ಆಸ್ಟ್ರೇಲಿಯಾ ಹಾಕಿ ಲೀಗ್: ಭಾರತ “ಎ’ ತಂಡಕ್ಕೆ ಕೈತಪ್ಪಿದ ಕಂಚು
Team Udayavani, Oct 9, 2017, 7:25 AM IST
ಪರ್ಥ್: ಆಸ್ಟ್ರೇಲಿಯಾ ಹಾಕಿ ಲೀಗ್ ಕೂಟದಲ್ಲಿ ಭಾರತ ಎ ಪುರುಷರ ತಂಡದ ಸವಾಲು ಅಂತ್ಯವಾಗಿದೆ. ಭಾರತೀಯ ಆಟಗಾರರು ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ 2-3 ಗೋಲುಗಳ ಅಂತರದಿಂದ ನ್ಯೂ ಸೌಥ್ ವೇಲ್ಸ್ ವಿರುದ್ಧ ಪರಾಭವಗೊಂಡರು.
ಇದರೊಂದಿಗೆ ಭಾರತ ಕೂಟದಲ್ಲಿ 4ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿತು. ಭಾರತದ ಪರ ಆರಂಭದ 3ನೇ ನಿಮಿಷದಲ್ಲಿ ಸಿಮ್ರಾನ್ಜಿàತ್ ಗೋಲು ಸಿಡಿಸಿದರು. ಭಾರತಕ್ಕೆ 1-0 ಅಂತರದ ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಭಾರತದ ಪರ ಅಫಾನ್ ಯೂಸುಫ್ ಗೋಲು ಬಾರಿಸಿದರು. ಹೀಗಾಗಿ ಭಾರತ 2-0 ಅಂತರದ ಮುನ್ನಡೆ ಪಡೆದುಕೊಂಡು ಗೆಲುವಿನ ಆತ್ಮವಿಶ್ವಾಸದಲ್ಲಿತ್ತು. ಆದರೆ ನ್ಯೂ ಸೌಥ್ ವೇಲ್ಸ್ ಪರ ಟಾಮ್ ಗ್ರೇಗ್ 39ನೇ ನಿಮಿಷದಲ್ಲಿ, ಸಿಮೋನ್ ಆರ್ಚರ್ಡ್ 55ನೇ ನಿಮಿಷದಲ್ಲಿ ಹಾಗೂ ಶಾರ್ಪ್ 56ನೇ ನಿಮಿಷದಲ್ಲಿ ಗೋಲು ಸಿಡಿಸುವ ಮೂಲಕ ಸೌಥ್ವೇಲ್ಸ್ 3-2 ಅಂತರದ ಮುನ್ನಡೆ ಪಡೆದುಕೊಂಡು ಹಠಾತ್ ತಿರುಗೇಟು ನೀಡಿತು. ಇದಕ್ಕೆ ಭಾರತ ಪಂದ್ಯದ ಪೂರ್ಣವಧಿವರೆಗೆ ಉತ್ತರಿಸಲಾಗದೆ ಸೋಲು ಕಾಣುವಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.