ಸಂಜಿತಾ ಸ್ವರ್ಣ ಸಂಭ್ರಮ ಲಾಥರ್ ಕಂಚಿನ ದಾಖಲೆ
Team Udayavani, Apr 7, 2018, 7:00 AM IST
ಗೋಲ್ಡ್‌ಕೋಸ್ಟ್: ಮಣಿಪುರದ 24ರ ಹರೆಯದ ವೇಟ್‌ಲಿಫ್ಟರ್ ಸಂಜಿತಾ ಚಾನು ಸತತ 2ನೇ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಶುಕ್ರವಾರ ನಡೆದ 53 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಸಂಜಿತಾ ನೂತನ ಸ್ನ್ಯಾಚ್ ದಾಖಲೆಯೊಂದಿಗೆ ಸ್ವರ್ಣಕ್ಕೆ ಕೊರಳೊ ಡ್ಡಿದರು. ಇದರೊಂದಿಗೆ ಭಾರತಕ್ಕೆ ಲಭಿಸಿದ ಮೊದಲೆರಡೂ ಚಿನ್ನದ ಪದಕಗಳು ವನಿತಾ ವೇಟ್‌ಲಿಫ್ಟರ್‌ಗಳಿಂದಲೇ ಬಂದಂತಾಯಿತು. ಕೂಟದ ಮೊದಲ ದಿನ ಮೀರಾಬಾಯಿ ಚಾನು (48 ಕೆಜಿ ವಿಭಾಗ) ಕೂಡ ನೂತನ ದಾಖಲೆಯೊಂದಿಗೆ ಬಂಗಾರದ ಮೆರುಗು ನೀಡಿದ್ದರು. ಕನ್ನಡಿಗ ಪಿ. ಗುರುರಾಜ್ ಅವರಿಂದ ಭಾರತ ಗೋಲ್ಡ್‌ಕೋಸ್ಟ್ ಗೇಮ್ಸ್‌ನಲ್ಲಿ ವೇಟ್‌ಲಿಫ್ಟಿಂಗ್ ಮೂಲಕವೇ ಪದಕ ಬೇಟೆ ಆರಂಭಿಸಿತ್ತು.
ವೇಟ್‌ಲಿಫ್ಟಿಂಗ್‌ನಲ್ಲಿ ದಿನದ ಮತ್ತೂಂದು ಪದಕ ಹರಿಯಾಣದ 18ರ ಹರೆಯದ ದೀಪಕ್ ಲಾಥರ್‌ಗೆ ಒಲಿಯಿತು. ಅವರು ಪುರುಷರ 69 ಕೆಜಿ ವಿಭಾಗದಲ್ಲಿ ಕಂಚಿನ ಪದಕದೊಂದಿಗೆ ಕಂಗೊಳಿಸಿದರು. ಗೇಮ್ಸ್ ಪದಕ ಗೆದ್ದ ಭಾರತದ ಅತೀ ಕಿರಿಯ ವೇಟ್‌ಲಿಫ್ಟರ್ ಎಂಬ ದಾಖಲೆಗೆ ದೀಪಕ್ ಪಾತ್ರರಾದರು.
ಕಾಡುತ್ತಲೇ ಇತ್ತು ಬೆನ್ನು ನೋವು
ಸಂಜಿತಾ ಚಾನು ವನಿತೆಯರ 53 ಕೆಜಿ ವಿಭಾಗದಲ್ಲಿ ಒಟ್ಟು 192 ಕೆಜಿ ಭಾರವನ್ನೆತ್ತಿ ಬಂಗಾರದೊಂದಿಗೆ ಸಿಂಗಾರಗೊಂಡರು (84+108). ಒಟ್ಟು 182 ಕೆಜಿ ಎತ್ತಿದ (80+102) ಪಪುವಾ ನ್ಯೂ ಗಿನಿಯ ಲೋವಾ ದಿಕಾ ತೂವಾ ಬೆಳ್ಳಿ ಪದಕ ಗೆದ್ದರೆ, ಕೆನಡಾದ ರಶೆಲ್ ಲೆಬ್ಲಾಂಕ್ ಬಾಝಿನೆಟ್ 181 ಕೆಜಿಯೊಂದಿಗೆ ಕಂಚು ಪಡೆದರು (81+100).
ಕಳೆದ ಕೆಲವು ದಿನಗಳಿಂದ ಬೆನ್ನು ನೋವಿನಿಂದ ಸಂಕಟ ಪಡುತ್ತಿದ್ದ ಸಂಜಿತಾ ಚಾನು, ಈ ಸಮಸ್ಯೆಯ ನಡುವೆಯೂ ಚಿನ್ನದ ಪದಕ ಗೆದ್ದದ್ದು ನಿಜಕ್ಕೂ ಅಸಾಮಾನ್ಯ ಸಾಧನೆಯಾಗಿದೆ. “ಈ ಗೇಮ್ಸ್‌ನಲ್ಲಿ ಸಂಜಿತಾಗೆ ಪದಕ ಗೆಲ್ಲಲು ಸಾಧ್ಯವಾಗದು. ಕಳೆದ ವರ್ಷದ ವಿಶ್ವ ಚಾಂಪಿಯನ್‌ಶಿಪ್ ವೇಳೆ ಕಾಡತೊಡಗಿದ ಬೆನ್ನುನೋವಿನಿಂದ ಇನ್ನೂ ಪೂರ್ತಿಯಾಗಿ ಚೇತರಿಸಿಲ್ಲ… ಎಂದೆಲ್ಲ ಜನರು ಆಡಿಕೊಳ್ಳುತ್ತಿದ್ದರು. ಅಲ್ಲದೇ ಸ್ಪರ್ಧೆಯ ದೃಢೀಕರಣ ಪ್ರಕರಣದಿಂದಾಗಿ ಫಿಸಿಯೋಗಳನ್ನು ನಮ್ಮೊಡನೆ ಸ್ಪರ್ಧಾ ತಾಣಕ್ಕೆ ಬಿಡುತ್ತಿರಲಿಲ್ಲ. ಆದರೆ ಈ ಎಲ್ಲ ಸಮಸ್ಯೆಗಳ ನಡುವೆಯೂ ಚಿನ್ನವನ್ನು ಗೆಲ್ಲುವ ಮೂಲಕ ನಾನೀಗ ಎಲ್ಲ ಒತ್ತಡಗಳಿಂದ ಮುಕ್ತಳಾಗಿದ್ದೇನೆ’ ಎಂದಿದ್ದಾರೆ ಸಂಜಿತಾ ಚಾನು.
ಈ ಸಂದರ್ಭದಲ್ಲಿ ಸಂಜಿತಾ ಚಾನು ಭಾರತೀಯ ಸ್ಪರ್ಧಿಯ ದಾಖಲೆಯನ್ನೇ ಮುರಿದದ್ದು ವಿಶೇಷವಾಗಿತ್ತು. ಗ್ಲಾಸೊYà ಗೇಮ್ಸ್‌ನ ಸ್ನ್ಯಾಚ್ ವಿಭಾಗದಲ್ಲಿ ಸ್ವಾತಿ ಸಿಂಗ್ 83 ಕೆಜಿ ಭಾರ ಎತ್ತಿದ್ದರು. ಸಂಜಿತಾ ಇದಕ್ಕಿಂತ ಒಂದು ಕೆಜಿ ಹೆಚ್ಚು ತೂಕವೆತ್ತಿದರು. ಕಳೆದ ವರ್ಷದ ಕಾಮನ್ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಸಂಜಿತಾ 48 ಕೆಜಿ ವಿಭಾಗದಲ್ಲಿ 195 ಕೆಜಿ ಭಾರವನ್ನೆತ್ತಿದ್ದರು (85 ಕೆಜಿ+110 ಕೆಜಿ). ಗೋಲ್ಡ್ ಕೋಸ್ಟ್‌ನಲ್ಲಿ ಇದನ್ನು ಮೀರಲು ಸಾಧ್ಯವಾಗಲಿಲ್ಲ.
ಚಿನ್ನ ಗೆದ್ದರೂ ಸಮಾಧಾನವಿಲ್ಲ !
ಚಿನ್ನದ ಪದಕ ಗೆದ್ದರೂ ಪರಿಪೂರ್ಣ ಗೇಮ್ಸ್ ದಾಖಲೆಯನ್ನು ನಿರ್ಮಿಸಲಾಗಲಿಲ್ಲ ಎಂಬ ಕೊರಗು ಸಂಜಿತಾ ಚಾನು ಅವರನ್ನು ಕಾಡುತ್ತಿದೆ. ಸಂಜಿತಾ ಮುರಿದದ್ದು ಸ್ನ್ಯಾಚ್ ದಾಖಲೆ ಮಾತ್ರ (84 ಕೆಜಿ). ಆದರೆ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ ಅವರಿಂದ ದಾಖಲೆ ಸ್ಥಾಪಿಸಲು ಸಾಧ್ಯವಾಗಲಿಲ್ಲ (108 ಕೆಜಿ). “ಕೊನೆಯ ಪ್ರಯತ್ನದಲ್ಲಿ ವಿಫಲವಾಗದೇ ಇರುತ್ತಿದ್ದಲ್ಲಿ ನಾನು ಕಾಮನ್ವೆಲ್ತ್ ಗೇಮ್ಸ್ ದಾಖಲೆ ನಿರ್ಮಿಸುತ್ತಿದ್ದೆ. ಗೇಮ್ಸ್ ದಾಖಲೆಯೇ ನನ್ನ ಗುರಿ ಆಗಿತ್ತು. ಇದು ಕೈಗೂಡದ ಬಗ್ಗೆ ಬೇಸರವಾಗಿದೆ. ಆದರೆ ಒಟ್ಟಾರೆ ಸಾಧನೆಯಿಂದ ಖುಷಿಯಾಗಿದೆ’ ಎಂದಿದ್ದಾರೆ ಸಂಜಿತಾ ಚಾನು.
ಕ್ಲೀನ್ ಆ್ಯಂಡ್ ಜರ್ಕ್‌ನ ಕೊನೆಯ ಯತ್ನದಲ್ಲಿ 113 ಕೆಜಿ ಭಾರವೆತ್ತಲು ಪ್ರಯತ್ನಿಸಿದ ಸಂಜಿತಾ ಇದರಲ್ಲಿ ವಿಫಲರಾಗಿದ್ದರು. 112 ಕೆಜಿ ಎತ್ತಿ ದಾಖಲೆ ಸ್ಥಾಪಿಸುವುದು ತನ್ನ ಗುರಿಯಾಗಿತ್ತು ಎಂದು ಅವರು ಹೇಳಿದರು. “ಬೆನ್ನು ನೋವಿನ ಸಮಸ್ಯೆಯಿಂದಾಗಿ ನನಗೆ ಕಠಿನ ಅಭ್ಯಾಸ ನಡೆಸಲು ಸಾಧ್ಯವಾಗಿರಲಿಲ್ಲ. ಗೇಮ್ಸ್ ಗಾಗಿ ನಾನು ಅಭ್ಯಾಸ ಮಾಡಿದ್ದು ಕೇವಲ 15 ದಿನ ಮಾತ್ರ. ಆದರೆ ಉತ್ತಮ ಮಟ್ಟದ ಪ್ರೋತ್ಸಾಹ ಲಭಿಸಿದ್ದು ನನ್ನ ಪಾಲಿನ ಅದೃಷ್ಟ. ಹೀಗಾಗಿ ಚಿನ್ನ ಗೆಲ್ಲಲು ಸಾಧ್ಯವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ
MUST WATCH
ಹೊಸ ಸೇರ್ಪಡೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.