ತಲೈವಾಸ್‌ಗೆ ಮತ್ತೆ ಒಂದಂಕದ ಸೋಲು
ದ್ವಿತೀಯ ಪಂದ್ಯದಲ್ಲಿ ಬೆಂಗಾಲ್‌ಗೆ ಭರ್ಜರಿ ಗೆಲುವು
Team Udayavani, Jul 30, 2019, 5:37 AM IST
ಮುಂಬಯಿ: ಎರಡು ಸೂಪರ್ ಟ್ಯಾಕಲ್, ಐದು ಪ್ರಚಂಡ ಟ್ಯಾಕಲ್ ನಡೆಸಿದ ಜೈದೀಪ್ ಸಾಹಸದಿಂದಾಗಿ 7ನೇ ಆವೃತ್ತಿ ಪ್ರೊ ಕಬಡ್ಡಿ ಮುಂಬಯಿ ಚರಣದ ಸೋಮವಾರದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಪಾಟ್ನಾ ಪೈರೇಟ್ಸ್ 24-23 ಅಂತರದ ರೋಚಕ ಗೆಲುವು ಸಾಧಿಸಿದೆ. ಪಾಟ್ನಾಗೆ ಇದು 2ನೇ ಜಯವಾದರೆ, ತಲೈವಾಸ್‌ಗೆ ಸತತ 2ನೇ ಸೋಲು.
ಒಂದು ಅಂಕದ ಆಘಾತ
ಹೈದರಾಬಾದ್‌ನಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲೂ ತಮಿಳ್ ತಲೈವಾಸ್ ಒಂದು ಅಂಕದಿಂದ ಎಡವಿತ್ತು (29-30). ತಮಿಳ್ ತಲೈವಾಸ್ ಪರ ತಾರಾ ಆಟಗಾರರಾದ ರಾಹುಲ್ ಚೌಧರಿ (5 ಅಂಕ), ಅಜಯ್ ಠಾಕೂರ್ (3 ಅಂಕ) ಸಾಧಾರಣ ಪ್ರದರ್ಶನ ನೀಡಿದರು. ಮಂಜಿತ್ ಚಿಲ್ಲರ್ (4 ಅಂಕ), ಅಜಿತ್ (3 ಅಂಕ) ಹಾಗೂ ರಾಣಾ ಸಿಂಗ್ (3 ಅಂಕ) ಉತ್ತಮ ಹೋರಾಟ ನೀಡಿದರೂ ತಂಡಕ್ಕೆ ಜಯ ಒದಗಿಸಿಕೊಡಲು ಸಾಧ್ಯವಾಗಲಿಲ್ಲ.
ಜೈದೀಪ್ ಜಯದ ರೂವಾರಿ
ಜೈದೀಪ್ (7 ಅಂಕ) ಪ್ರಚಂಡ ಟ್ಯಾಕಲ್ ಮೂಲಕ ಗಮನ ಸೆಳೆದರು. ಇವರಿಗೆ ಆಲ್‌ರೌಂಡರ್ ಮೋನು (5 ಅಂಕ) ಉತ್ತಮ ಸಾಥ್ ನೀಡಿದರು. ಹೀಗಾಗಿ ತಂಡ ಗೆಲುವು ಗಳಿಸಲು ಸಾಧ್ಯವಾಯಿತು. ತಾರಾ ಆಟಗಾರ ಪರ್‌ದೀಪ್ ನರ್ವಾಲ್ 13 ಸಲ ರೈಡ್ ಮಾಡಿ ಗಳಿಸಿದ್ದು ಒಂದು ಅಂಕ ಮಾತ್ರ.
ಬೆಂಗಾಲ್ ಜಯಭೇರಿ
ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ಮಣಿಂದರ್ ಸಿಂಗ್ (14 ಅಂಕ) ಭರ್ಜರಿ ರೈಡಿಂಗ್‌ನಿಂದ ಬೆಂಗಾಲ್ ವಾರಿಯರ್ 43 -23 ಅಂಕಗಳ ಅಂತರದಿಂದ ಪುನೇರಿ ಪಲ್ಟಾನ್ ತಂಡವನ್ನು ಮಣಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malaysia Super 1000; ಸಾತ್ವಿಕ್-ಚಿರಾಗ್ ಕ್ವಾರ್ಟರ್‌ಫೈನಲಿಗೆ
Australian Open ಗ್ರ್ಯಾನ್ ಸ್ಲಾಮ್ ಟೆನಿಸ್ ಡ್ರಾ
Vijay Hazare Trophy; ರಾಜಸ್ಥಾನ, ಹರಿಯಾಣ ಕ್ವಾರ್ಟರ್ ಫೈನಲ್‌ಗೆ
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.