Ind vs SA 1st Test:ಎಲ್ಗರ್ ಅಜೇಯ ಶತಕ; ದಕ್ಷಿಣ ಆಫ್ರಿಕಾಕ್ಕೆ ಮುನ್ನಡೆ
Team Udayavani, Dec 27, 2023, 10:46 PM IST
ಸೆಂಚುರಿಯನ್: ಸದ್ಯದ ಲ್ಲಿಯೇ ನಿವೃತ್ತಿಯಾಗಲಿರುವ ಡೀನ್ ಎಲ್ಗರ್ ಅವರ ಅಮೋಘ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಪ್ರವಾಸಿ ಭಾರತ ತಂಡದೆದುರಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಗಳಿಸಿ ಕೊಂಡಿದೆ. ಮಂದಬೆಳಕಿನಿಂದ ದ್ವಿತೀಯ ದಿನದಾಟದ ಆಟ ನಿಂತಾಗ ದ. ಆಫ್ರಿಕಾವು 5 ವಿಕೆಟಿಗೆ 256 ರನ್ ಗಳಿಸಿತ್ತು. ಆತಿಥೇಯ ತಂಡವು ಒಟ್ಟಾರೆ 11 ರನ್ ಮುನ್ನಡೆ ಸಾಧಿಸಿದೆ.
ಇನ್ನೂ ಮೂರು ದಿನಗಳ ಆಟ ಬಾಕಿ ಉಳಿದಿದ್ದು ದಕ್ಷಿಣ ಆಫ್ರಿಕಾವು ದೊಡ್ಡ ಮೊತ್ತ ಪೇರಿಸುವ ಸಾಧ್ಯತೆಯಿದೆ. 140 ರನ್ ಗಳಿಸಿರುವ ಎಲ್ಗರ್ ಔಟಾಗದೆ ಉಳಿದಿದ್ದು ಮೂರನೇ ದಿನ ಆಟ ಮುಂದುವರಿಸಲಿದ್ದಾರೆ. ಅವರು ಭಾರತೀಯ ದಾಳಿಯನ್ನು ದಿಟ್ಟವಾಗಿ ಎದುರಿಸಿದರೆ ಭಾರತಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಎಲ್ಗರ್ ಸಹಿತ ದಕ್ಷಿಣ ಆಫ್ರಿಕಾವನ್ನು ಬೇಗನೇ ಆಲೌಟ್ ಮಾಡಿಸಿದರೆ ಭಾರತ ಗೆಲ್ಲುವ ಕಡೆ ಗಮನ ಹರಿಸಬಹುದು.
ಈ ಮೊದಲು ಕೆಎಲ್ ರಾಹುಲ್ ಅವರ ಆಕರ್ಷಕ ಶತಕದಿಂದಾಗಿ ಭಾರತ ತಂಡವು 245 ರನ್ ಗಳಿಸಿ ಆಲೌಟಾಯಿತು.
ಎಲ್ಗರ್ ಅಜೇಯ ಶತಕ
ದಕ್ಷಿಣ ಆಫ್ರಿಕಾದ ಆರಂಭ ಉತ್ತಮ ವಾಗಿರಲಿಲ್ಲ. ಆರಂಭಿಕ ಐಡೆನ್ ಮಾರ್ಕ್‌ರಮ್ ಹೆಚ್ಚು ಹೊತ್ತು ನಿಲ್ಲಲು ವಿಫಲರಾದರು. ಅವರು 5 ರನ್ ಗಳಿಸಿದ ವೇಳೆ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಡೀನ್ ಎಲ್ಗರ್ ಮತ್ತು ಈ ಹಿಂದಿನ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ನೀಡಿದ್ದ ಟೋನಿ ಡಿ ಝೋರ್ಜಿ ಅವರು ಭಾರತೀಯ ದಾಳಿಯನ್ನು ದಿಟ್ಟವಾಗಿ ಎದುರಿಸಿ ತಂಡವನ್ನು ಸುಸ್ಥಿತಿಗೆ ತಲುಪಿಸಲು ಪ್ರಯತ್ನಿಸಿದರು. ಅವರಿಬ್ಬರು ದ್ವಿತೀಯ ವಿಕೆಟಿಗೆ 93 ರನ್ ಪೇರಿಸಿ ಬೇರ್ಪಟ್ಟರು.
ಎಲ್ಗರ್ ಮತ್ತು ಈ ಪಂದ್ಯದ ಮೂಲಕ ಟೆಸ್ಟ್‌ಗೆ ಪದಾರ್ಪಣೆಗೈದ ಡೇವಿಡ್ ಬೆಡಿಂಗಂ ಅವರು ಭರ್ಜರಿ ಆಟದ ಪ್ರದರ್ಶನ ನೀಡಿದರಲ್ಲದೇ ನಾಲ್ಕನೇ ವಿಕೆಟಿಗೆ 131 ರನ್ನುಗಳ ಜತೆಯಾಟ ನಡೆಸಿ ತಂಡ ಮುನ್ನಡೆ ಸಾಧಿಸುವುದನ್ನು ಖಚಿತಪಡಿಸಿ ದರು. ಮುನ್ನಡೆ ಸಾಧಿಸಲು ಒಂದು ರನ್ ಇರುವಾಗ ಈ ಜೋಡಿ ಮುರಿಯಿತು. 56 ರನ್ ಗಳಿಸಿದ ಬೆಡಿಂಗಂ ಅವರು ಸಿರಾಜ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು.
ಈ ಸರಣಿ ಬಳಿಕ ನಿವೃತ್ತಿಯಾಗ ಲಿರುವ ಎಲ್ಗರ್ ಕ್ರೀಸ್‌ನ ಒಂದು ಕಡೆ ಗಟ್ಟಿಯಾಗಿ ನಿಂತು ಅಮೋಘವಾಗಿ ಆಡಿದರು. ಭಾರತೀಯ ದಾಳಿಯನ್ನು ದಂಡಿಸಿದ ಅವರು ಒಟ್ಟಾರೆ 211 ಎಸೆತ ಎದುರಿಸಿ 140 ರನ್ ಗಳಿಸಿ ಆಡುತ್ತಿದ್ದಾರೆ. ಈ ಮೂಲಕ ರಾಹುಲ್ ಅವರ ಶತಕ ಸಂಭ್ರಮವನ್ನು ಮರೆಯುವಂತೆ ಮಾಡಿದ್ದಾರೆ. ಇದು ಟೆಸ್ಟ್‌ನಲ್ಲಿ ಅವರು ದಾಖಲಿಸಿದ 14ನೇ ಶತಕವಾಗಿದೆ.
ಸಂಕ್ಷಿಪ್ತ ಸ್ಕೋರು: ಭಾರತ 245 (ವಿರಾಟ್ ಕೊಹ್ಲಿ 38, ಅಯ್ಯರ್ 31, ರಾಹುಲ್ 101, ಶಾದೂìಲ್ ಠಾಕುರ್ 24, ರಬಾಡ 59ಕ್ಕೆ 5, ನಾಂಡ್ರೆ ಬರ್ಗರ್ 50ಕ್ಕೆ 3); ದಕ್ಷಿಣ ಆಫ್ರಿಕಾ 5 ವಿಕೆಟಿಗೆ 256 (ಡೀನ್ ಎಲ್ಗರ್ 140 ಔಟಾಗದೆ, ಟೋನಿ ಝೋರ್ಜಿ 28, ಬೆಡಿಂಗಂ 56, ಬುಮ್ರಾ 48ಕ್ಕೆ 2, ಸಿರಾಜ್ 63ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.