ಗೆಲುವಿನ ಬಾಗಿಲಲ್ಲಿ ಭಾರತ


Team Udayavani, Dec 6, 2017, 10:20 AM IST

06-13.jpg

ಹೊಸದಿಲ್ಲಿ: ಕೋಟ್ಲಾ ಅಂಗಳದಲ್ಲಿ ಬುಧವಾರ ಭಾರತದ ಗೆಲುವಿನ ಬಾವುಟ ಹಾರಾಡುವುದು ಬಹುತೇಕ ಖಾತ್ರಿಯಾಗಿದೆ. ಇದರೊಂದಿಗೆ ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯನ್ನು ಟೀಮ್‌ ಇಂಡಿಯಾ 2-0 ಅಂತರದಿಂದ ವಶಪಡಿಸಿಕೊಳ್ಳಲಿದ್ದು, ಸತತ 9ನೇ ಸರಣಿ ಗೆಲುವಿನ ಸಂಭ್ರಮವನ್ನು ಆಚರಿಸಲಿದೆ. ಶ್ರೀಲಂಕಾ ಈ ಪಂದ್ಯವನ್ನು ಉಳಿಸಿಕೊಂಡರೆ ಅದೊಂದು ಕ್ರಿಕೆಟ್‌ ಪವಾಡವಾಗಲಿದೆ!

ಪ್ರವಾಸಿ ಲಂಕೆಗೆ 410 ರನ್ನುಗಳ ಗೆಲುವಿನ ಗುರಿ ನೀಡಿರುವ ಭಾರತ, 4ನೇ ದಿನದಾಟದ ಅಂತ್ಯಕ್ಕೆ 31 ರನ್ನಿಗೆ 3 ವಿಕೆಟ್‌ ಕೀಳುವಲ್ಲಿ ಯಶಸ್ವಿಯಾಗಿದೆ. ಬುಧವಾರ ಪಂದ್ಯದ ಅಂತಿಮ ದಿನ. ಉಳಿದ 7 ವಿಕೆಟ್‌ಗಳಿಂದ 379 ರನ್‌ ಪೇರಿ ಸಲು ಚಂಡಿಮಾಲ್‌ ಪಡೆಗೆ ಖಂಡಿತ ಸಾಧ್ಯವಿಲ್ಲ. ಆದರೆ ಈ ಏಳರಲ್ಲಿ ಕೆಲವು ವಿಕೆಟ್‌ಗಳನ್ನಾ ದರೂ ಉಳಿಸಿಕೊಂಡು ಪಂದ್ಯವನ್ನು ಡ್ರಾ ಗೊಳಿಸಲು ಪ್ರಯತ್ನಿಸಬಹುದು. ಆದರೆ ಇದು ಸುಲಭವಲ್ಲ. “ವಾಯು ಮಾಲಿನ್ಯ’ವಾದರೂ ಲಂಕೆಯ ನೆರವಿಗೆ ಬರಬಹುದೆಂಬುದು ಕ್ರಿಕೆಟ್‌ ವಲಯ ದಲ್ಲಿ ಹರಿದಾಡುತ್ತಿರುವ ಜೋಕ್‌!

ಮಂಗಳವಾರದ ಕೊನೆಯ ಅವಧಿಯ 85 ನಿಮಿಷಗಳ ಆಟದಲ್ಲಿ 16 ಓವರ್‌ ಎದುರಿಸಿದ ಶ್ರೀಲಂಕಾ, ಆರಂಭಿಕರಾದ ದಿಮುತ್‌ ಕರುಣರತ್ನೆ (13), ಸದೀರ ಸಮರವಿಕ್ರಮ (5) ಮತ್ತು ನೈಟ್‌ ವಾಚ್‌ಮನ್‌ ಸುರಂಗ ಲಕ್ಮಲ್‌ (0) ಅವರ ವಿಕೆಟನ್ನು ಉದುರಿಸಿಕೊಂಡಿದೆ. ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ಹೆಚ್ಚು ಅಪಾಯಕಾರಿಯಾಗಿ ಗೋಚರಿಸಿದ್ದು, ಒಂದೇ ಓವರಿನಲ್ಲಿ ಕರುಣರತ್ನೆ ಮತ್ತು ಲಕ್ಮಲ್‌ ವಿಕೆಟ್‌ ಕಿತ್ತು ಲಂಕೆಗೆ “ಲಕ್‌’ ಇಲ್ಲ ಎಂಬುದನ್ನು ಸಾಬೀತುಪಡಿಸಿದರು. ಇನ್ನೊಂದು ವಿಕೆಟ್‌ ಶಮಿ ಪಾಲಾಗಿದೆ. ಧನಂಜಯ ಡಿ’ಸಿಲ್ವ (13) ಮತ್ತು ಏಂಜೆಲೊ ಮ್ಯಾಥ್ಯೂಸ್‌ (0) ಕ್ರೀಸಿನಲ್ಲಿದ್ದಾರೆ.

ಚಂಡಿಮಾಲ್‌ ಜೀವನಶ್ರೇಷ್ಠ ಆಟ
ಶ್ರೀಲಂಕಾ 9 ವಿಕೆಟಿಗೆ 356 ರನ್‌ ಮಾಡಿದಲ್ಲಿಂದ ಪ್ರಥಮ ಇನ್ನಿಂಗ್ಸ್‌ ಬ್ಯಾಟಿಂಗ್‌ ಮುಂದುವರಿಸಿ 373ಕ್ಕೆ ಆಲೌಟ್‌ ಆಯಿತು. 147ರಲ್ಲಿದ್ದ ದಿನೇಶ್‌ ಚಂಡಿಮಾಲ್‌ ಕಪ್ತಾನನ ಆಟ ಮುಂದುವರಿಸಿ 164ರ ತನಕ ಬೆಳೆದರು (361 ಎಸೆತ, 21 ಬೌಂಡರಿ, 1 ಸಿಕ್ಸರ್‌). ದಿನದ 6ನೇ ಓವರಿನಲ್ಲಿ ಇಶಾಂತ್‌ ಶರ್ಮ ಲಂಕಾ ಕಪ್ತಾನನಿಗೆ ಪೆವಿಲಿಯನ್‌ ಹಾದಿ ತೋರಿಸುವುದರೊಂದಿಗೆ ಲಂಕಾ ಇನ್ನಿಂಗ್ಸಿಗೆ ತೆರೆ ಬಿತ್ತು. ಇದು ದಿನೇಶ್‌ ಚಂಡಿಮಾಲ್‌ ಅವರ ಜೀವನಶ್ರೇಷ್ಠ ಬ್ಯಾಟಿಂಗ್‌ ಆಗಿದೆ. ಭಾರತದ ವಿರುದ್ಧವೇ, 2015ರ ಗಾಲೆ ಟೆಸ್ಟ್‌ ಪಂದ್ಯದಲ್ಲಿ ಅಜೇಯ 162 ರನ್‌ ಹೊಡೆದದ್ದು ಚಂಡಿಮಾಲ್‌ ಅವರ ಈವರೆಗಿನ ಅತ್ಯುತ್ತಮ ಪ್ರದರ್ಶನವಾಗಿತ್ತು.

ರಹಾನೆ ಒಟ್ಟು 17 ರನ್‌!
163 ರನ್‌ ಮುನ್ನಡೆ ಸಂಪಾ ದಿಸಿದ ಭಾರತ ಬಿರುಸಿನ ಆಟಕ್ಕಿಳಿದು 52.2 ಓವರ್‌ಗಳಲ್ಲಿ 5ಕ್ಕೆ 246 ರನ್‌ ಗಳಿಸಿ ತನ್ನ ದ್ವಿತೀಯ ಸರದಿಯನ್ನು ಡಿಕ್ಲೇರ್‌ ಮಾಡಿತು. ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಅವರ ಅರ್ಧ ಶತಕ ಭಾರತದ ಸರದಿಯ ಆಕರ್ಷಣೆ ಆಗಿತ್ತು. ಚೇತೇಶ್ವರ್‌ ಪೂಜಾರ ಒಂದು ರನ್‌ ಕೊರತೆಯಿಂದ “ಫಿಫ್ಟಿ’ ತಪ್ಪಿಸಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ 155 ರನ್‌ ಬಾರಿಸಿದ್ದ ಮುರಳಿ ವಿಜಯ್‌ ಈ ಬಾರಿ ಕೇವಲ 9 ರನ್ನಿಗೆ ಔಟಾದರು. ಭಾರತ ಆಗ 10 ರನ್‌ ಮಾಡಿತ್ತು. 
ಅಜಿಂಕ್ಯ ರಹಾನೆ ಅವರಿಗೆ ಭಡ್ತಿ ನೀಡಿ ಒನ್‌ಡೌನ್‌ನಲ್ಲಿ ಕಳುಹಿಸಲಾಯಿತಾದರೂ ಹತ್ತೇ ರನ್ನಿಗೆ ಔಟಾಗಿ ವಾಪಸಾದರು. 29 ರನ್ನಿಗೆ ಭಾರತದ 2ನೇ ವಿಕೆಟ್‌ ಉರುಳಿತು. ರಹಾನೆ ಪಾಲಿಗೆ ಇದೊಂದು “ದುರಂತ ಸರಣಿ’ ಎನಿಸಿತು. ಉಪನಾಯಕನೂ ಆಗಿರುವ ಅವರು 5 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 17 ರನ್‌ (4, 0, 2, 1, 10).  ಭಾರತದ ದ್ವಿತೀಯ ಸರದಿಯಲ್ಲಿ ಶಿಖರ್‌ ಧವನ್‌ ಸರ್ವಾಧಿಕ 67 ರನ್‌ ಬಾರಿಸಿದರು. 91 ಎಸೆತಗಳ ಈ ಸೊಗಸಾದ ಆಟದಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು. ಪೂಜಾರ 66 ಎಸೆತ ಎದುರಿಸಿ 49 ರನ್‌ ಹೊಡೆದರು (5 ಬೌಂಡರಿ). ಪೂಜಾರ-ಧವನ್‌ ಜೋಡಿಯ 17.2 ಓವರ್‌ಗಳ ಆಟದಲ್ಲಿ 3ನೇ ವಿಕೆಟಿಗೆ 77 ರನ್‌ ಒಟ್ಟುಗೂಡಿತು.

ಕೊಹ್ಲಿ 610 ರನ್‌ ಸಾಧನೆ
ಪ್ರಚಂಡ ಫಾರ್ಮ್ನಲ್ಲಿರುವ ವಿರಾಟ್‌ ಕೊಹ್ಲಿ 50 ರನ್‌ ಬಾರಿಸಿ ಮತ್ತೂಮ್ಮೆ ತವರಿನ ಅಭಿಮಾನಿಗಳನ್ನು ರಂಜಿಸಿದರು. ಅವರ ಈ 58 ಎಸೆತಗಳ ಬ್ಯಾಟಿಂಗಿನಲ್ಲಿ ಕೇವಲ 3 ಬೌಂಡರಿ ಸೇರಿತ್ತು. ಇದು ಅವರ 15ನೇ ಅರ್ಧ ಶತಕ. ಇದರೊಂದಿಗೆ ಈ ಸರಣಿಯಲ್ಲಿ ಕೊಹ್ಲಿ ಗಳಿಕೆ 610 ರನ್ನಿಗೆ ಏರಿತು. ಇದು 3 ಪಂದ್ಯಗಳ ಸರಣಿಯೊಂದರಲ್ಲಿ ದಾಖಲಾದ 4ನೇ ಅತ್ಯಧಿಕ ರನ್‌ ಆಗಿದೆ. ಮತ್ತೂಮ್ಮೆ ಬ್ಯಾಟಿಂಗ್‌ ಫಾರ್ಮ್ ತೆರೆದಿರಿಸಿದ ರೋಹಿತ್‌ ಶರ್ಮ ಅಜೇಯ 50 ರನ್‌ ಮಾಡಿ ಮಿಂಚಿದರು (49 ಎಸೆತ, 5 ಬೌಂಡರಿ). ಕೊಹ್ಲಿ-ರೋಹಿತ್‌ 4ನೇ ವಿಕೆಟಿಗೆ 15.2 ಓವರ್‌ಗಳಿಂದ 90 ರನ್‌ ಪೇರಿಸಿದರು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌    
        7 ವಿಕೆಟಿಗೆ ಡಿಕ್ಲೇರ್‌ 536
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‌    373
ಭಾರತ ದ್ವಿತೀಯ ಇನ್ನಿಂಗ್ಸ್‌

ಮುರಳಿ ವಿಜಯ್‌    ಸಿ ಡಿಕ್ವೆಲ್ಲ ಬಿ ಲಕ್ಮಲ್‌    9
ಶಿಖರ್‌ ಧವನ್‌    ಸ್ಟಂಪ್ಡ್ ಡಿಕ್ವೆಲ್ಲ ಬಿ ಸಂದಕನ್‌    67
ಅಜಿಂಕ್ಯ ರಹಾನೆ    ಸಿ ಸಂದಕನ್‌ ಬಿ ಪೆರೆರ    10
ಚೇತೇಶ್ವರ್‌ ಪೂಜಾರ    ಸಿ ಮ್ಯಾಥ್ಯೂಸ್‌ ಬಿ ಡಿ’ಸಿಲ್ವ    49
ವಿರಾಟ್‌ ಕೊಹ್ಲಿ    ಸಿ ಲಕ್ಮಲ್‌ ಬಿ ಗಾಮಗೆ    50
ರೋಹಿತ್‌ ಶರ್ಮ    ಔಟಾಗದೆ    50
ರವೀಂದ್ರ ಜಡೇಜ    ಔಟಾಗದೆ    4

ಇತರ        7
ಒಟ್ಟು  (5 ವಿಕೆಟಿಗೆ ಡಿಕ್ಲೇರ್‌)    246
ವಿಕೆಟ್‌ ಪತನ: 1-10, 2-29, 3-106, 4-144, 5-234. 

ಬೌಲಿಂಗ್‌: 
ಸುರಂಗ ಲಕ್ಮಲ್‌        14-3-60-1
ಲಹಿರು ಗಾಮಗೆ        12.2-1-48-1
ದಿಲುವಾನ್‌ ಪೆರೆರ        11-0-54-1
ಧನಂಜಯ ಡಿ’ಸಿಲ್ವ        5-0-31-1
ಲಕ್ಷಣ ಸಂದಕನ್‌        10-0-50-1

ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌ 
(ಗೆಲುವಿನ ಗುರಿ 410 ರನ್‌)

ದಿಮುತ್‌ ಕರುಣರತ್ನೆ    ಸಿ ಸಾಹಾ ಬಿ ಜಡೇಜ    13
ಸದೀರ ಸಮರವಿಕ್ರಮ    ಸಿ ರಹಾನೆ ಬಿ ಶಮಿ    5
ಧನಂಜಯ ಡಿ’ಸಿಲ್ವ    ಬ್ಯಾಟಿಂಗ್‌    13
ಸುರಂಗ ಲಕ್ಮಲ್‌    ಬಿ ಜಡೇಜ    0
ಏಂಜೆಲೊ ಮ್ಯಾಥ್ಯೂಸ್‌    ಬ್ಯಾಟಿಂಗ್‌    0

ಇತರ        0
ಒಟ್ಟು (3 ವಿಕೆಟಿಗೆ)        31
ವಿಕೆಟ್‌ ಪತನ: 1-14, 2-31, 3-31. 

ಬೌಲಿಂಗ್‌: 
ಇಶಾಂತ್‌ ಶರ್ಮ        3-0-6-0
ಮೊಹಮ್ಮದ್‌ ಶಮಿ        3-1-8-1
ಆರ್‌. ಅಶ್ವಿ‌ನ್‌        5-2-12-0
ರವೀಂದ್ರ ಜಡೇಜ        5-2-2-2

ಟಾಪ್ ನ್ಯೂಸ್

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.