಗುತ್ತದೆ. ಇದಲ್ಲದೇ ವೈಯಕ್ತಿಕವಾಗಿ ಸರಣಿಶ್ರೇಷ್ಠ ಆಟಗಾರನಿಗೆ ಕಾರು, ಫೈನಲ್ ಪಂದ್ಯದ ಮ್ಯಾನ್ ಆಫ್ ದ ಮ್ಯಾಚ್ ಹಾಗೂ ಬೆಸ್ಟ್ ಬೌಲರ್ ಮತ್ತು ಬೆಸ್ಟ್ ಬ್ಯಾಟ್ಸ್‌ಮನ್‌ಗೆ ಬೈಕು ನೀಡಲಾಗುತ್ತದೆ. ಹೆಚ್ಚು ಸಿಕ್ಸರ್ ಬಾರಿಸಿದವರಿಗೆ ಮತ್ತು ಪ್ರತಿ ಮ್ಯಾಚ್‌ನಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಆಟಗಾರನಿಗೆ 2 ಸಾವಿರ ನಗದು ಸಹಿತ ಟ್ರೋಫಿ, ಮೆಡಲ್ ಕೊಡಮಾಡಲಾಗುತ್ತದೆ ಎಂದರು.
ಉಡುಪಿ ಪ್ರೀಮಿಯರ್ ಲೀಗ್ ಟಿ10 ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಕೂಟ ಸೀಸನ್ ಒಂದರ ಪಂದ್ಯಗಳು ಉಡುಪಿಯಲ್ಲಿ ಜರಗಿದ್ದು ಭಾರೀ ಯಶಸ್ಸು ಸಾಧಿಸಿತ್ತು. ಯುಪಿಎಲ್ ಅಧ್ಯಕ್ಷ ಸಾದಿಕ್ ಕಾಪು, ಗಂಗಾಧರ ಬಿರ್ತಿ, ಮುಸ್ತಾಫ, ಸಚಿನ್ ಕಾಪು ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.
ಗಲ್ಫ್ ತಂಡವೂ ಇದೆ
ಹಾರ್ಡ್ ಟೆನಿಸ್ ಬಾಲ್‌ನ ಎಲ್ಲ ಪಂದ್ಯಗಳು 10 ಓವರ್‌ನದ್ದಾಗಿರುತ್ತದೆ. 20ಕ್ಕೂ ಅಧಿಕ ತಂಡಗಳು ಭಾಗವಹಿಸಲಿದ್ದು, ದೇಶದ ವಿವಿಧ ರಾಜ್ಯಗಳ ತಂಡ ಸೇರಿದಂತೆ ಗಲ್ಫ್ ರಾಷ್ಟ್ರದ ತಂಡವೂ ಭಾಗವಹಿಸಲಿದೆ. ಕ್ರಿಕೆಟ್ ಆಯೋಜನೆಗೆ ಸಚಿವ ಪ್ರಮೋದ್ ಮಧ್ವರಾಜ್ ಸಹಿತ ಸೌದಿ ಅರೇಬಿಯಾದಲ್ಲಿನ ಸಾಬ್ ಸಂಸ್ಥೆಯ ಎಂಡಿ ಸಲಾಹುದ್ದೀನ್ ಸಲ್ಮಾನ್ ಅವರು ಮುಖ್ಯ ಸಲಹೆ, ಸಹಕಾರ ನೀಡಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
IPL Mega Auction: ಹರಾಜು ಆರಂಭ; ಭರ್ಜರಿ ಬಿಡ್ ಗಳಿಸಿದ ವೇಗಿ ಅರ್ಶದೀಪ್ ಸಿಂಗ್
Perth test: ಜೈಸ್ವಾಲ್, ವಿರಾಟ್ ಶತಕ; ಆಸೀಸ್ ಗೆ ಭಾರೀ ಗುರಿ ನೀಡಿದ ಭಾರತ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.