ಭಾರತ-ಆಸ್ಟ್ರೇಲಿಯ: ಬೆಂಗಳೂರು ಟೆಸ್ಟ್ ನೋಟ
Team Udayavani, Mar 1, 2017, 11:05 AM IST
ಆಸ್ಟ್ರೇಲಿಯಕ್ಕೆ ಈ ಸಲವೂ ಭಾರತ ಪ್ರವಾಸ ಕಬ್ಬಿಣದ ಕಡಲೆಯಾಗಲಿದೆ ಎಂಬ ಕ್ರಿಕೆಟ್ ಪ್ರೇಮಿಗಳ ಲೆಕ್ಕಾಚಾರ, ನಿರೀಕ್ಷೆಗೆ ಪುಣೆ ಟೆಸ್ಟ್ ಪಂದ್ಯ ಮರ್ಮಾಘಾತವಿಕ್ಕಿದೆ. ಮೂರೇ ದಿನಗಳಲ್ಲಿ ಕೊಹ್ಲಿ ಪಡೆ 333 ರನ್ನುಗಳ ಸೋಲುಂಡು ತತ್ತರಿಸಿದೆ. ಸಹಜ ವಾಗಿಯೇ ಎಲ್ಲರ ದೃಷ್ಟಿಯೀಗ ಉದ್ಯಾನ ನಗರಿ ಬೆಂಗಳೂರಿನತ್ತ ನೆಟ್ಟಿದೆ.
ಬೆಂಗಳೂರು “ಬೋರ್ಡರ್-ಗಾವಸ್ಕರ್ ಟ್ರೋಫಿ’ ಸರಣಿಯ ಮುಂದಿನ ನಿಲ್ದಾಣ. ಇಲ್ಲಿ ಸರಣಿಯ ದ್ವಿತೀಯ ಟೆಸ್ಟ್ ನಡೆಯಲಿದ್ದು, ಭಾರತ ತಿರುಗೇಟು ನೀಡಲೇಬೇಕಾದ ಒತ್ತಡ ಹಾಗೂ ಅನಿವಾರ್ಯತೆಯಲ್ಲಿದೆ. ಇಲ್ಲೇನು ಸಂಭವಿಸೀತು ಎಂದು ಭವಿಷ್ಯ ನುಡಿಯುವುದು ಸುಲಭವಲ್ಲ. ಆದರೆ ಹಿಂದೇನಾಗಿತ್ತು, ಭಾರತ-ಆಸ್ಟ್ರೇಲಿಯ ಇಲ್ಲಿ ಎದುರಾದಾಗ ಎಂಥ ಫಲಿತಾಂಶ ದಾಖಲಾಗಿತ್ತು ಎಂಬುದನ್ನು ಒಮ್ಮೆ ಅವಲೋಕಿಸಲಡ್ಡಿಯಿಲ್ಲ.
ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಈವರೆಗೆ ಭಾರತ-ಆಸ್ಟ್ರೇಲಿಯ 5 ಟೆಸ್ಟ್‌ಗಳಲ್ಲಿ ಮುಖಾಮುಖೀಯಾಗಿವೆ. ಕಾಂಗರೂ ಪಡೆ ಎರಡನ್ನು ಗೆದ್ದಿದೆ. ಭಾರತಕ್ಕೆ ಒಲಿದದ್ದು ಒಂದೇ ಗೆಲುವು. ಉಳಿದೆರಡು ಟೆಸ್ಟ್ ಡ್ರಾಗೊಂಡಿವೆ.
1979 ವಿಶ್ವನಾಥ್ ವೈಭವ
ಭಾರತ-ಆಸ್ಟ್ರೇಲಿಯ ಮೊದಲ ಸಲ ಬೆಂಗಳೂರಿನಲ್ಲಿ ಮುಖಾಮುಖೀಯಾದದ್ದು 1979ರಲ್ಲಿ. ಅದು 6 ಪಂದ್ಯಗಳ ಸರಣಿಯ 2ನೇ ಟೆಸ್ಟ್ ಆಗಿತ್ತು. ನಾಯಕರಾಗಿದ್ದವರು ಸುನೀಲ್ ಗಾವಸ್ಕರ್ ಮತ್ತು ಕಿಮ್ ಹ್ಯೂಸ್. ಪ್ರತಿಕೂಲ ಹವಾಮಾನ ಕಾಡಿದ್ದರಿಂದ ಪಂದ್ಯ ನೀರಸ ಡ್ರಾದಲ್ಲಿ ಕೊನೆಗೊಂಡಿತು.
ಚೊಚ್ಚಲ ಟೆಸ್ಟ್ ಆಡಲಿಳಿದ ಸ್ಪಿನ್ನರ್ ಶಿವಲಾಲ್ ಯಾದವ್ ದಾಳಿಗೆ (49ಕ್ಕೆ 4) ಕುಸಿದ ಆಸ್ಟ್ರೇಲಿಯ 333ಕ್ಕೆ ಆಲೌಟ್ ಆಯಿತು. ಭಾರತದ ಪರ ದಿಲೀಪ್ ವೆಂಗ್‌ಸರ್ಕಾರ್ (112) ಮತ್ತು ತವರಿನ ಬ್ಯಾಟಿಂಗ್ ಕಲಾಕಾರ ಜಿ.ಆರ್. ವಿಶ್ವನಾಥ್ (161) ಅಮೋಘ ಪ್ರದರ್ಶನವಿತ್ತರು. ಸ್ಕೋರ್ 5ಕ್ಕೆ 457 ಡಿಕ್ಲೇರ್. ಬ್ರೂಸ್ ಯಾಡ್ಲಿì 107 ರನ್ನಿತ್ತು 4 ವಿಕೆಟ್ ಕಿತ್ತರು. ಆಸೀಸ್ ದ್ವಿತೀಯ ಸರದಿಯಲ್ಲಿ 3ಕ್ಕೆ 77 ರನ್ ಮಾಡಿತು. ಅಲ್ಲಿಗೆ ಪಂದ್ಯಕ್ಕೆ ಡ್ರಾ ಮುದ್ರೆ ಬಿತ್ತು. ಈ ಮೂರೂ ವಿಕೆಟ್ ಯಾದವ್ ಬುಟ್ಟಿಗೆ ಬಿದ್ದಿತ್ತು.
1998 ಸೋಲಿನ ನಂಟು
1998ರಲ್ಲಿ ಸರಣಿಯ 3ನೇ ಹಾಗೂ ಅಂತಿಮ ಪಂದ್ಯವನ್ನು ಇಲ್ಲಿ ಆಡಲಿಳಿಯುವಾಗ ಅಜರುದ್ದೀನ್ ನಾಯಕತ್ವದ ಭಾರತ 2-0 ಮುನ್ನಡೆಯಲ್ಲಿತ್ತು. ಆದರೆ ಮಾರ್ಕ್ ಟಯ್ಲರ್ ಪಡೆ 8 ವಿಕೆಟ್‌ಗಳಿಂದ ಗೆದ್ದು ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಇತ್ತಂಡಗಳದ್ದು 400ರ ಸಾಧನೆ. ತೆಂಡುಲ್ಕರ್ ಅವರ 177 ರನ್ ಸಾಹಸದಿಂದ ಭಾರತ 424 ರನ್ ಪೇರಿಸಿತು. ಆಸ್ಟ್ರೇಲಿಯಕ್ಕೆ ಮಾರ್ಕ್ ವೋ (153) ಆಧಾರವಾದರು. ಸ್ಕೋರ್ 400ಕ್ಕೆ ಏರಿತು. ಆದರೆ ದ್ವಿತೀಯ ಸರದಿಯಲ್ಲಿ ಕ್ಯಾಸೊøàವಿಚ್ ದಾಳಿಗೆ (28ಕ್ಕೆ 5) ಸಿಲುಕಿ 169ಕ್ಕೆ ಕುಸಿದದ್ದು ಭಾರತಕ್ಕೆ ಮುಳುವಾಯಿತು. ಆಸೀಸ್ 2ಕ್ಕೆ 195 ರನ್ ಬಾರಿಸಿ ಗೆದ್ದು ಬಂದಿತು. ಆಗ ಕಪ್ತಾನ ಟಯ್ಲರ್ 102 ರನ್ ಮಾಡಿ ಅಜೇಯರಾಗಿದ್ದರು.
ಹರ್ಭಜನ್ ಸಿಂಗ್, ಡ್ಯಾರನ್ ಲೇಹ್ಮನ್ ಅವರಿಗೆ ಇದು ಚೊಚ್ಚಲ ಟೆಸ್ಟ್ ಆಗಿತ್ತು.
2004 ಕ್ಲಾರ್ಕ್ ಸ್ಮರಣೀಯ ಪಾದಾರ್ಪಣೆ
2004-05ರ 4 ಪಂದ್ಯಗಳ ಟೆಸ್ಟ್ ಸರಣಿಗೆ ನಾಂದಿ ಹಾಡಿದ್ದೇ ಬೆಂಗಳೂರು. ಫಲಿತಾಂಶ-ಭಾರತಕ್ಕೆ 217 ರನ್ ಅಂತರದ ಸೋಲು!
ಮೊದಲ ಟೆಸ್ಟ್ ಆಡಲಿಳಿದ ಮೈಕಲ್ ಕ್ಲಾರ್ಕ್ (151), ನಾಯಕ ಆ್ಯಡಂ ಗಿಲ್‌ಕ್ರಿಸ್ಟ್ (104) ಪ್ರಚಂಡ ಪ್ರದರ್ಶನವಿತ್ತು ಕಾಂಗರೂ ಮೊತ್ತವನ್ನು 474ಕ್ಕೆ ತಲುಪಿಸಿದರು. ಗಂಗೂಲಿ ಪಡೆ 246ಕ್ಕೆ ಕುಸಿಯಿತು. ಮೆಕ್‌ಗ್ರಾತ್ (55ಕ್ಕೆ 4) ಆ್ಯಂಡ್ ಕಂಪೆನಿ ಘಾತಕ ದಾಳಿ ಸಂಘಟಿಸಿತ್ತು. ದ್ರಾವಿಡ್ ಅಪರೂಪಕ್ಕೆ ಖಾತೆ ತೆರೆಯದೇ ಹೋಗಿದ್ದರು.
ಬಳಿಕ ಆಸೀಸ್ ಹರ್ಭಜನ್ ಸ್ಪಿನ್ ಸುಳಿಗೆ ಸಿಲುಕಿದರೂ (78ಕ್ಕೆ 6) 228 ರನ್ ಒಟ್ಟುಗೂಡಿಸಿತು. ಭಾರತಕ್ಕೆ ಲಭಿಸಿದ ಟಾರ್ಗೆಟ್ 457 ರನ್. ಆದರೆ 239ಕ್ಕೆ ಆಲೌಟ್. ದ್ರಾವಿಡ್ 60 ರನ್ ಮಾಡಿ ಶೂನ್ಯದ ಕೊರತೆ ನೀಗಿಸಿಕೊಂಡರು. ಇರ್ಫಾನ್ ಪಠಾಣ್ 55 ರನ್ ಹೊಡೆದರು.
2008 ಜಹೀರ್ ಆಲ್‌ರೌಂಡ್ ಶೋ
2008-09ರ ಸರಣಿಗೂ ಬೆಂಗಳೂರಿನಲ್ಲೇ ಮುಹೂರ್ತ ಇರಿಸಲಾಗಿತ್ತು. ಆಗಿನ ನಾಯಕರು ಧೋನಿ ಮತ್ತು ಪಾಂಟಿಂಗ್. ಪಂದ್ಯದ ಫಲಿತಾಂಶ ಡ್ರಾ.
ಆಸ್ಟ್ರೇಲಿಯದ ಮೊದಲ ಸರದಿಯಲ್ಲಿ ಮಿಂಚಿದವರು ಪಾಂಟಿಂಗ್ (123), ಮೈಕಲ್ ಹಸ್ಸಿ (146), ಜಹೀರ್ ಖಾನ್ (91ಕ್ಕೆ 5) ಮತ್ತು ಇಶಾಂತ್ ಶರ್ಮ (77ಕ್ಕೆ 4). ಹೇಡನ್ ಶೂನ್ಯಕ್ಕೆ ಔಟಾದರೂ ಆಸೀಸ್ ಮೊತ್ತ 430ಕ್ಕೆ ಏರಿತು. ಭಾರತ ಜವಾಬು 360 ರನ್. ದ್ರಾವಿಡ್ 51, ಹರ್ಭಜನ್ 54, ಜಹೀರ್ 57 ರನ್ ಕೊಡುಗೆ ಸಲ್ಲಿಸಿದರು.
ದ್ವಿತೀಯ ಸರದಿಯಲ್ಲಿ ಆಸೀಸ್ 6ಕ್ಕೆ 228 ರನ್ ಗಳಿಸಿ 299 ರನ್ ಟಾರ್ಗೆಟ್ ನೀಡಿತು. ಸೆಹವಾಗ್, ದ್ರಾವಿಡ್ 24 ರನ್ ಆಗುವಷ್ಟರಲ್ಲಿ ವಾಪಾಸಾದಾಗ ಸೋಲಿನ ಭೀತಿ ಎದು ರಾದರೂ ತೆಂಡುಲ್ಕರ್-ಲಕ್ಷ್ಮಣ್ ತಂಡದ ರಕ್ಷಣೆಗೆ ನಿಂತರು. ಪಂದ್ಯ ಡ್ರಾ ಆಗುವಾಗ ಭಾರತದ ಸ್ಕೋರ್ 4ಕ್ಕೆ 177 ರನ್.
2010 ಏಕೈಕ ಗೆಲುವು
ಬೆಂಗಳೂರಿನಲ್ಲಿ ಕಾಂಗರೂ ವಿರುದ್ಧ ಭಾರತಕ್ಕೆ ಏಕೈಕ ಗೆಲುವು ಒಲಿದದ್ದು 2010ರ 2 ಪಂದ್ಯಗಳ ಕಿರು ಸರಣಿ
ಯಲ್ಲಿ. ಬೆಂಗಳೂರಿನಲ್ಲಿ ನಡೆದದ್ದು ದ್ವಿತೀಯ ಟೆಸ್ಟ್.
ಗೆಲುವಿನ ಅಂತರ 7 ವಿಕೆಟ್. ಧೋನಿ ಪಡೆಯ ಪಾಲಿಗೆ ಇದು 2-0 ಕ್ಲೀನ್‌ಸಿÌàಪ್ ಸಾಹಸವಾಗಿತ್ತು.
ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯ 478 ರನ್ ಗಳಿಸಿದರೆ, ಭಾರತ 495 ರನ್ ಪೇರಿಸಿತು. ನಾರ್ತ್ (128), ಮುರಳಿ ವಿಜಯ್ (139) ಶತಕ ಬಾರಿಸಿದರೆ, ಸಚಿನ್ ತೆಂಡುಲ್ಕರ್ ಅವರದು ದ್ವಿಶತಕ ಪರಾಕ್ರಮವಾಗಿತ್ತು (214). 2ನೇ ಇನ್ನಿಂಗ್ಸ್‌ನಲ್ಲಿ ಆಸೀಸ್ 223ಕ್ಕೆ ಕುಸಿಯಿತು. ಭಾರತ 207 ರನ್ ಗೆಲುವಿನ ಗುರಿಯನ್ನು 3 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ತಲುಪಿತು.
ವನ್‌ಡೌನ್ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಟೆಸ್ಟ್ ಕ್ಯಾಪ್ ಧರಿಸಿದ್ದು ಇದೇ ಪಂದ್ಯದಲ್ಲಿ.
– ಎಚ್. ಪ್ರೇಮಾನಂದ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.