Unofficial Test: ಭಾರತ “ಎ’ ತಂಡಕ್ಕೆ ಮತ್ತೂಂದು ಸೋಲು
Team Udayavani, Nov 9, 2024, 10:19 PM IST
ಮೆಲ್ಬರ್ನ್: ಆತಿಥೇಯ ಆಸ್ಟ್ರೇಲಿಯ “ಎ’ ವಿರುದ್ಧದ ದ್ವಿತೀಯ ಅನಧಿಕೃತ ಟೆಸ್ಟ್ ಪಂದ್ಯ ದಲ್ಲೂ ಭಾರತ “ಎ’ ಸೋಲನುಭವಿಸಿದೆ.
ಮೊದಲ ಪಂದ್ಯವನ್ನು 7 ವಿಕೆಟ್‌ಗಳಿಂದ ಜಯಿ ಸಿದ್ದ ಆಸ್ಟ್ರೇಲಿಯ “ಎ’, ಮೆಲ್ಬರ್ನ್ ಅಂಗಳದಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿತು. ಗೆಲುವಿಗೆ 168 ರನ್ ಮಾಡಬೇಕಿದ್ದ ಆತಿಥೇಯ ತಂಡ, 4 ವಿಕೆಟಿಗೆ 169 ರನ್ ಬಾರಿಸಿತು.
ಪ್ರಸಿದ್ಧ್ ಕೃಷ್ಣ ಮೊದಲ ಓವರ್‌ನ ಸತತ ಎಸೆತ ಗಳಲ್ಲಿ ಮಾರ್ಕಸ್ ಹ್ಯಾರಿಸ್ ಮತ್ತು ಕ್ಯಾಮರಾನ್ ಬಾನ್‌ಕ್ರಾಫ್ಟ್ ವಿಕೆಟ್ ಹಾರಿಸಿ ಆಸೆ ಚಿಗುರಿಸಿದರು. ಆದರೆ ನಾಯಕ ನಥನ್ ಮೆಕ್‌ಸ್ವೀನಿ (25), ಸ್ಯಾಮ್ ಕೋನ್‌ಸ್ಟಾಸ್ (ಔಟಾಗದೆ 73), ಒಲಿವರ್ ಡೇವಿಸ್ (23) ಮತ್ತು ಬ್ಯೂ ವೆಬ್‌ಸ್ಟರ್ (ಔಟಾಗದೆ 46) ತಂಡವನ್ನು ದಡ ಮುಟ್ಟಿಸಿದರು.
ಇದಕ್ಕೂ ಮುನ್ನ 73ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಭಾರತ, ಶನಿವಾರದ ಆಟವನ್ನು ಮುಂದುವರಿಸಿ 229 ರನ್ ಮಾಡಿತು. ಧ್ರುವ ಜುರೆಲ್ ಮತ್ತೂಂದು ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ 68 ರನ್ ಹೊಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Ripponpete: ಖಾಸಗಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
Gangolli: ಪಿಸ್ತೂಲ್ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು
Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್.ಎಸ್.ಬಲ್ಲಾಳ್
Udupi: ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ರೆ.ಡಾ.ಲಾರೆನ್ಸ್ ಸಿ. ಡಿ’ಸೋಜಾ ಇನ್ನಿಲ್ಲ
Brahmavara: ಲಾಕ್‌ಅಪ್ ಡೆತ್ ಪ್ರಕರಣ: ಮರಣೋತ್ತರ ಪರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.