Pink Test: ಸಿಡ್ನಿಯಲ್ಲೂ ನಡೆಯಲಿದೆ ಪಿಂಕ್ ಟೆಸ್ಟ್
Team Udayavani, Jan 2, 2025, 7:30 AM IST
ಸಿಡ್ನಿಯಲ್ಲಿ ನಡೆಯುವುದು “ಪಿಂಕ್ ಟೆಸ್ಟ್’. ಆದರೆ ಪಿಂಕ್ ಬಾಲ್ ಬಳಸಿ ಆಡುವ ಡೇ-ನೈಟ್ ಟೆಸ್ಟ್ ಇದಲ್ಲ. ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಿ, ಗ್ಲೆನ್ ಮೆಕ್ಗ್ರಾತ್ ಫೌಂಡೇಶನ್ಗೆ ಆರ್ಥಿಕ ನೆರವು ನೀಡುವುದು ಈ ಪಂದ್ಯದ ಉದ್ದೇಶ.
2009ರಿಂದೀಚೆ ಆಸ್ಟ್ರೇಲಿಯದ ವರ್ಷಾರಂಭದ ಟೆಸ್ಟ್ ಪಂದ್ಯ “ಪಿಂಕ್ ಟೆಸ್ಟ್’ ಆಗಿರುತ್ತದೆ. ಗ್ಲೆನ್ ಮೆಕ್ಗ್ರಾತ್ ಅವರ ಪತ್ನಿ ಜೇನ್ ಮೆಕ್ಗ್ರಾತ್ 2008ರಲ್ಲಿ ಸ್ತನ ಕ್ಯಾನ್ಸರ್ನಿಂದ ನಿಧನ ಹೊಂದಿದ್ದರು. ಅವರ ಗೌರವಾರ್ಥ ಪಿಂಕ್ ಟೆಸ್ಟ್ ಆಡಲಾಗುತ್ತಿದೆ. ಅಂದು ಹುಟ್ಟಿಕೊಂಡ ಮೆಕ್ಗ್ರಾತ್ ಫೌಂಡೇಶನ್, ಸ್ತನ ಕ್ಯಾನ್ಸರ್ ಪೀಡಿತರಿಗೆ ಧನ ಸಹಾಯ ಮಾಡುತ್ತ ಬಂದಿದೆ.
ಈ ಪಂದ್ಯ ವೇಳೆ ಆಸ್ಟ್ರೇಲಿಯದ ಕ್ರಿಕೆಟಿಗರ ಕ್ಯಾಪ್, ಜೆರ್ಸಿ ನಂಬರ್, ಇದರ ಮೇಲಿನ ಅವರ ಹೆಸರೆಲ್ಲ ಪಿಂಕ್ ಬಣ್ಣದಲ್ಲಿರುತ್ತದೆ. ಇಡೀ ಸ್ಟೇಡಿಯಂ ಗುಲಾಲಿ ಬಣ್ಣವಾಗಿ ಪರಿವರ್ತನೆಗೊಳ್ಳಲಿದೆ. ವೀಕ್ಷಕರು ಕೂಡ ಇದೇ ಬಣ್ಣದ ಉಡುಗೆಯಲ್ಲಿರುತ್ತಾರೆ. ಪಂದ್ಯದ 3ನೇ ದಿನ “ಜೇನ್ ಮೆಕ್ಗ್ರಾತ್ ಡೇ’ ಆಚರಿಸಲಾಗುತ್ತದೆ.
ಬುಧವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್ಗೆ ಆಗಮಿಸಿದ ಗ್ಲೆನ್ ಮೆಕ್ಗ್ರಾತ್ ಆಸೀಸ್ ಕ್ರಿಕೆಟಿಗರೊಂದಿಗೆ ಬೆರೆತರು. ಎಲ್ಲರೂ ಗುಲಾಲಿ ಬಣ್ಣಕ್ಕೆ ಆದ್ಯತೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SA vs Pak, 2nd Test: ರಿಕಲ್ಟನ್ ದ್ವಿಶತಕ, ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ
Divorce Rumours: ಚಹಾಲ್ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?
Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video
Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್; ಭಾರತಕ್ಕೆ ಅಲ್ಪ ಮುನ್ನಡೆ
INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ; ವಿಡಿಯೋ ನೋಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.