ಪಾಂಡೆ ಶತಕ; ಭಾರತ “ಎ’ ಸರಣಿ ಜಯಭೇರಿ
Team Udayavani, Dec 10, 2018, 9:35 AM IST
ಮೌಂಟ್ ಮೌಂಗನುಯಿ: ಕರ್ನಾಟಕದ ಭರವಸೆಯ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಸಿಡಿಸಿದ ಅಮೋಘ ಶತಕದ ನೆರವಿನಿಂದ ಭಾರತ “ಎ’ ತಂಡ ಆತಿಥೇಯ ನ್ಯೂಜಿಲ್ಯಾಂಡ್ “ಎ’ ವಿರುದ್ಧದ 2ನೇ ಏಕದಿನ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಂಡಿದೆ.
ರವಿವಾರ ಇಲ್ಲಿ ನಡೆದ ದೊಡ್ಡ ಮೊತ್ತದ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ “ಎ’ 50 ಓವರ್‌ಗಳಲ್ಲಿ 9 ವಿಕೆಟಿಗೆ 299 ರನ್ ಪೇರಿಸಿ ಸವಾಲೊಡ್ಡಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ “ಎ’ 49 ಓವರ್‌ಗಳಲ್ಲಿ ಐದೇ ವಿಕೆಟಿಗೆ 300 ರನ್ ಪೇರಿಸಿ ಜಯ ಸಾಧಿಸಿತು. 3 ಪಂದ್ಯಗಳ ಸರಣಿಯಲ್ಲೀಗ ಭಾರತ 2-0 ಮುನ್ನಡೆಯಲ್ಲಿದೆ.
ಆರಂಭಿಕರಾದ ಶುಭಮನ್ ಗಿಲ್ (25), ಮಾಯಾಂಕ್ ಅಗರ್ವಾಲ್ (25), ವನ್‌ಡೌನ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ (59) ಅವರ ಜವಾಬ್ದಾರಿಯುತ ಬ್ಯಾಟಿಂಗ್ ಬಳಿಕ ಕಪ್ತಾನನ ಆಟವಾಡಿದ ಮನೀಷ್ ಪಾಂಡೆ ಅಜೇಯ 111 ರನ್ ಬಾರಿಸಿ ತಂಡವನ್ನು ದಡ ತಲುಪಿಸಿದರು. ಮೊದಲ ಪಂದ್ಯದಲ್ಲಿ ಮಿಂಚಿದ ಆಲ್‌ರೌಂಡರ್ ವಿಜಯ್ ಶಂಕರ್ 59 ರನ್ ಕೊಡುಗೆ ಸಲ್ಲಿಸಿದರು. ಪಾಂಡೆ-ಶಂಕರ್ 4ನೇ ವಿಕೆಟ್ ಜತೆಯಾಟದಲ್ಲಿ 123 ರನ್ ಒಟ್ಟುಗೂಡಿತು.
ಮನೀಷ್ ಪಾಂಡೆ 109 ಎಸೆತಗಳನ್ನೆದುರಿಸಿ ಸೊಗಸಾದ ಇನ್ನಿಂಗ್ಸ್ ಕಟ್ಟಿದರು. ಇದರಲ್ಲಿ 5 ಬೌಂಡರಿ, 3 ಸಿಕ್ಸರ್ ಒಳಗೊಂಡಿತ್ತು.
ವಿಲ್ ಯಂಗ್ ಸೆಂಚುರಿ
ನ್ಯೂಜಿಲ್ಯಾಂಡ್ “ಎ’ ಸರದಿಯಲ್ಲೂ ಶತಕವೊಂದು ದಾಖಲಾಗಿತ್ತು. ವನ್‌ಡೌನ್ ಬ್ಯಾಟ್ಸ್‌ಮನ್ ವಿಲ್ ಯಂಗ್ 102 ರನ್ ಬಾರಿಸಿ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು (106 ಎಸೆತ, 6 ಬೌಂಡರಿ, 3 ಸಿಕ್ಸರ್). ಆರಂಭಕಾರ ಜಾರ್ಜ್ ವರ್ಕರ್ ಕೇವಲ ಒಂದು ರನ್ನಿನಿಂದ ಶತಕ ತಪ್ಪಿಸಿಕೊಳ್ಳಬೇಕಾಯಿತು.
ಭಾರತ “ಎ’ ಪರ ಖಲೀಲ್ ಅಹ್ಮದ್ ಮತ್ತು ನಮದೀಪ್ ಸೈನಿ ತಲಾ 2 ವಿಕೆಟ್ ಕಿತ್ತರು. ಮೊದಲ ಪಂದ್ಯದಲ್ಲಿ ಭಾರತ 300 ಪ್ಲಸ್ ರನ್ ಬೆನ್ನಟ್ಟಿ ಜಯಶಾಲಿಯಾಗಿತ್ತು. ಸರಣಿಯ 3ನೇ ಹಾಗೂ ಅಂತಿಮ ಪಂದ್ಯ ಮಂಗಳವಾರ ಇದೇ ಅಂಗಳದಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.