ಕುಲದೀಪ್, ಸಿರಾಜ್ ಅಮೋಘ ನಿರ್ವಹಣೆ; ಫಾಲೋ ಆನ್ ಭೀತಿಯಿಲ್ಲಿ ಬಾಂಗ್ಲಾ
Team Udayavani, Dec 15, 2022, 10:24 PM IST
ಚತ್ತೋಗ್ರಾಮ್: ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಅವರ ಅಮೋಘ ನಿರ್ವಹಣೆಯಿಂದ ಭಾರತ ತಂಡವು ಬಾಂಗ್ಲಾದೇಶ ತಂಡದೆದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಸುಸ್ಥಿತಿಯಲ್ಲಿದೆ.
ಕಳೆದ 22 ತಿಂಗಳ ಬಳಿಕ ಮೊದಲ ಟೆಸ್ಟ್ ಆಡುತ್ತಿರುವ ಕುಲದೀಪ್ ಸಿಂಗ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದರು. ಅವರ ಈ ಸಾಧನೆಯಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 404 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಆಬಳಿಕ ಕುಲದೀಪ್ ಮತ್ತು ಸಿರಾಜ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶವು ಎರಡನೇ ದಿನದಾಟದ ಅಂತ್ಯಕ್ಕೆ ಕೇವಲ 133 ರನ್ನಿಗೆ 8 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದೆ. ಇನ್ನೆರಡು ವಿಕೆಟ್ ಉಳಿಸಿಕೊಂಡಿರುವ ಆತಿಥೇಯ ತಂಡ ಫಾಲೋ ಆನ್ ತಪ್ಪಿಸಲು ಇನ್ನೂ 72 ರನ್ ಗಳಿಸಬೇಕಾಗಿದೆ.
ಕುಲದೀಪ್ 40 ರನ್
ಆರು ವಿಕೆಟಿಗೆ 278 ರನ್ನುಗಳಿಂದ ದಿನದಾಟ ಆರಂಭಿಸಿದ ಭಾರತಕ್ಕೆ ಶ್ರೇಯಸ್ ಅಯ್ಯರ್ ಸೇರಿದಂತೆ ಆರ್. ಅಶ್ವಿನ್ ಮತ್ತು ಕುಲದೀಪ್ ಆಸರೆ ನೀಡಿದರು. ಈ ಮೂವರು ಉತ್ತಮ ಆಟದಿಂದಾಗಿ ಭಾರತದ ಮೊತ್ತ 400ರ ಗಡಿ ದಾಟಿತು. ಅಶ್ವಿನ್ ಮತ್ತು ಕುಲದೀಪ್ ಎಂಟನೇ ವಿಕೆಟಿಗೆ 92 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ತನ್ನ ಜೀವನಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ನೀಡಿದ ಕುಲದೀಪ್ 114 ಎಸೆತ ಎದುರಿಸಿ 40 ರನ್ ಹೊಡೆದರು. ಅಶ್ವಿನ್ 58 ರನ್ ಹೊಡೆದರು. ಬಾಂಗ್ಲಾ ಪರ ತೈಜುಲ್ ಇಸ್ಲಾಮ್ ಮತ್ತು ಮೆಹಿದಿ ಹಸನ್ ಮಿರಾಜ್ ತಲಾ ನಾಲ್ಕು ವಿಕೆಟ್ ಕಿತ್ತು ಗಮನ ಸೆಳೆದರು.
ಬಾಂಗ್ಲಾಕ್ಕೆ ಆರಂಭಿಕ ಆಘಾತ
ಬಾಂಗ್ಲಾದ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಎಸೆತದಲ್ಲಿಯೇ ತಂಡ ಆರಂಭಿಕ ಆಟಗಾರನನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಸಿರಾಜ್ ಮತ್ತು ಕುಲದೀಪ್ ಸೇರಿಕೊಂಡು ಬಾಂಗ್ಲಾಕ್ಕೆ ನಿರಂತರ ಆಘಾತವಿಕ್ಕಿದರು. ಇದರಿಂದ ಬಾಂಗ್ಲಾ ಕೊನೆಯವರೆಗೂ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಸಿರಾಜ್ ಮೂರು ಮತ್ತು ಕುಲದೀಪ್ 4 ವಿಕೆಟ್ ಕಿತ್ತು ಭಾರತ ಮೇಲುಗೈ ಸಾಧಿಸುವಂತೆ ಮಾಡಿದರು.
ಸಂಕ್ಷಿಪ್ತ ಸ್ಕೋರು:
ಭಾರತ ಪ್ರಥಮ ಇನ್ನಿಂಗ್ಸ್ 404 (ಪೂಜಾರ 90, ಪಂತ್ 46, ಅಯ್ಯರ್ 86, ಆರ್. ಅಶ್ವಿನ್ 58, ಕುಲದೀಪ್ 40, ತೈಜುಲ್ ಇಸ್ಲಾಮ್ 133ಕ್ಕೆ 4, ಮೆಹಿದಿ ಹಸನ್ ಮಿರಾಜ್ 112ಕ್ಕೆ 4); ಬಾಂಗ್ಲಾದೇಶ ಪ್ರಥಮ ಇನ್ನಿಂಗ್ಸ್ 8 ವಿಕೆಟಿಗೆ 133 (ಲಿಟನ್ ದಾಸ್ 24, ಮುಶ್ಫಿàಕರ್ ರಹೀಮ್ 28, ಸಿರಾಜ್ 14ಕ್ಕೆ 3, ಕುಲದೀಪ್ 33ಕ್ಕೆ 4).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WTC ಸನ್ನಿವೇಶ ಬದಲು; ಭಾರತಕ್ಕೆ ಸುಲಭವಾಯ್ತು ಫೈನಲ್ ಪ್ರವೇಶ; ಇಲ್ಲಿದೆ ಲೆಕ್ಕಾಚಾರ
PV Sindhu: ಐಪಿಎಲ್ ತಂಡದ ಜತೆ ಕೆಲಸ ಮಾಡಿದ ಉದ್ಯಮಿಯ ಕೈಹಿಡಿಯಲಿದ್ದಾರೆ ಪಿ.ವಿ.ಸಿಂಧು
Indian Premier league: ನಾಯಕರ ಹುಡುಕಾಟದಲ್ಲಿ 5 ಐಪಿಎಲ್ ತಂಡ
Cap Auction: ಬೇಕೇ ಸರ್ ಡೊನಾಲ್ಡ್ ಬ್ರಾಡ್‌ಮನ್ ಕ್ಯಾಪ್?
India-Australia Test: ಬುಮ್ರಾ ಶ್ರೇಷ್ಠ ಪೇಸ್ ಬೌಲರ್: ಟ್ರ್ಯಾವಿಸ್ ಹೆಡ್ ಪ್ರಶಂಸೆ
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.