ಈಡನ್‌ನಲ್ಲಿ ಈಡೇರಿತು ಕ್ಲೀನ್ ಸ್ವೀಪ್ ಯೋಜನೆ
Team Udayavani, Nov 21, 2021, 11:07 PM IST
ಕೋಲ್ಕತಾ: ಐತಿಹಾಸಿಕ “ಈಡನ್ ಗಾರ್ಡನ್ಸ್’ನಲ್ಲಿ ಭಾರತದ ಕ್ಲೀನ್ ಸ್ವೀಪ್ ಯೋಜನೆಯೊಂದು ದೊಡ್ಡ ಮಟ್ಟದಲ್ಲೇ ಈಡೇರಿದೆ.
ಪ್ರವಾಸಿ ನ್ಯೂಜಿಲ್ಯಾಂಡನ್ನು 73 ರನ್ನುಗಳ ಭಾರೀ ಅಂತರದಿಂದ ಮಣಿಸಿ ಟಿ20 ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ. ಇದರೊಂದಿಗೆ ರೋಹಿತ್-ರಾಹುಲ್ ಜೋಡಿಯ ನೂತನ ಕಾಂಬಿನೇಶನ್‌ಗೆ ಸ್ಮರಣೀಯ ಆರಂಭವೊಂದು ಲಭಿಸಿದಂತಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ 7 ವಿಕೆಟಿಗೆ 184 ರನ್ ಪೇರಿಸಿ ಸವಾಲೊಡ್ಡಿದರೆ, ನ್ಯೂಜಿಲ್ಯಾಂಡ್ ಆತಿಥೇಯರ ಘಾತಕ ಬೌಲಿಂಗಿಗೆ ದಿಕ್ಕು ತಪ್ಪಿ 17.2 ಓವರ್‌ಗಳಲ್ಲಿ 111ಕ್ಕೆ ಆಲೌಟ್ ಆಯಿತು.
ಅಕ್ಷರ್ ಪಟೇಲ್ ಅಮೋಘ ಬೌಲಿಂಗ್ ನಡೆಸಿ ಆರಂಭದಲ್ಲೇ ನ್ಯೂಜಿಲ್ಯಾಂಡಿಗೆ ಆಘಾತವಿಕ್ಕಿದರು. ಪವರ್ ಪ್ಲೇ ಒಳಗಾಗಿ ಪಟೇಲ್ ಮೂವರನ್ನು ಪೆವಿಲಿಯನ್ನಿಗೆ ಕಳುಹಿಸಿದರು. ಅವರ ಸಾಧನೆ 9ಕ್ಕೆ 3 ವಿಕೆಟ್. ಆದರೆ ಇನ್ನೊಂದೆಡೆ ಬೇರೂರಿ ನಿಂತಿದ್ದ ಮಾರ್ಟಿನ್ ಗಪ್ಟಿಲ್ ಅಪಾಯಕಾರಿಯಾಗಿ ಬೆಳೆಯುತ್ತಿದ್ದರು. 11ನೇ ಓವರ್‌ನಲ್ಲಿ ಚಹಲ್ ಈ ಬಹುಮೂಲ್ಯ ವಿಕೆಟ್ ಉರುಳಿಸುವುದರೊಂದಿಗೆ ಕಿವೀಸ್ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಗಪ್ಟಿಲ್ 36 ಎಸೆತ ಎದುರಿಸಿ 51 ರನ್ ಬಾರಿಸಿದರು (4 ಬೌಂಡರಿ, 4 ಸಿಕ್ಸರ್).
ಹರ್ಷಲ್ ಪಟೇಲ್ 2 ವಿಕೆಟ್ ಉರುಳಿಸಿದರು. ಸರಣಿಯಲ್ಲಿ ಇದೇ ಮೊದಲ ಸಲ ಬೌಲಿಂಗ್ ಅವಕಾಶ ಪಡೆದ ವೆಂಕಟೇಶ್ ಅಯ್ಯರ್ 3 ಓವರ್‌ಗಳಲ್ಲಿ ಕೇವಲ 12 ರನ್ ನೀಡಿ ಒಂದು ವಿಕೆಟ್ ಸಂಪಾದಿಸಿದರು.
ಭಾರತ ಹ್ಯಾಟ್ರಿಕ್ ಟಾಸ್
ಸತತ 3ನೇ ಮುಖಾಮುಖಿಯಲ್ಲೂ ರೋಹಿತ್ ಶರ್ಮ ಅವರೇ ಟಾಸ್ ಗೆದ್ದರು. ಆದರೆ “ಫಾರ್ ಎ ಚೇಂಜ್’ ಎಂಬಂತೆ ಇಲ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಅವರ ಮತ್ತೂಂದು ಅರ್ಧ ಶತಕ, ಬಿರುಸಿನ ಆರಂಭ, ಅಯ್ಯರ್‌ದ್ವಯರ ಹೋರಾಟ, ದೀಪಕ್ ಚಹರ್ ಅವರ ಕೊನೆಯ ಓವರ್‌ನ ಸಿಡಿತವೆಲ್ಲ ಭಾರತದ ಸರದಿಯ ಆಕರ್ಷಣೆ ಎನಿಸಿತು.
ಹಾಗೆಯೇ ಬಿಗ್ ಹಿಟ್ಟರ್‌ಗಳಾದ ಸೂರ್ಯಕುಮಾರ್ ಯಾದವ್ ಮತ್ತು ರಿಷಭ್ ಪಂತ್ ಅವರ ವೈಫಲ್ಯ, ಡೆತ್ ಓವರ್ ಆರಂಭವಾಗುತ್ತಿದ್ದಂತೆಯೇ ಶ್ರೇಯಸ್ ಅಯ್ಯರ್ ಮತ್ತು ವೆಂಕಟೇಶ್ ಅಯ್ಯರ್ ಔಟಾದದ್ದು, ಕೊನೆಯ 4 ಓವರ್‌ಗಳಲ್ಲಿ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳಿಲ್ಲದಿದ್ದುದು ಭಾರತಕ್ಕೆ ತುಸು ಹಿನ್ನಡೆಯಾಗಿ ಪರಿಣಮಿಸಿತು. ಇಲ್ಲವಾದರೆ ಮೊತ್ತ ಇನ್ನೂರರ ಗಡಿ ದಾಟುವ ಎಲ್ಲ ಸಾಧ್ಯತೆ ಇತ್ತು.
ಇದನ್ನೂ ಓದಿ:ಚೊಚ್ಚಲ ಪಂದ್ಯದಲ್ಲೇ ಹೆಲ್ಮೆಟ್‌ಗೆ ಬಡಿದ ಚೆಂಡು, ಆಸ್ಪತ್ರೆಗೆ ದಾಖಲಾದ ವಿಂಡೀಸ್ ಆಟಗಾರ
ರೋಹಿತ್ 50 ಪ್ಲಸ್ ದಾಖಲೆ
12ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ರೋಹಿತ್ ಶರ್ಮ 31 ಎಸೆತಗಳಿಂದ 56 ರನ್ ಸಿಡಿಸಿದರು. 4 ಫೋರ್ ಹಾಗೂ 3 ಸಿಕ್ಸರ್‌ಗಳನ್ನು ಇದು ಒಳಗೊಂಡಿತ್ತು. ಇದು ರೋಹಿತ್ ಅವರ 30ನೇ 50 ಪ್ಲಸ್ ರನ್ ಸಾಧನೆಯ ನೂತನ ದಾಖಲೆ. ಅವರು ವಿರಾಟ್ ಕೊಹ್ಲಿ ದಾಖಲೆಯನ್ನು ಮೀರಿ ನಿಂತರು (29).
ರೋಹಿತ್-ಇಶಾನ್ ಕಿಶನ್ ಪವರ್ ಪ್ಲೇಯಲ್ಲಿ 69 ರನ್ ಬಾರಿಸಿ ಭಾರತಕ್ಕೆ ದಿಟ್ಟ ಆರಂಭ ಒದಗಿಸಿದರು. ಆದರೆ ಪವರ್ ಪ್ಲೇ ಮುಗಿದೊಡನೆಯೇ ನ್ಯೂಜಿಲ್ಯಾಂಡ್ ಬೆನ್ನು ಬೆನ್ನಿಗೆ ಯಶಸ್ಸು ಸಾಧಿಸಿತು. ಉಸ್ತುವಾರಿ ನಾಯಕ ಮಿಚೆಲ್ ಸ್ಯಾಂಟ್ನರ್ ಒಂದೇ ಓವರ್‌ನಲ್ಲಿ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಇಶಾನ್ 21 ಎಸೆತಗಳಿಂದ 29 ರನ್ (4 ಬೌಂಡರಿ) ಮಾಡಿದರೆ, ಸೂರ್ಯಕುಮಾರ್ ಖಾತೆಯನ್ನೇ ತೆರೆಯಲ್ಲಿ.
ತಮ್ಮ ಮುಂದಿನ ಓವರ್‌ನಲ್ಲೇ ಸ್ಯಾಂಟ್ನರ್ ಮತ್ತೂಂದು ದೊಡ್ಡ ಬೇಟೆಯಾಡಿದರು. ರಿಷಭ್ ಪಂತ್ ಆಟವನ್ನು ನಾಲ್ಕೇ ರನ್ನಿಗೆ ಮುಗಿಸಿದರು. ನೋಲಾಸ್ 69ರಲ್ಲಿದ್ದ ಭಾರತ 83ಕ್ಕೆ 3 ವಿಕೆಟ್ ಕಳೆದುಕೊಂಡಿತು.
5ನೇ ವಿಕೆಟಿಗೆ ಜತೆಗೂಡಿದ ಅಯ್ಯರ್ ಜೋಡಿ 35 ರನ್ ಪೇರಿಸಿತು. ಶ್ರೇಯಸ್ 25, ವೆಂಕಟೇಶ್ 20 ರನ್ ಮಾಡಿ ಒಂದೇ ರನ್ ಅಂತರದಲ್ಲಿ ವಾಪಸ್ ಆದರು.
ಹರ್ಷಲ್ ಪಟೇಲ್ (18) ಕೂಡ ಬಿರುಸಿನ ಆಟದ ಝಲಕ್ ಒಂದನ್ನು ಪ್ರದರ್ಶಿಸಿ ಹಿಟ್ ವಿಕೆಟ್ ಆದರು. ಅವರು ಟಿ20ಯಲ್ಲಿ ಹಿಟ್ ವಿಕೆಟ್ ರೂಪದಲ್ಲಿ ಔಟಾದ ಭಾರತದ 2ನೇ ಆಟಗಾರ. ಕೆ.ಎಲ್. ರಾಹುಲ್ ಮೊದಲಿಗ. ಅವರು ಶ್ರೀಲಂಕಾ ಎದುರಿನ 2018ರ ಕೊಲಂಬೊ ಪಂದ್ಯದಲ್ಲಿ ಹಿಟ್ ವಿಕೆಟ್ ಆಗಿದ್ದರು.
ಕಡೆಯ ಹಂತದಲ್ಲಿ ದೀಪಕ್ ಚಹರ್ ಸಿಡಿದು ನಿಂತು 8 ಎಸೆತಗಳಿಂದ ಅಜೇಯ 21 ರನ್ (2 ಬೌಂಡರಿ, 1 ಸಿಕ್ಸರ್) ಬಾರಿಸಿದ್ದರಿಂದ ಭಾರತದ ಮೊತ್ತ 180ರ ಗಡಿ ದಾಟಿತು. ಆ್ಯಡಂ ಮಿಲ್° ಅವರ ಅಂತಿಮ ಓವರ್‌ನಲ್ಲಿ ಚಹರ್ 19 ರನ್ ಚಚ್ಚಿದರು!
ನ್ಯೂಜಿಲ್ಯಾಂಡ್ ಪರ ಸ್ಯಾಂಟ್ನರ್ 27ಕ್ಕೆ 3 ವಿಕೆಟ್ ಕೆಡವಿ ಹೆಚ್ಚಿನ ಯಶಸ್ಸು ಸಾಧಿಸಿದರೆ, ಉಳಿದ ನಾಲ್ವರು ತಲಾ ಒಂದೊಂದು ವಿಕೆಟ್ ಉರುಳಿಸಿದರು.
ರಾಹುಲ್, ಅಶ್ವಿನ್‌ಗೆ ರೆಸ್ಟ್
ಅಂತಿಮ ಟಿ20 ಪಂದ್ಯಕ್ಕಾಗಿ ಭಾರತ 2 ಬದಲಾವಣೆ ಮಾಡಿಕೊಂಡಿತು. ಓಪನರ್ ಕೆ.ಎಲ್. ರಾಹುಲ್ ಮತ್ತು ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ವಿಶ್ರಾಂತಿ ನೀಡಿತು. ಇವರ ಸ್ಥಾನದಲ್ಲಿ ಇಶಾನ್ ಕಿಶನ್ ಮತ್ತು ಯಜುವೇಂದ್ರ ಚಹಲ್ ಕಾಣಿಸಿಕೊಂಡರು.
ನ್ಯೂಜಿಲ್ಯಾಂಡ್ ಉಸ್ತುವಾರಿ ನಾಯಕ ಟಿಮ್ ಸೌಥಿ ಗೈರಲ್ಲಿ ಆಡಲಿಳಿಯಿತು. ಮಿಚೆಲ್ ಸ್ಯಾಂಟ್ನರ್ ತಂಡವನ್ನು ಮುನ್ನಡೆಸಿದರು.
ಸ್ಕೋರ್ ಪಟ್ಟಿ
ಭಾರತ
ರೋಹಿತ್ ಶರ್ಮ ಸಿ ಮತ್ತು ಬಿ ಸೋಧಿ 56
ಇಶಾನ್ ಕಿಶನ್ ಸಿ ಸೀಫರ್ಟ್ ಬಿ ಸ್ಯಾಂಟ್ನರ್ 29
ಸೂರ್ಯಕುಮಾರ್ ಸಿ ಗಪ್ಟಿಲ್ ಬಿ ಸ್ಯಾಂಟ್ನರ್ 0
ರಿಷಭ್ ಪಂತ್ ಸಿ ನೀಶಮ್ ಬಿ ಸ್ಯಾಂಟ್ನರ್ 4
ಶ್ರೇಯಸ್ ಅಯ್ಯರ್ ಸಿ ಮಿಚೆಲ್ ಬಿ ಮಿಲ್ನೆ25
ವೆಂಕಟೇಶ್ ಸಿ ಚಾಪ್‌ಮನ್ ಬಿ ಬೌಲ್ಟ್ 20
ಅಕ್ಷರ್ ಪಟೇಲ್ ಔಟಾಗದೆ 2
ಹರ್ಷಲ್ ಹಿಟ್ ವಿಕೆಟ್ ಬಿ ಫರ್ಗ್ಯುಸನ್ 18
ದೀಪಕ್ ಚಹರ್ ಔಟಾಗದೆ 21
ಇತರ 9
ಒಟ್ಟು (7 ವಿಕೆಟಿಗೆ) 184
ವಿಕೆಟ್ ಪತನ:1-69, 2-71, 3-83, 4-103, 5-139, 6-140, 7-162.
ಬೌಲಿಂಗ್;
ಟ್ರೆಂಟ್ ಬೌಲ್ಟ್ 4-0-31-1
ಆ್ಯಡಂ ಮಿಲ್ನೆ 4-0-47-1
ಲ್ಯಾಕಿ ಫರ್ಗ್ಯುಸನ್ 4-0-45-1
ಮಿಚೆಲ್ ಸ್ಯಾಂಟ್ನರ್ 4-0-27-3
ಐಶ್ ಸೋಧಿ 4-0-31-1
ನ್ಯೂಜಿಲ್ಯಾಂಡ್
ಗಪ್ಟಿಲ್ ಸಿ ಸೂರ್ಯಕುಮಾರ್ ಬಿ ಚಹಲ್ 51
ಡ್ಯಾರಿಲ್ ಮಿಚೆಲ್ ಸಿ ಹರ್ಷಲ್ ಬಿ ಅಕ್ಷರ್ 5
ಚಾಪ್‌ಮನ್ ಸ್ಟಂಪ್ಡ್ ಪಂತ್ ಬಿ ಅಕ್ಷರ್ 0
ಗ್ಲೆನ್ ಫಿಲಿಪ್ಸ್ ಬಿ ಅಕ್ಷರ್ 0
ಟಿಮ್ ಸೀಫರ್ಟ್ ರನೌಟ್ 17
ಜೇಮ್ಸ್ ನೀಶಮ್ ಸಿ ಪಂತ್ ಬಿ ಹರ್ಷಲ್ 3
ಮಿಚೆಲ್ ಸ್ಯಾಂಟ್ನರ್ ರನೌಟ್ 2
ಆ್ಯಡಂ ಮಿಲ್° ಸಿ ರೋಹಿತ್ ಬಿ ವೆಂಕಟೇಶ್ 7
ಐಶ್ ಸೋಧಿ ಸಿ ಸೂರ್ಯಕುಮಾರ್ ಬಿ ಹರ್ಷಲ್ 9
ಲ್ಯಾಕಿ ಪರ್ಗ್ಯುಸನ್ ಸಿ ಮತ್ತು ಬಿ ಚಹರ್ 14
ಟ್ರೆಂಟ್ ಬೌಲ್ಟ್ ಔಟಾಗದೆ 2
ಇತರ 1
ಒಟ್ಟು (17.2 ಓವರ್‌ಗಳಲ್ಲಿ ಆಲೌಟ್) 111
ವಿಕೆಟ್ ಪತನ:1-21, 2-22, 3-30, 4-69, 5-76, 6-76, 7-84, 8-93, 9-95.
ಬೌಲಿಂಗ್; ಭುವನೇಶ್ವರ್ ಕುಮಾರ್ 2-0-12-0
ದೀಪಕ್ ಚಹರ್ 2.2-0-26-1
ಅಕ್ಷರ್ ಪಟೇಲ್ 3-0-9-3
ಯಜುವೇಂದ್ರ ಚಹಲ್ 4-0-26-1
ವೆಂಕಟೇಶ್ ಅಯ್ಯರ್ 3-0-12-1
ಹರ್ಷಲ್ ಪಟೇಲ್ 3-0-26-2
ಪಂದ್ಯಶ್ರೇಷ್ಠ: ಅಕ್ಷರ್ ಪಟೇಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.