ಇಂದಿನಿಂದ ಅಭ್ಯಾಸ ಪಂದ್ಯಗಳ ಸರದಿ: ಭಾರತದ ಎದುರಾಳಿ ಆಸ್ಟ್ರೇಲಿಯ
Team Udayavani, Oct 17, 2022, 8:00 AM IST
ಬ್ರಿಸ್ಬೇನ್: ಈಗಾಗಲೇ ಟಿ20 ವಿಶ್ವಕಪ್ ಸೂಪರ್-12 ಹಂತಕ್ಕೆ ನೇರ ಪ್ರವೇಶ ಪಡೆದಿರುವ 8 ತಂಡಗಳ ಅಭ್ಯಾಸ ಸಮರ ಸೋಮವಾರ ಮತ್ತು ಬುಧವಾರ ನಡೆಯಲಿದೆ. ನೆಚ್ಚಿನ ತಂಡಗಳಲ್ಲಿ ಒಂದಾ ಗಿ ರುವ ಭಾರತ ಹಾಲಿ ಚಾಂಪಿ ಯನ್ ಆತಿಥೇಯ ಆಸ್ಟ್ರೇಲಿಯ ವನ್ನು ಎದುರಿಸಲಿದೆ.
ಉಳಿದ 3 ಪಂದ್ಯಗಳು ನ್ಯೂಜಿಲ್ಯಾಂಡ್-ದಕ್ಷಿಣ ಆಫ್ರಿಕಾ, ಇಂಗ್ಲೆಂಡ್-ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ-ಬಾಂಗ್ಲಾದೇಶ ನಡುವೆ ನಡೆಯಲಿವೆ. ಪ್ರತಿಯೊಂದು ತಂಡವೂ 2 ಅಭ್ಯಾಸ ಪಂದ್ಯಗಳನ್ನು ಆಡ ಲಿದೆ. ಭಾರತ ಬುಧ ವಾರ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.
ಗೆದ್ದರೆ ಆತ್ಮವಿಶ್ವಾಸ
2007ರ ಚೊಚ್ಚಲ ವಿಶ್ವಕಪ್ ಬಳಿಕ ಮತ್ತೆಂದೂ ಚಾಂಪಿಯನ್ ಆಗದ ಟೀಮ್ ಇಂಡಿಯಾ ಕಾಂಗರೂ ನಾಡಿನಲ್ಲಿ ಕಮಾಲ್ ಮಾಡೀತೇ ಎಂಬುದೊಂದು ಕುತೂಹಲ. ಕೂಟದ ಮೊದಲ ಪಂದ್ಯದಲ್ಲೇ ಪಾಕಿಸ್ಥಾನ ವನ್ನು ಎದುರಿಸಬೇಕಾದ ಕಾರಣ ಚಾಂಪಿಯನ್ ಆಸ್ಟ್ರೇಲಿಯವನ್ನು ಮಣಿಸಿ ಹೆಚ್ಚಿನ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳುವುದು ರೋಹಿತ್ ಪಡೆಯ ಯೋಜನೆ.
ಅನಧಿಕೃತ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಪಶ್ಚಿಮ ಆಸ್ಟ್ರೇಲಿಯ ವಿರುದ್ಧ ಸೋಲಾಗಿದೆ. ಇದರಲ್ಲಿ ನಾಯಕ ರೋಹಿತ್ ಶರ್ಮ ಆಡಿರಲಿಲ್ಲ. ಕೆ.ಎಲ್. ರಾಹುಲ್ ಕಪ್ತಾನನ ಆಟವಾಡಿದರೂ ತಂಡವನ್ನು ದಡ ಮುಟ್ಟಿಸುವಲ್ಲಿ ವಿಫಲರಾಗಿದ್ದರು. ಆಸೀಸ್ ವಿರುದ್ಧ ಪೂರ್ಣ ಸಾಮರ್ಥ್ಯದ ತಂಡ ಕಣಕ್ಕಿಳಿಯುವುದು ಬಹುತೇಕ ಖಚಿತ. ಇಲ್ಲಿ ಅವಕಾಶ ಪಡೆಯದವರು ನ್ಯೂಜಿಲ್ಯಾಂಡ್ ವಿರುದ್ಧ ಆಡಬಹುದು.
ವಾರ್ನರ್ ಅನುಮಾನ
ಇನ್ನೊಂದೆಡೆ ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಆಗಿರುವ ಕಾರಣ ಆಸ್ಟ್ರೇಲಿಯದ ಮೇಲೆ ಜಾಸ್ತಿ ಒತ್ತಡ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ವಿಶ್ವಕಪ್ ಹೀರೋ, ಎಡಗೈ ಆರಂಭ ಕಾರ ಡೇವಿಡ್ ವಾರ್ನರ್ ಕುತ್ತಿಗೆ ನೋವಿ ನಿಂದಾಗಿ ಭಾರತದೆದುರು ಆಡುವ ಸಾಧ್ಯತೆ ಇಲ್ಲ. ಆಸೀಸ್ಗೆ ಇದೊಂದು ಹಿನ್ನಡೆ ಆಗಿ ಪರಿಣಮಿಸಬಹುದು. ಆದರೆ ವಾರ್ನರ್ ನ್ಯೂಜಿಲ್ಯಾಂಡ್ ಎದುರಿನ ಆರಂಭಿಕ ಪಂದ್ಯಕ್ಕೆ ಲಭಿಸುವುದರಲ್ಲಿ ಅನು ಮಾನ ವಿಲ್ಲ ಎಂದಿದ್ದಾರೆ ನಾಯಕ ಆರನ್ ಫಿಂಚ್.
ಆರಂಭ: ಬೆಳಗ್ಗೆ 9.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.