Test Series: ಟೀಮ್ ಇಂಡಿಯಾ ವೈಟ್ ವಾಶ್… ನ್ಯೂಝಿಲೆಂಡ್ ಗೆ ಸರಣಿ ಗೆಲುವು
Team Udayavani, Nov 3, 2024, 2:02 PM IST
ಮುಂಬೈ: ಭಾರತದ ವಿರುದ್ಧದ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲೂ ಪ್ರವಾಸಿ ನ್ಯೂಜಿಲ್ಯಾಂಡ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 3–0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 147 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ, ಎರಡನೇ ಇನಿಂಗ್ಸ್‌ನಲ್ಲಿ ಕೇವಲ 121 ರನ್ ಗಳಿಸಿ ಆಲ್ ಔಟ್ ಆಗುವ ಮೂಲಕ 25 ರನ್ ಅಂತರದ ಸೋಲೊಪ್ಪಿಕೊಂಡಿತು.
ಸೋಲಿನ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಟ್ಟಿಯಲ್ಲಿಯೂ ಭಾರತ ಸ್ಥಾನ ಕುಸಿತ ಕಂಡುಬಂದಿದ್ದು ದ್ವಿತೀಯ ಸ್ಥಾನ ಪಡೆದುಕೊಂಡು ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೆ ಜಿಗಿದಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಪ್ರದರ್ಶನ ನೀಡಲು ಯತ್ನಿಸಿತ್ತು ಆದರೆ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ದಾಳಿಗೆ ನ್ಯೂಜಿಲೆಂಡ್ 235 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 263 ರನ್ ಪೇರಿಸಿತು. 28 ರನ್‌ಗಳ ಅಲ್ಪ ಮುನ್ನಡೆಯೂ ಪಡೆಯಿತು. ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಕಿವೀಸ್, ಮತ್ತೆ ಜಡೇಜಾ ಅವರ ದಾಳಿಗೆ ನಲುಗಿದ್ದಲ್ಲದೆ, 174 ರನ್ಗಳಿಗೆ ಆಲೌಟ್ ಆಗಿ 147 ರನ್‌ಗಳ ಸಾಧಾರಣ ಗುರಿ ನೀಡಿತು. ಆದರೆ ಭಾರತ ಈ ಅಲ್ಪ ಮೊತ್ತವನ್ನು ಗಳಿಸಲು ವಿಫಲವಾಗಿದೆ.
ಇದನ್ನೂ ಓದಿ: Jharkhand Polls: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ… ಸೋರೆನ್ ಸರ್ಕಾರದ ವಿರುದ್ಧ ಕಿಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡಕ್ಕೆ ಸಿಗುವ ಹಣವೆಷ್ಟು ಗೊತ್ತಾ? ಇಲ್ಲಿದೆ ಡಿಟೈಲ್ಸ್
ವಿಶ್ವ ಚಾಂಪಿಯನ್ ಆಸ್ಟ್ರೇಲಿಯಕ್ಕೆ ವೈಟ್ವಾಶ್ ಶ್ರೀಲಂಕಾ 2-0 ಸರಣಿ ಜಯಭೇರಿ
Champions Trophy : ಭಾರತ ಕ್ರಿಕೆಟ್ ತಂಡದೊಂದಿಗೆ ಕುಟುಂಬ ಸದಸ್ಯರ ಪ್ರಯಾಣವಿಲ್ಲ
IPL 2025 ಆರಂಭಕ್ಕೆ ದಿನಾಂಕ ಫಿಕ್ಸ್: ಉದ್ಘಾಟನಾ ಪಂದ್ಯದಲ್ಲೇ ಆರ್ ಸಿಬಿ ಆಟ
WPL: ಇಂದಿನಿಂದ ಮೂರನೇ ಆವೃತ್ತಿ ಮಹಿಳಾ ಟಿ20 ಲೀಗ್ ಆರಂಭ
MUST WATCH
ಹೊಸ ಸೇರ್ಪಡೆ
Kerala Temple: ಕೇರಳದಲ್ಲಿ ದೇವಸ್ಥಾನದಲ್ಲಿ ಆನೆಗಳಿಂದ ದಾಳಿ: 3 ಸಾವು
Russian: ಚರ್ನೋಬಿಲ್ ಅಣುವಿದ್ಯುತ್ ಸ್ಥಾವರಕ್ಕೆ ರಷ್ಯಾ ಡ್ರೋನ್ ದಾಳಿ
Kasaragod: ಡಿವೈಡರ್ಗೆ ಬೈಕಿ ಢಿಕ್ಕಿ; ಗಾಯಾಳು ಯುವಕನ ಸಾವು
Washington: ಭಾರತದಲ್ಲಿ ಕ್ಯಾಂಪಸ್ ತೆರೆಯಲು ಅಮೆರಿಕ ವಿವಿಗಳಿಗೆ ಪ್ರಧಾನಿ ಮೋದಿ ಆಹ್ವಾನ
Gangolli: ಅಕ್ರಮ ಕೆಂಪು ಕಲ್ಲು ಸಾಗಾಟ; ಪ್ರಕರಣ ದಾಖಲು