“ಎ’ ತಂಡಗಳ ಟೆಸ್ಟ್ 6 ವಿಕೆಟ್ ಕಿತ್ತ ಕೆ. ಗೌತಮ್
Team Udayavani, Dec 3, 2018, 6:40 AM IST
ವಾಂಗರಿ (ನ್ಯೂಜಿಲ್ಯಾಂಡ್): ಕರ್ನಾಟಕದ ಆಫ್ಸ್ಪಿನ್ನರ್ ಕೃಷ್ಣಪ್ಪ ಗೌತಮ್ 6 ವಿಕೆಟ್ ಉಡಾಯಿಸಿ “ಎ’ ತಂಡಗಳ ನಡುವಿನ ಟೆಸ್ಟ್ ಪಂದ್ಯದಲ್ಲಿ ಭಾರತದ ಬೌಲಿಂಗ್ ಹೀರೋ ಎನಿಸಿಕೊಂಡಿದ್ದಾರೆ. ಇವರ ಘಾತಕ ಬೌಲಿಂಗ್ ಹೊರತಾಗಿಯೂ ನ್ಯೂಜಿಲ್ಯಾಂಡ್ “ಎ’ ತಂಡದ ಮೊದಲ ಇನ್ನಿಂಗ್ಸ್ 398ರ ತನಕ ಬೆಳೆಯಿತು.
ಭಾರತ “ಎ’ ಮೊದಲ ಇನ್ನಿಂಗ್ಸ್ನಲ್ಲಿ 323 ರನ್ ಗಳಿಸಿತ್ತು. 75 ರನ್ ಹಿನ್ನಡೆ ಬಳಿಕ ದ್ವಿತೀಯ ಸರದಿ ಆರಂಭಿಸಿರುವ ಕರುಣ್ ನಾಯರ್ ಪಡೆ ಒಂದು ವಿಕೆಟಿಗೆ 38 ರನ್ ಮಾಡಿದೆ. ಆರ್. ಸಮರ್ಥ್ 27 ಮತ್ತು ಅಂಕಿತ್ ಬವೆ° 5 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸೋಮವಾರ ಪಂದ್ಯದ ಅಂತಿಮ ದಿನ. ಸರಣಿಯ ಮೊದಲೆರಡೂ ಟೆಸ್ಟ್ಗಳು ಡ್ರಾಗೊಂಡಿದ್ದವು.
ನ್ಯೂಜಿಲ್ಯಾಂಡ್ “ಎ’ 3ಕ್ಕೆ 121 ರನ್ ಮಾಡಿದಲ್ಲಿಂದ ರವಿವಾರದ ಬ್ಯಾಟಿಂಗ್ ಮುಂದುವರಿಸಿತ್ತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಕಾಮ್ ಫ್ಲೆಚರ್ 103 ರನ್ ಬಾರಿಸಿ ಕಿವೀಸ್ ಸರದಿಯನ್ನು ಬೆಳೆಸಿದರು (221 ಎಸೆತ, 7 ಬೌಂಡರಿ, 1 ಸಿಕ್ಸರ್). ಕೆಳ ಕ್ರಮಾಂಕದಲ್ಲಿ ಕ್ರೀಸ್ ಇಳಿದ ಡೌಗ್ ಬ್ರೇಸ್ವೆಲ್ (55) ಮತ್ತು ಕೈಲ್ ಜಾಮಿಸನ್ (53) ಅರ್ಧ ಶತಕ ಬಾರಿಸುವುದರೊಂದಿಗೆ ಭಾರತದ ಮುನ್ನಡೆಯ ಯೋಜನೆ ವಿಫಲವಾಯಿತು. ಫ್ಲೆಚರ್-ಜಾಮಿಸನ್ 7ನೇ ವಿಕೆಟಿಗೆ ಭರ್ತಿ 100 ರನ್ ಒಟ್ಟುಗೂಡಿಸಿದರು.
ಸಂಕ್ಷಿಪ್ತ ಸ್ಕೋರ್: ಭಾರತ “ಎ’-323 ಮತ್ತು ಒಂದು ವಿಕೆಟಿಗೆ 38. ನ್ಯೂಜಿಲ್ಯಾಂಡ್ “ಎ’-398 (ಫ್ಲೆಚರ್ 103, ಸೀಫರ್ಟ್ 86, ಬ್ರೇಸ್ವೆಲ್ 55, ಜಾಮಿಸನ್ 53, ಕೆ. ಗೌತಮ್ 139ಕ್ಕೆ 6, ಸಿರಾಜ್ 82ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.