ಕಿವೀಸ್‌ ವಿರುದ್ಧದ ಮೊದಲ ಏಕದಿನ: ಗಿಲ್‌ ದ್ವಿಶತಕ, ಬ್ರೇಸ್‌”ವೆಲ್‌’ ಶತಕ, ಭಾರತಕ್ಕೆ ರೋಚಕ ಜಯ


Team Udayavani, Jan 18, 2023, 10:49 PM IST

1-wqeqw-eewq

ಹೈದರಾಬಾದ್‌: ಶುಭಮನ್‌ ಗಿಲ್‌ ಅದ್ಭುತ ದ್ವಿಶತಕ, ಭಾರತದ ಬೃಹತ್‌ ಮೊತ್ತ, ನ್ಯೂಜಿಲೆಂಡ್‌ನಿಂದ ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆ, ಮೈಕೇಲ್‌ ಬ್ರೇಸ್‌ವೆಲ್‌ ಅಸಾಮಾನ್ಯ ಶತಕ, ಭಾರತಕ್ಕೆ 12 ರನ್‌ ರೋಚಕ ಜಯ…ಇವಿಷ್ಟು ಆತಿಥೇಯ ಭಾರತ-ಪ್ರವಾಸಿ ನ್ಯೂಜಿಲೆಂಡ್‌ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದ ಮುಖ್ಯಾಂಶಗಳು. ಇತ್ತೀಚೆಗಷ್ಟೇ ಲಂಕಾವನ್ನು ನಿರ್ಣಾಯಕವಾಗಿ ಸೋಲಿಸಿದ್ದ ಭಾರತಕ್ಕೆ ಬುಧವಾರದ ಗೆಲುವು ಮತ್ತೆ ಸ್ಫೂರ್ತಿ ತುಂಬಿದೆ. ಕೊನೆಯವರೆಗೂ ಹೋರಾಡಿ ಗೆದ್ದಿದ್ದೇ ಇದಕ್ಕೆ ಕಾರಣ.

ಮೊದಲು ಬ್ಯಾಟ್‌ ಮಾಡಿದ್ದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 349 ರನ್‌ ಗಳಿಸಿತ್ತು. ಇದನ್ನು ಬೆನ್ನತ್ತಿದ ನ್ಯೂಜಿಲೆಂಡ್‌ 49.2 ಓವರ್‌ಗಳಲ್ಲಿ 337 ರನ್‌ ಗಳಿಸಿ ಆಲೌಟಾಯಿತು. ಕಿವೀಸ್‌ ಪರ ಮೈಕೆಲ್‌ ಬ್ರೇಸ್‌ವೆಲ್‌ ಎಂತಹ ಪ್ರತಿಹೋರಾಟ ಸಂಘಟಿಸಿದರೆಂದರೆ, ಭಾರತೀಯ ತಂಡ ಬೆಚ್ಚಿ ಬೀಳುವಂತಾಗಿತ್ತು. ಏಕಾಂಗಿಯಾಗಿ ಸಿಡಿದೆದ್ದ ಅವರು ಬಹುತೇಕ ಕಿವೀಸನ್ನು ಗೆಲುವಿನ ಹಂತಕ್ಕೆ ಒಯ್ದಿದ್ದರು. 78 ಎಸೆತ ಎದುರಿಸಿದ ಅವರು 12 ಬೌಂಡರಿ, 10 ಸಿಕ್ಸರ್‌ಗಳೊಂದಿಗೆ 140 ರನ್‌ ಸಿಡಿಸಿದರು. ಕೊನೆಯಲ್ಲಿ ಅವರು ಔಟಾಗುವವರೆಗೂ ಗೆಲುವು ಕಿವೀಸ್‌ ಕೈಯಲ್ಲೇ ಇತ್ತು. ಒಂದು ವೇಳೆ ಅವರು ಕ್ರೀಸ್‌ನಲ್ಲಿ ಇದ್ದಿದ್ದರೆ ಕಿವೀಸ್‌ ಗೆಲ್ಲುವುದು ದೊಡ್ಡ ಮಾತೇ ಆಗಿರಲಿಲ್ಲ.

ಭಾರತವನ್ನು ಗೆಲ್ಲಿಸಿದ್ದರ ಹಿಂದೆ ಬೌಲರ್‌ಗಳ ದೊಡ್ಡ ಪರಿಶ್ರಮವಿದೆ. ವೇಗಿ ಮೊಹಮ್ಮದ್‌ ಸಿರಾಜ್‌ 4 ವಿಕೆಟ್‌ ಪಡೆದರೆ, ಶಾದೂìಲ್‌ ಠಾಕೂರ್‌, ಕುಲದೀಪ್‌ ಯಾದವ್‌ ತಲಾ 2 ವಿಕೆಟ್‌ ಪಡೆದರು.

ಶುಭಮನ್‌ ದ್ವಿಶತಕ: ಇತ್ತೀಚೆಗಷ್ಟೇ ಇಶಾನ್‌ ಕಿಶನ್‌ ಅವರ ದ್ವಿಶತಕ ಕಂಡು ಪುಳಕಗೊಂಡಿದ್ದ ಭಾರತದ ಕ್ರಿಕೆಟ್‌ ಅಭಿಮಾನಿಗಳು, ಕೇವಲ 40 ದಿನಗಳ ಅಂತರದಲ್ಲಿ ಶುಭಮನ್‌ ಗಿಲ್‌ ಅವರ ದ್ವಿಶತಕದ ಸಾಹಸಕ್ಕೆ ಸಲಾಂ ಹೇಳಿದರು. ಸತತ 2ನೇ ಪಂದ್ಯದಲ್ಲಿ ಮೂರಂಕೆಯ ಗಡಿ ದಾಟಿ ಬೆಳೆದಿದ್ದ ಗಿಲ್‌, ಹೆಚ್ಚು-ಕಡಿಮೆ ಪೂರ್ತಿ ಇನಿಂಗ್ಸ್‌ ನಿಭಾಯಿಸಿ 208 ರನ್‌ ಬಾರಿಸಿದರು. ಇನ್ನೊಂದು ಬದಿಯಿಂದ ಸೂಕ್ತ ಬೆಂಬಲ ಸಿಗದ ಹೊತ್ತಿನಲ್ಲಿ ಏಕಾಂಗಿಯಾಗಿ ಕಿವೀಸ್‌ ದಾಳಿಯನ್ನು ಮೆಟ್ಟಿನಿಂತ ಕಾರಣಕ್ಕಾಗಿ ಗಿಲ್‌ ಅವರ ಈ ಇನಿಂಗ್ಸ್‌ನ ತೂಕ ಹಾಗೂ ಮೌಲ್ಯವೆರಡೂ ಹೆಚ್ಚು ಎಂಬುದರಲ್ಲಿ ಎರಡು ಮಾತಿಲ್ಲ.

ಗಿಲ್‌ ಹೊರತುಪಡಿಸಿದರೆ 34 ರನ್‌ ಮಾಡಿದ ರೋಹಿತ್‌ ಶರ್ಮ ಅವರದೇ ಹೆಚ್ಚಿನ ಗಳಿಕೆ. ವಿರಾಟ್‌ ಕೊಹ್ಲಿ (8), ದ್ವಿಶತಕ ಹೊಡೆದ ಬಳಿಕ ಮೊದಲ ಸಲ ಆಡಲಿಳಿದ ಇಶಾನ್‌ ಕಿಶನ್‌ (5) ಡಬಲ್‌ ಫಿಗರ್‌ ಮುಟ್ಟಲಿಕ್ಕೂ ವಿಫ‌ಲರಾದರು. ಸೂರ್ಯಕುಮಾರ್‌ ಯಾದವ್‌ (21), ಹಾರ್ದಿಕ್‌ ಪಾಂಡ್ಯ (28), ವಾಷಿಂಗ್ಟನ್‌ ಸುಂದರ್‌ (12) ಕೂಡ ಯಶಸ್ಸು ಕಾಣಲಿಲ್ಲ.

ಒಟ್ಟು 149 ಎಸೆತಗಳನ್ನು ನಿಭಾಯಿಸಿದ ಗಿಲ್‌ 208 ರನ್ನುಗಳ ಸ್ಮರಣೀಯ ಇನಿಂಗ್ಸ್‌ ಕಟ್ಟಿದರು. ಇದು 19 ಬೌಂಡರಿ ಹಾಗೂ 9 ಸಿಕ್ಸರ್‌ಗಳಿಂದ ರಂಗೇರಿಸಿಕೊಂಡಿತು. ಇದರಲ್ಲಿ 6 ಸಿಕ್ಸರ್‌ ನೂರೈವತ್ತರ ಗಡಿ ದಾಟಿದ ಬಳಿಕ ಸಿಡಿದಿತ್ತೆಂಬುದು ಗಿಲ್‌ ಅವರ ಆಟದ ರೀತಿಗೆ ಸಾಕ್ಷಿ. ಆರಂಭದಲ್ಲಿ ಬಹಳ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿದ ಗಿಲ್‌, ಕ್ರೀಸ್‌ ಆಕ್ರಮಿಸಿಕೊಂಡಂತೆಲ್ಲ ಬ್ಯಾಟಿಂಗ್‌ ವೇಗವನ್ನು ಹೆಚ್ಚಿಸುತ್ತ ಹೋದರು. ಸಿಂಗಲ್‌ ರನ್‌ ಮೂಲಕ ಶತಕ ಪೂರೈಸಿದ ಗಿಲ್‌, ಬ್ರೇಸ್‌ವೆಲ್‌ ಅವರ ಎಸೆತವನ್ನು ಡೀಪ್‌ ಮಿಡ್‌ವಿಕೆಟ್‌ ಮಾರ್ಗದಲ್ಲಿ ಸಿಕ್ಸರ್‌ಗೆ ಬಡಿದಟ್ಟಿ 150 ರನ್‌ ಪೂರ್ತಿಗೊಳಿಸಿದರು.

ದ್ವಿಶತಕದ ಗಡಿಯಲ್ಲಂತೂ ತಡೆರಹಿತ ಓಟ. ಲಾಕೀ ಫ‌ರ್ಗ್ಯುಸನ್‌ ಎಸೆದ 49ನೇ ಓವರ್‌ನ ಮೊದಲ 3 ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ದ್ವಿಶತಕದ ಸಂಭ್ರಮದಲ್ಲಿ ಮಿಂದೆದ್ದರು. ಗಿಲ್‌ ಪೆವಿಲಿಯನ್‌ ಸೇರುವಾಗ ಕೇವಲ 4 ಎಸೆತಗಳು ಬಾಕಿ ಇದ್ದವು.

ಫ‌ಲ ಕೊಟ್ಟ ಬ್ಯಾಟಿಂಗ್‌ ಆಯ್ಕೆ

ಟಾಸ್‌ ಗೆದ್ದ ರೋಹಿತ್‌ ಶರ್ಮ ಬ್ಯಾಟಿಂಗ್‌ ಆಯ್ದುಕೊಳ್ಳಲು ನಿರ್ಧರಿಸಿದರು. ಆದರೆ ಆರಂಭವೇನೂ ಅಬ್ಬರದಿಂದ ಕೂಡಿರಲಿಲ್ಲ. ರೋಹಿತ್‌-ಗಿಲ್‌ ಮೊದಲ ವಿಕೆಟಿಗೆ 60 ರನ್‌ ಪೇರಿಸಲು 12.1 ಓವರ್‌ ತೆಗೆದುಕೊಂಡರು. 20ನೇ ಓವರ್‌ ವೇಳೆ 110 ರನ್‌ ಆಗುವಾಗ 3 ವಿಕೆಟ್‌ ಪತನಗೊಂಡಿತು. ರೋಹಿತ್‌, ಕೊಹ್ಲಿ ಮತ್ತು ಇಶಾನ್‌ ಪೆವಿಲಿಯನ್‌ ಸೇರಿಕೊಂಡಿದ್ದರು. ಗಿಲ್‌-ಸೂರ್ಯಕುಮಾರ್‌ 4ನೇ ವಿಕೆಟಿಗೆ 65 ರನ್‌, ಗಿಲ್‌-ಪಾಂಡ್ಯ 5ನೇ ವಿಕೆಟಿಗೆ 74 ರನ್‌ ಒಟ್ಟುಗೂಡಿಸಿದರು.

ಶುಭಮನ್‌ ಗಿಲ್‌ ಅವರ ಪವರ್‌ ಹಿಟ್ಟಿಂಗ್‌ ಪರಾಕ್ರಮದಿಂದಾಗಿ ಭಾರತ ಕೊನೆಯ 5 ಓವರ್‌ಗಳಲ್ಲಿ 57 ರನ್‌ ರಾಶಿ ಹಾಕಿತು. ಅಂತಿಮ 10 ಓವರ್‌ಗಳಲ್ಲಿ 98 ರನ್‌ ಹರಿದು ಬಂತು. ಇದರಲ್ಲಿ ಗಿಲ್‌ ಕೊಡುಗೆಯೇ 74 ರನ್‌ ಆಗಿತ್ತು. ವಿಶ್ವಕಪ್‌ ವರ್ಷದಲ್ಲಿ ಭಾರತದ ಬ್ಯಾಟರ್ ಬೃಹತ್‌ ಇನಿಂಗ್ಸ್‌ ಕಟ್ಟುತ್ತಿರುವುದೊಂದು ಶುಭ ಸೂಚನೆ.

ಸ್ಕೋರ್‌ಪಟ್ಟಿ
ಭಾರತ 50 ಓವರ್‌, 349/8
ರೋಹಿತ್‌ ಶರ್ಮ ಸಿ ಮಿಚೆಲ್‌ ಬಿ ಟಿಕ್ನರ್‌ 34
ಶುಭಮನ್‌ ಗಿಲ್‌ ಸಿ ಫಿಲಿಪ್ಸ್‌ ಬಿ ಶಿಪ್ಲೆ 208
ವಿರಾಟ್‌ ಕೊಹ್ಲಿ ಬಿ ಸ್ಯಾಂಟ್ನರ್‌ 8
ಇಶಾನ್‌ ಕಿಶನ್‌ ಸಿ ಲ್ಯಾಥಂ ಬಿ ಫ‌ರ್ಗ್ಯುಸನ್‌ 5
ಸೂರ್ಯಕುಮಾರ್‌ ಸಿ ಸ್ಯಾಂಟ್ನರ್‌ ಬಿ ಮಿಚೆಲ್‌ 31
ಹಾರ್ದಿಕ್‌ ಪಾಂಡ್ಯ ಬಿ ಮಿಚೆಲ್‌ 28
ವಾಷಿಂಗ್ಟನ್‌ ಸುಂದರ್‌ ಎಲ್‌ಬಿಡಬ್ಲ್ಯು ಶಿಪ್ಲೆ 12
ಶಾದೂìಲ್‌ ಠಾಕೂರ್‌ ರನೌಟ್‌ 3
ಕುಲದೀಪ್‌ ಯಾದವ್‌ ಔಟಾಗದೆ 5
ಮೊಹಮ್ಮದ್‌ ಶಮಿ ಔಟಾಗದೆ 2
ಇತರೆ 13

ವಿಕೆಟ್‌ ಪತನ: 1-60, 2-88, 3-110, 4-175, 5-249, 6-292, 7-302, 8-345.

ಬೌಲಿಂಗ್‌
ಹೆನ್ರಿ ಶಿಪ್ಲೆ 9-0-74-2
ಲಾಕೀ ಫ‌ರ್ಗ್ಯುಸನ್‌ 10-0-77-1
ಬ್ಲೇರ್‌ ಟಿಕ್ನರ್‌ 10-0-69-1
ಮಿಚೆಲ್‌ ಸ್ಯಾಂಟ್ನರ್‌ 10-0-56-1
ಮೈಕಲ್‌ ಬ್ರೇಸ್‌ವೆಲ್‌ 6-0-43-0
ಡೆರಿಲ್‌ ಮಿಚೆಲ್‌ 5-0-30-2

ನ್ಯೂಜಿಲೆಂಡ್‌ 49.2 ಓವರ್‌, 337
ಫಿನ್‌ ಅಲೆನ್‌ ಸಿ ಶಹಬಾಜ್‌ ಬಿ ಠಾಕೂರ್‌ 40
ಡೆವೋನ್‌ ಕಾನ್ವೆ ಸಿ ಕುಲದೀಪ್‌ ಬಿ ಸಿರಾಜ್‌ 10
ಹೆನ್ರಿ ನಿಕೋಲ್ಸ್‌ ಬಿ ಕುಲದೀಪ್‌ ಯಾದವ್‌ 18
ಡೆರಿಲ್‌ ಮಿಚೆಲ್‌ ಎಲ್ಬಿಡಬ್ಲೂé ಬಿ ಕುಲದೀಪ್‌ 9
ಟಾಮ್‌ ಲ್ಯಾಥಮ್‌ ಸಿ ಸುಂದರ್‌ ಬಿ ಸಿರಾಜ್‌ 24
ಗ್ಲೆನ್‌ ಫಿಲಿಪ್ಸ್‌ ಬಿ ಮೊಹಮ್ಮದ್‌ ಶಮಿ 11
ಮೈಕೇಲ್‌ ಬ್ರೇಸ್‌ವೆಲ್‌ ಎಲ್ಬಿಡಬ್ಲ್ಯೂ 140
ಸ್ಯಾಂಟ್ನರ್‌ ಸಿ ಕುಲದೀಪ್‌ ಬಿ ಸಿರಾಜ್‌ 57
ಹೆನ್ರಿ ಶಿಪ್ಲೆ ಬಿ ಮೊಹಮ್ಮದ್‌ ಸಿರಾಜ್‌ 0
ಫ‌ರ್ಗ್ಯುಸನ್‌ ಸಿ ಶುಭಮನ್‌ ಬಿ ಪಾಂಡ್ಯ 8
ಬ್ಲೇರ್‌ ಟಿಕ್ನರ್‌ ಅಜೇಯ 1
ಇತರೆ 19
ವಿಕೆಟ್‌ ಪತನ: 1-28, 2-70, 3-78, 4-89, 5-110, 6-131, 7-293, 8-294, 9-328, 10-337.

ಬೌಲಿಂಗ್‌
ಮೊಹಮ್ಮದ್‌ ಶಮಿ 10-1-69-1
ಮೊಹಮ್ಮದ್‌ ಸಿರಾಜ್‌ 10-2-46-4
ಹಾರ್ದಿಕ್‌ ಪಾಂಡ್ಯ 7-0-70-1
ಕುಲದೀಪ್‌ ಯಾದವ್‌ 8-1-43-2
ಶಾದೂìಲ್‌ ಠಾಕೂರ್‌ 7.2-0-54-2
ವಾಷಿಂಗ್ಟನ್‌ ಸುಂದರ್‌ 7-0-50-0

ಟಾಪ್ ನ್ಯೂಸ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.