ಆಫ್ಘಾನಿಸ್ತಾನ ವಿರುದ್ಧ ಟೆಸ್ಟ್: ಕರುಣ್‌ಗೆ ಅಚ್ಚರಿ ಕರೆ
Team Udayavani, May 10, 2018, 1:23 AM IST
ಬೆಂಗಳೂರು: ಜೂ.14ರಂದು ಬೆಂಗಳೂರಿನಲ್ಲಿ ನಡೆಯಲಿರುವ ಆಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್
ಪಂದ್ಯಕ್ಕೆ ಭಾರತ ತಂಡದಾಯ್ಕೆ ನಡೆದಿದೆ.
ಅಚ್ಚರಿಯೆಂದರೆ ಕರ್ನಾಟಕದ ಖ್ಯಾತ ಬ್ಯಾಟ್ಸ್‌ಮನ್ ಕರುಣ್ ನಾಯರ್ ಅಚ್ಚರಿಯ ಕರೆ ಪಡೆದಿದ್ದಾರೆ.ಇನ್ನೂ ಗಮನಾರ್ಹ ಸಂಗತಿಯೆಂದರೆ ಈ ತಂಡದಲ್ಲಿ ರೋಹಿತ್ ಶರ್ಮಗೆ ಸ್ಥಾನ ಸಿಕ್ಕಿಲ್ಲ. ವಿರಾಟ್ ಕೊಹ್ಲಿ ಕೌಂಟಿಯಲ್ಲಿ ಆಡುವುದರಿಂದ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.
ಆಯ್ಕೆಗೂ ಮುನ್ನ ಸ್ವತಃ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಹೇಳಿಕೊಂಡ ಪ್ರಕಾರ ವಿರಾಟ್ ಕೊಹ್ಲಿ ಜಾಗದಲ್ಲಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಬೇಕಾಗಿತ್ತು. ಕೊಹ್ಲಿ ಬದಲು ಶ್ರೇಯಸ್‌ರನ್ನು ನಾವು ಯಾವಾಗಲೂ ಪರಿಗಣಿಸುತ್ತೇವೆಂದು ಅವರು ಹೇಳಿದ್ದು ಈ ಊಹೆ ಹಬ್ಬಲು ಕಾರಣ. ಆದರೆ ತಂಡದ ಆಯ್ಕೆಯಾದ ನಂತರ ನಡೆದ ಬೆಳವಣಿಗೆಗಳೇ ಬೇರೆ. ಭಾರತ ಟೆಸ್ಟ್ ತಂಡಕ್ಕೆ ಕರುಣ್ ನಾಯರ್ ಮತ್ತೂಮ್ಮೆ ದಿಢೀರ್ ಕರೆ ಪಡೆದರು. ಅದೇನೆ ಇದ್ದರೂ ರಾಜ್ಯದ ಮಟ್ಟಿಗೆ ಇದು ಸಿಹಿ ಸುದ್ದಿ.
ರೋಹಿತ್ ಶರ್ಮಗೆ ಯಾಕೆ ಸ್ಥಾನ ಸಿಕ್ಕಿಲ್ಲ?: ಗಮನಾರ್ಹ ಸಂಗತಿಯೆಂದರೆ ರೋಹಿತ್ ಶರ್ಮ ಅವರು ಈ ಏಕೈಕ ಟೆಸ್ಟ್‌ಗೆ ಸ್ಥಾನ ಪಡೆದಿಲ್ಲ. ಹಿಂದಿನ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರೋಹಿತ್ ಶರ್ಮ ಟೆಸ್ಟ್‌ನಲ್ಲಿ ಪೂರ್ಣ ವೈಫಲ್ಯ ಕಂಡಿದ್ದರು. ಆಯ್ಕೆದಾರರು ಇದನ್ನು ಗಮನಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೋ ಎನ್ನುವುದು ಇನ್ನಷ್ಟೇ ತಿಳಿಯಬೇಕು.
ಚಹಲ್‌ಗೆ ಸ್ಥಾನ ಸಿಕ್ಕಿಲ್ಲ: ಖ್ಯಾತ ಸ್ಪಿನ್ನರ್ ಆರ್.ಅಶ್ವಿನ್
ತಂಡದಿಂದ ಹೊರಹೋಗುತ್ತಾರೆಂಬ ದಟ್ಟ ವದಂತಿಗಳಿಗೆ ತಾತ್ಕಾಲಿಕವಾಗಿ ತೆರೆ ಬಿದ್ದಿದೆ. ಅವರನ್ನು ಮತ್ತೆ ಆಯ್ಕೆ ಮಾಡಲಾಗಿದೆ. ರವೀಂದ್ರ ಜಡೇಜ ಕೂಡ ಸ್ಥಾನ ಪಡೆದಿದ್ದಾರೆ. ಈ ಪಂದ್ಯಕ್ಕೆ ಅಶ್ವಿನ್‌ರನ್ನು ಆಯ್ಕೆ ಮಾಡುವುದಿಲ್ಲ, ಮಾತ್ರವಲ್ಲ ಮುಂದಿನ ಇಂಗ್ಲೆಂಡ್ ಪ್ರವಾಸದಲ್ಲಿ ಅಶ್ವಿನ್ ಸರಿಯಾಗಿ ಪ್ರದರ್ಶನ ನೀಡದಿದ್ದರೆ ಅವರನ್ನು ಶಾಶ್ವತವಾಗಿ ತಂಡದಿಂದ ಹೊರಹಾಕುವ ಯೋಚನೆಯಿದೆ ಎಂಬ ಸುದ್ದಿಗಳು ಹಬ್ಬಿದ್ದವು. ವಿದೇಶಿ ಆಟಗಾರರು ಆಫ್ಸ್ಪಿನ್‌ಗೆ ಕುದುರಿಕೊಂಡಿದ್ದಾರೆ. ಆದ್ದರಿಂದ ಲೆಗ್‌ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಲ್, ಕುಲದೀಪ್ ಯಾದವ್‌ಗೆ ಅವಕಾಶ ಕೊಡಬೇಕು ಎನ್ನುವುದು ಕೊಹ್ಲಿ ವಾದ ಎನ್ನಲಾಗಿದೆ.
ತಂಡದ ರಚನೆ ಹೇಗಿದೆ?:ತಂಡದಲ್ಲಿ 7 ಬ್ಯಾಟ್ಸ್ ಮನ್‌ಗಳು, 6 ಬೌಲರ್‌ಗಳಿದ್ದಾರೆ. ಇಬ್ಬರು ಆಲ್‌ರೌಂಡರ್
ಗಳು, ಒಬ್ಬ ವಿಕೆಟ್ ಕೀಪರ್ ಸ್ಥಾನ ಪಡೆದಿದ್ದಾರೆ.
ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ 2ನೇ ಭಾರತೀಯ ಕರುಣ್
ಕರುಣ್ ನಾಯರ್ ಈ ಹಿಂದೆಯೇ ಭಾರತ ತಂಡಕ್ಕೆ ಆಯ್ಕೆಯಾಗಿ ಅತ್ಯದ್ಭುತ ದಾಖಲೆಯೊಂದನ್ನು ಮಾಡಿದ್ದರು. 2016ರ ನವೆಂಬರ್‌ನಲ್ಲಿ ಇಂಗ್ಲೆಂಡ್‌ನ ವಿರುದಟಛಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ಅವರು ಇದುವರೆಗೆ 6 ಪಂದ್ಯವಾಡಿದ್ದಾರೆ. 2 ಏಕದಿನ ಪಂದ್ಯವಾಡಿದ್ದಾರೆ. ಕೇವಲ ತಾವಾಡಿದ 2ನೇ ಟೆಸ್ಟ್‌ನಲ್ಲೇ ಅವರು ತ್ರಿಶತಕ ಬಾರಿಸಿದ್ದರು.
ಸೆಹವಾಗ್ ನಂತರ ತ್ರಿಶತಕ ಬಾರಿಸಿದ 2ನೇ ಭಾರತೀಯ ಎಂಬ ಹೆಗ್ಗಳಿಕೆ ಕರುಣ್‌ಗೆ ಸಂದಿದೆ. ಮುಂದೆ ಆಡಿದ ನಾಲ್ಕೂ ಟೆಸ್ಟ್‌ಗಳಲ್ಲಿ ಕಳಪೆಯಾಟವಾಡಿದ ಪರಿಣಾಮ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು.
ಆಟಗಾರರ ಪಟ್ಟಿ
ಅಜಿಂಕ್ಯ ರಹಾನೆ (ನಾಯಕ), ಶಿಖರ್ ಧವನ್, ಎಂ.ವಿಜಯ್, ಕೆ.ಎಲ್.ರಾಹುಲ್, ಚೇತೇಶ್ವರ ಪೂಜಾರ,ಕರುಣ್ ನಾಯರ್, ವೃದಿಟಛಿಮಾನ್‌ಸಹಾ (ವಿಕೆಟ್‌ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜ,ಕುಲದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಶಮಿ,ಹಾರ್ದಿಕ್ ಪಾಂಡ್ಯ, ಇಶಾಂತ್‌ಶರ್ಮ, ಶಾರ್ದೂಲ್ ಠಾಕೂರ್.
ಏಕದಿನ, ಟಿ20ಗೂ ತಂಡದಾಯ್ಕೆ
ಐರೆಲಂಡ್ ವಿರುದ್ಧದ 2 ಟಿ20, ಇಂಗ್ಲೆಂಡ್ ವಿರುದ್ಧದ 3 ಟಿ20, 3 ಏಕದಿನಕ್ಕೆ ಭಾರತ ತಂಡದಾಯ್ಕೆ ಆಗಿದೆ. ಈ
ತಂಡದ ನೇತೃತ್ವವನ್ನು ವಿರಾಟ್ ಕೊಹ್ಲಿ ವಹಿಸಲಿದ್ದಾರೆ. ಐರೆಲಂಡ್ ವಿರುದಟಛಿ ಕೊಹ್ಲಿ ಆಡಲ್ಲ ಎಂಬ ನಿರೀಕ್ಷೆ ಸುಳ್ಳಾಗಿದೆ.
ಇಂಗ್ಲೆಂಡ್, ಐರೆಲಂಡ್ ವಿರುದ್ಧ ಟಿ20ಗೆ
ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಕೆ.ಎಲ್.ರಾಹುಲ್, ಸುರೇಶ್ ರೈನಾ, ಮನೀಶ್
ಪಾಂಡೆ, ಎಂ.ಎಸ್.ಧೋನಿ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಬುಮ್ರಾ, ಹಾರ್ದಿಕ್ ಪಾಂಡ್ಯ, ಸಿದ್ಧಾರ್ಥ್ ಕೌಲ್, ಉಮೇಶ್ ಯಾದವ್.
ಇಂಗ್ಲೆಂಡ್ ವಿರುದ್ಧ ಏಕದಿನಕ್ಕೆ
ವಿರಾಟ್ ಕೊಹ್ಲಿ (ನಾಯಕ),ಶಿಖರ್ ಧವನ್, ರೋಹಿತ್ ಶರ್ಮ, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಅಂಬಾಟಿರಾಯುಡು,ಎಂ.ಎಸ್.ಧೋನಿ (ವಿಕೆಟ್‌ಕೀಪರ್),ದಿನೇಶ್ ಕಾರ್ತಿಕ್,ಯಜುವೇಂದ್ರ ಚಹಲ್,ಕುಲದೀಪ್ ಯಾದವ್,ವಾಷಿಂಗ್ಟನ್ ಸುಂದರ್,ಭುವನೇಶ್ವರ್ ಕುಮಾರ್, ಬುಮ್ರಾ, ಹಾರ್ದಿಕ್ ಪಾಂಡ್ಯ, ಸಿದ್ಧಾರ್ಥ್ ಕೌಲ್,ಉಮೇಶ್ ಯಾದವ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.