ಹಠಾತ್ತನೆ ಕುಸಿದು ಹೋದ ಭಾರತ ಎ ಬ್ಯಾಟಿಂಗ್
Team Udayavani, Aug 12, 2018, 6:05 AM IST
ಆಲೂರು (ಬೆಂಗಳೂರು): ಇಲ್ಲಿ ನಡೆಯುತ್ತಿರುವ ಭಾರತ ಮತ್ತು ದ.ಆಫ್ರಿಕಾ “ಎ’ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ “ಎ’ ತಂಡ 345 ರನ್ನಿಗೆ ಆಲೌಟಾಗಿದೆ. ಆರಂಭಿಕ ದಿನದ ಅಂತ್ಯಕ್ಕೆ ಕೇವಲ 4 ವಿಕೆಟ್ ಕಳೆದುಕೊಂಡು 322 ರನ್ ಗಳಿಸಿ ಭಾರತ ಉತ್ತಮ ಸ್ಥಿತಿಯಲ್ಲೇ ಇತ್ತು. ಆದರೆ 2ನೇ ದಿನ ಕೇವಲ 23 ರನ್ನಿಗೆ ಉಳಿದ 6 ವಿಕೆಟ್ ಕಳೆದುಕೊಂಡಿತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ “ಎ’ ತಂಡ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 219 ರನ್ ಗಳಿಸಿದೆ.
ಮೊದಲ ದಿನ ಹನುಮ ವಿಹಾರಿ ಶತಕ (148)ದೊಂದಿಗೆ ಉತ್ತಮ ಸ್ಥಿತಿಯಲ್ಲೇ ಇದ್ದ ಭಾರತ “ಎ’ ತಂಡ 2ನೇ ದಿನ ಕೇವಲ 23 ರನ್ನಿಗೆ 6 ವಿಕೆಟ್ ಕಳೆದುಕೊಂಡಿದ್ದು ಅಚ್ಚರಿ ಹುಟ್ಟಿಸಿದೆ. ಆಫ್ರಿಕಾ ವೇಗಿ ಡುವಾನ್ ಒಲಿವರ್ 63 ರನ್‌ಗೆ 6 ವಿಕೆಟ್ ಉರುಳಿಸಿದ್ದು ಭಾರತದ ಪತನಕ್ಕೆ ಕಾರಣವಾಯಿತು.
ಆಫ್ರಿಕಾ “ಎ’ ಉತ್ತಮ ಬ್ಯಾಟಿಂಗ್:
ಭಾರತ 345 ರನ್ನಿಗೆ ತನ್ನ ಇನ್ನಿಂಗ್ಸ್ ಮುಗಿಸಿದ ಅನಂತರ ದಕ್ಷಿಣ ಆಫ್ರಿಕಾ ತನ್ನ ಬ್ಯಾಟಿಂಗ್ ಆರಂಭಿಸಿತು. ಆರಂಭಿಕ ಮಾಲನ್ ಸೊನ್ನೆಗೆ ಮೊಹಮ್ಮದ್ ಸಿರಾಜ್‌ಗೆ ಬಲಿಯಾದರು. ಇನ್ನೊಬ್ಬ ಆರಂಭಿಕ ಸರೆಲ್ ಎರಿÌ ಹಾಗೂ ದ್ವಿತೀಯ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಜುಬೇರ್ ಹಮ್ಜಾ ಉತ್ತಮ ಜೊತೆಯಾಟವಾಡಿದರು. ಎರಿÌ 118 ಎಸೆತಗಳಲ್ಲಿ 58 ರನ್ ಗಳಿಸಿದರೆ, ಹಮ್ಜಾ 125 ಎಸೆತಗಳಲ್ಲಿ 93 ರನ್ ಗಳಿಸಿದರು. ಇವರಿಬ್ಬರ ಪೈಕಿ ಹಮ್ಜಾ ವೇಗವಾಗಿ ಬ್ಯಾಟ್ ಬೀಸಿದರು. ಈ ಇಬ್ಬರು ಔಟಾಗಿರುವುದು ಭಾರತದ ಪಾಳೆಯದಲ್ಲಿ ಭರವಸೆ ಮೂಡಿಸಿದೆ. ಆದರೆ ಇನ್ನೊಂದು ಕಡೆ ವ್ಯಾನ್ ಡರ್ ಡಸೆನ್ (18), ಆರ್.ಸೆಕೆಂಡ್ (35) ರನ್ ಗಳಿಸಿ ಕ್ರೀಸ್‌ಗೆ ಕಚ್ಚಿಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಭಾರತ “ಎ ‘345ಕ್ಕೆ ಆಲೌಟ್ (ಹನುಮ ವಿಹಾರಿ 148, ಅಂಕಿತ್ ಭಾವೆ° 80, ಡುಯಾನ್ ಒಲಿವರ್ 63ಕ್ಕೆ 6). ದಕ್ಷಿಣ ಆಫ್ರಿಕಾ “ಎ’ 219ಕ್ಕೆ 3 ವಿಕೆಟ್ (ಸರೆಲ್ ಎರಿÌ 58, ಜುಬೇರ್ ಹಮ್ಜಾ 93, ಚಹಲ್ 62ಕ್ಕೆ 2)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.