ಭಾರತ-ದಕ್ಷಿಣ ಆಫ್ರಿಕಾ: ಬಹು ನಿರೀಕ್ಷೆಯ ಸರಣಿ
Team Udayavani, Dec 26, 2021, 6:04 AM IST
ಸೆಂಚುರಿಯನ್: ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿಯೊಂದನ್ನು ಗೆಲ್ಲುವ ಕನಸಿನೊಂದಿಗೆ ಆಗಮಿಸಿರುವ ಟೀಮ್ ಇಂಡಿಯಾ ರವಿವಾರದ “ಬಾಕ್ಸಿಂಗ್ ಡೇ’ ಪಂದ್ಯದೊಂದಿಗೆ ಅಭಿಯಾನ ಆರಂಭಿಸಲಿದೆ. ಸೆಂಚುರಿಯನ್‌ನ “ಸೂಪರ್ ನ್ಪೋರ್ಟ್ ಪಾರ್ಕ್’ನಲ್ಲಿ ಮೊದಲ ಟೆಸ್ಟ್ ನಡೆಯಲಿದ್ದು, ಸೂಪರ್ ಪ್ರದರ್ಶನ ನೀಡಿದರಷ್ಟೇ ಭಾರತಕ್ಕೆ ಯಶಸ್ಸು ಕೈಹಿಡಿಯಲಿದೆ ಎಂಬುದು ರಹಸ್ಯವೇನಲ್ಲ.
ಏಶ್ಯದ ಆಚೆ, ಬೌನ್ಸಿ ಟ್ರ್ಯಾಕ್‌ಗಳಲ್ಲಿ ಆತಿಥೇಯ ತಂಡವನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಹರಿಣಗಳ ನಾಡಿನಲ್ಲಿ ಭಾರತಕ್ಕೂ ಇದು ಸ್ಪಷ್ಟವಾಗಿ ಅರಿವಿಗೆ ಬಂದಿದೆ. ಇದಕ್ಕೆ ಹಿಂದಿನ ಟೆಸ್ಟ್ ಸರಣಿ ದಾಖಲೆಗಳೇ ಸಾಕ್ಷಿ. 2010ರಲ್ಲಿ ಧೋನಿ ಪಡೆ ಸರಣಿಯನ್ನು 1-1ರಿಂದ ಡ್ರಾಗೊಳಿಸಿದ್ದೇ ನಮ್ಮವರ ಅತ್ಯುತ್ತಮ ಸಾಧನೆ. ಕಳೆದ ಸಲ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿತಾದರೂ ಉಳಿದೆರಡು ಟೆಸ್ಟ್‌ಗಳನ್ನು ಸೋತು ಸರಣಿಯನ್ನು ಒಪ್ಪಿಸಿ ಬಂದಿತ್ತು. ಇದಕ್ಕೂ ಮಿಗಿಲಾದ ಸಾಧನೆಗೈಯಬೇಕಾದ ಸವಾಲು ಈ ಬಾರಿ ಭಾರತದ ಮುಂದಿದೆ.
ಎದುರಾಗಲಿದೆ ವಿಭಿನ್ನ ಸವಾಲು:
ನ್ಯೂಜಿಲ್ಯಾಂಡ್ ಎದುರಿನ ತವರಿನ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡ ಸಾಧನೆ ಭಾರತದ್ದಾದರೂ ದಕ್ಷಿಣ ಆಫ್ರಿಕಾದಲ್ಲಿ ಎದುರಾಗುವ ಸವಾಲು ಇದಕ್ಕಿಂತ ಭಿನ್ನ. ಇಲ್ಲಿ ವೇಗದ ಬೌಲಿಂಗಿಗೆ ಎದೆಯೊಡ್ಡಿ ನಿಲ್ಲುವ ತಾಕತ್ತು ಬೇಕು. ಜತೆಗೆ ಇದೇ ವೇಗದ ಅಸ್ತ್ರದಿಂದ ಆತಿಥೇಯರ ವಿಕೆಟ್‌ಗಳನ್ನು ಕಿತ್ತೆಸೆಯುವ ಚಾಕಚಕ್ಯತೆ ಇರಬೇಕು. ಸ್ಪಿನ್ ನಡೆಯದಿದ್ದರೂ ಸ್ಪಿನ್ ಮ್ಯಾಜಿಕ್ ಮಾಡಬೇಕು!
ವೈವಿಧ್ಯಮಯ ಬೌಲಿಂಗ್ :
ಬ್ಯಾಟಿಂಗಿಗೆ ಹೋಲಿಸಿದರೆ ಭಾರತದ ಬೌಲಿಂಗ್ ವಿಭಾಗವೇ ಹೆಚ್ಚು ಬಲಿಷ್ಠ ಹಾಗೂ ವೈವಿಧ್ಯಮಯ ಎನ್ನಲಡ್ಡಿಯಿಲ್ಲ. ವೇಗದ ವಿಭಾಗದಲ್ಲಿ ಒಂದು ಸುದೀರ್ಘ ವಿಶ್ರಾಂತಿ ಪಡೆದು ಫ್ರೆಶ್ ಆಗಿ ಬಂದಿರುವ ಬುಮ್ರಾ ಜತೆಗೆ ಶಮಿ, ಸಿರಾಜ್, ಠಾಕೂರ್, ಇಶಾಂತ್ ಇದ್ದಾರೆ. ಇವರಲ್ಲಿ ಸಿರಾಜ್-ಇಶಾಂತ್ ನಡುವೆ ಯಾರು ಎಂಬ ಪ್ರಶ್ನೆ ಇದೆ. ಚಾರ್ಮ್ ಕಳೆದುಕೊಂಡಿರುವ ಇಶಾಂತ್‌ಗಿಂತ ಸಿರಾಜ್‌ಗೆ ಅವಕಾಶ ಕೊಟ್ಟರೆ ಬೌನ್ಸಿ ಟ್ರ್ಯಾಕ್ ಅನುಭವ ಚೆನ್ನಾಗಿ ಆಗುತ್ತದೆ ಎಂಬುದೊಂದು ಲೆಕ್ಕಾಚಾರ. ಸ್ಪಿನ್ನಿಗೆ ಅಶ್ವಿನ್ ಒಬ್ಬರೇ ಇರುವುದು, ಇಲ್ಲಿಗೆ ಅವರೊಬ್ಬರೇ ಸಾಕು!
ಸಂಭಾವ್ಯ ತಂಡಗಳು:
ಭಾರತ: ಕೆ.ಎಲ್.ರಾಹುಲ್, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ/ಶ್ರೇಯಸ್ ಐಯ್ಯರ್/ಹನುಮ ವಿಹಾರಿ, ರಿಷಭ್ ಪಂತ್, ಆರ್.ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್/ಇಶಾಂತ್ ಶರ್ಮ.
ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಐಡನ್ ಮಾಕ್ರìಮ್, ಕೀಗನ್ ಪೀಟರ್‌ಸನ್, ರಸ್ಸಿ ವಾನ್ ಡರ್ ಡುಸೆನ್, ಟೆಂಬ ಬವುಮ, ಕ್ವಿಂಟನ್ ಡಿ ಕಾಕ್, ವಿಯಾನ್ ಮುಲ್ಡರ್, ಕೇಶವ ಮಹಾರಾಜ್, ಕ್ಯಾಗಿಸೊ ರಬಾಡ, ಲುಂಗಿ ಎನ್‌ಗಿಡಿ, ಡ್ನೂನ್ ಒಲಿವರ್.
ಮುಖಾಮುಖಿ :
ಒಟ್ಟು ಪಂದ್ಯ: 39
ಭಾರತ ಗೆಲುವು : 14
ದ.ಆಫ್ರಿಕಾ ಗೆಲುವು : 15
ಡ್ರಾ: 10
ಆರಂಭ: ಮಧ್ಯಾಹ್ನ 1.30
ಪ್ರಸಾರ: ಸ್ಟಾರ್ ನ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.