ಆಸೀಸ್‌ನಲ್ಲಿ ಮೊದಲ ಸರಣಿ ಜಯದ ಕನಸು


Team Udayavani, Dec 6, 2018, 6:00 AM IST

india-practice-aus.jpg

ಅಡಿಲೇಡ್‌: ಭಾರತೀಯ ಕ್ರಿಕೆಟಿಗರ ಪಾಲಿಗೆ ಯಾವತ್ತೂ ಭಾರೀ ಸವಾಲಿನದೂ ಕಗ್ಗಂಟಿನದೂ ಆಗಿರುವ ಪ್ರವಾಸವೆಂದರೆ ಅದು ಆಸ್ಟ್ರೇಲಿಯ. ಕಳೆದ 70 ವರ್ಷಗಳಿಂದ, ಅಂದರೆ ಸ್ವಾತಂತ್ರ್ಯ ಲಭಿಸಿದ ಮರು ವರ್ಷದಿಂದಲೇ ಕಾಂಗರೂ ನಾಡಿನಲ್ಲಿ ಟೆಸ್ಟ್‌ ಪಂದ್ಯಗಳನ್ನು ಆಡುತ್ತಲೇ ಬಂದಿರುವ ಭಾರತಕ್ಕೆ ಇಲ್ಲಿ ಸರಣಿ ಗೆಲುವು ಮರೀಚಿಕೆಯೇ ಆಗಿ ಉಳಿದಿದೆ. ಈ ಬಾರಿಯಾದರೂ ನಮ್ಮವರಿಂದ ಇತಿಹಾಸ ಸಾಧ್ಯವೇ ಎಂಬ ತೀವ್ರ ನಿರೀಕ್ಷೆ ಹಾಗೂ ಕುತೂಹಲಕ್ಕೆ ಗುರುವಾರದಿಂದ ನಿಧಾನವಾಗಿ ಉತ್ತರ ಲಭಿಸತೊಡಗುತ್ತದೆ. “ಅಡಿಲೇಡ್‌ ಓವಲ್‌’ನಲ್ಲಿ ಇತ್ತಂಡಗಳು 4 ಪಂದ್ಯಗಳ ಸರಣಿಗೆ ಚಾಲನೆ ನೀಡಲಿವೆ.

ಈವರೆಗೆ ಆಸ್ಟ್ರೇಲಿಯದಲ್ಲಿ 11 ಟೆಸ್ಟ್‌ ಸರಣಿಗಳನ್ನು ಆಡಿರುವ ಭಾರತ ಎಂಟನ್ನು ಕಳೆದುಕೊಂಡಿದೆ. 3 ಸರಣಿಗಳು ಸಮಬಲದಲ್ಲಿ ಮುಗಿದಿವೆ. ಇಲ್ಲಿ ಆಡಿದ 44 ಟೆಸ್ಟ್‌ಗಳಲ್ಲಿ ಭಾರತಕ್ಕೆ ಗೆಲುವು ಒಲಿದದ್ದು ಐದರಲ್ಲಿ ಮಾತ್ರ. 28 ಪಂದ್ಯಗಳಲ್ಲಿ ಸೋತಿರುವುದು ಭಾರತದ ವೈಫ‌ಲ್ಯಕ್ಕೆ ಸಾಕ್ಷಿ. ಇಲ್ಲಿ 3 ಸರಣಿಗಳನ್ನು ಡ್ರಾಗೊಳಿಸಿದ ಭಾರತದ ನಾಯಕರೆಂದರೆ ಸುನೀಲ್‌ ಗಾವಸ್ಕರ್‌, ಕಪಿಲ್‌ದೇವ್‌ ಮತ್ತು ಸೌರವ್‌ ಗಂಗೂಲಿ.

ಸರಣಿ ಗೆಲ್ಲಲು ಸದವಕಾಶ
ಈ ಬಾರಿ ಕಾಂಗರೂ ನಾಡಿನಲ್ಲಿ ಭಾರತಕ್ಕೆ ಸರಣಿ ಗೆಲ್ಲಲಾಗದಿದ್ದರೆ ಮತರ್ತಂದೂ “ಸೀರಿಸ್‌ ವಿನ್‌’ ಅಸಾಧ್ಯ ಎಂಬುದು ಬಹುತೇಕ ಮಂದಿಯ ಲೆಕ್ಕಾಚಾರ ಹಾಗೂ ನಂಬಿಕೆ. ಇದಕ್ಕೆ ಕಾರಣ, ಆಸ್ಟ್ರೇಲಿಯ ತಂಡದ ಎರಡು ಸ್ತಂಭಗಳಾಗಿರುವ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ನಿಷೇಧಕ್ಕೊಳಗಾಗಿ ಹೊರಗುಳಿದಿರುವುದು. ಇದರಿಂದ ಆಸ್ಟ್ರೇಲಿಯದ ಸಾಮರ್ಥ್ಯ ಸಹಜವಾಗಿಯೇ ಕುಂದಿದೆ. ಹೀಗಾಗಿ ಭಾರತ ಇದರ ಲಾಭವೆತ್ತಿ ಮೇಲುಗೈ ಸಾಧಿಸಬಹುದು ಎಂಬ ನಿರೀಕ್ಷೆ ಗರಿಗೆದರಿದೆ.

ಆದರೆ ಇದಕ್ಕೂ ಹಿಂದೆ ನಡೆದ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ಪ್ರವಾಸದ ವೇಳೆ ಭಾರತ ತೀರಾ ಕಳಪೆ ಪ್ರದರ್ಶನ ನೀಡಿದ್ದನ್ನು ಮರೆಯುವಂತಿಲ್ಲ. ಹರಿಣಗಳ ನಾಡಿನಲ್ಲಿ 1-2, ಕ್ರಿಕೆಟ್‌ ಜನಕರ ನಾಡಿನಲ್ಲಿ 1-4 ಅಂತರದ ಸರಣಿ ಸೋಲು ಟೀಮ್‌ ಇಂಡಿಯಾ ಮೇಲಿರಿಸಿದ ಅಷ್ಟೂ ನಂಬಿಕೆಯನ್ನು ಹುಸಿಗೊಳಿಸಿತ್ತು. ತವರಿನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಎಷ್ಟೇ ಅಮೋಘ ಪ್ರದರ್ಶನ ನೀಡಿದರೂ ಅದು ಆಸ್ಟ್ರೇಲಿಯದಲ್ಲಿನ ಯಶಸ್ಸಿಗೆ ಖಂಡಿತ ಮಾನದಂಡವಾಗದು. ಕಾರಣ, ಈಗಿನ ವಿಂಡೀಸ್‌ ತಂಡವನ್ನು ಸಾಮಾನ್ಯ ಕ್ಲಬ್‌ ಟೀಮ್‌ ಕೂಡ ಹೊಡೆದುರುಳಿಸಬಲ್ಲದು! ಹೀಗಾಗಿ ಆಸ್ಟ್ರೇಲಿಯ ತಂಡ ಹೇಗೆಯೇ ಇರಲ್ಲಿ, ಭಾರತ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡಿ ಆಡಿದರಷ್ಟೇ ಮೇಲುಗೈ ಸಾಧಿಸೀತು.

ರೋಹಿತ್‌-ವಿಹಾರಿ ಸ್ಪರ್ಧೆ
ಭಾರತ ಈಗಾಗಲೇ ತನ್ನ 12ರ ಬಳಗವನ್ನು ಪ್ರಕಟಿಸಿದೆ. ಸಹಜವಾಗಿಯೇ ಪ್ರತಿಭಾನ್ವಿತ ಯುವ ಆರಂಭಕಾರ ಪೃಥ್ವಿ ಶಾ ಗೈರು ಭಾರತಕ್ಕೊಂದು ಹಿನ್ನಡೆ ಆಗಿರುವುದರಲ್ಲಿ ಅನುಮಾನವಿಲ್ಲ. ರಾಹುಲ್‌-ವಿಜಯ್‌ ದೊಡ್ಡ ಅಡಿಪಾಯ ನಿರ್ಮಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾದಾರು ಎಂಬುದೊಂದು ಪ್ರಶ್ನೆ. ಸಚಿನ್‌ ತೆಂಡುಲ್ಕರ್‌ ಹೇಳಿದಂತೆ, ಆಸ್ಟ್ರೇಲಿಯದಲ್ಲಿ ಮೊದಲ 30 ಓವರ್‌ಗಳ ಅತ್ಯಂತ ಮಹತ್ವದ್ದಾಗಿರುತ್ತದೆ. ಈ ಅವಧಿಯಲ್ಲಿ ಕ್ರೀಸಿಗೆ ಅಂಟಿಕೊಂಡು ಆಡಿದರೆ ಯಶಸ್ಸಿನ ಬಾಗಿಲು ತೆರೆದುಕೊಳ್ಳತೊಡಗುತ್ತದೆ.
ಗಾಯಾಳು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಈ ಪ್ರವಾಸಕ್ಕೆ ಆಯ್ಕೆ ಆಗದಿರುವುದರಿಂದ ತಂಡದ ಸಮತೋಲನದಲ್ಲಿ ವ್ಯತ್ಯಯವಾಗಲಿದೆ. 4 ಸ್ಪೆಷಲಿಸ್ಟ್‌ ಬೌಲರ್‌ಗಳನ್ನು ಹೊರತುಪಡಿಸಿದರೆ ಬ್ಯಾಟಿಂಗ್‌ ಕೂಡ ಮಾಡಬಲ್ಲ 5ನೇ ಬೌಲರ್‌ನ ಕೊರತೆ ತಂಡವನ್ನು ಕಾಡುವ ಸಾಧ್ಯತೆ ಇದೆ.ಒಂದು ಸ್ಥಾನದ ಸ್ಪರ್ಧೆಯಲ್ಲಿರುವ ಹನುಮ ವಿಹಾರಿ ಮತ್ತು ರೋಹಿತ್‌ ಶರ್ಮ ಇಬ್ಬರೂ ಉತ್ತಮ ಬ್ಯಾಟ್ಸ್‌ಮನ್‌ಗಳು, ಆದರೆ 5ನೇ ಬೌಲರ್‌ನ ಸ್ಥಾನವನ್ನು ತುಂಬಬಲ್ಲ ಸಮರ್ಥರಲ್ಲ. ಆರ್‌. ಅಶ್ವಿ‌ನ್‌ ಏಕೈಕ ಸ್ಪಿನ್ನರ್‌ ಆಗಿದ್ದಾರೆ. ಅನುಭವಿ ಕೀಪರ್‌ ಪಾರ್ಥಿವ್‌ ಪಟೇಲ್‌ ಬದಲು ರಿಷಬ್‌ ಪಂತ್‌ಗೆ ಅವಕಾಶ ನೀಡಿದ್ದೊಂದು ಅಚ್ಚರಿಯಾದರೂ ದಿಟ್ಟ ನಡೆ.

ಭಾರತದ ಬ್ಯಾಟಿಂಗ್‌ ವಿರಾಟ್‌ ಕೊಹ್ಲಿ ಅವರನ್ನು ಹೆಚ್ಚು ಅವಲಂಬಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಉಳಿದವರೆಲ್ಲ ವೈಫ‌ಲ್ಯ ಅನುಭವಿಸಿದಾಗ ಕೊಹ್ಲಿ 286 ರನ್‌ ಬಾರಿಸಿ ಮಿಂಚಿದ್ದರು. ಇಂಗ್ಲೆಂಡ್‌ ಪ್ರವಾಸದಲ್ಲಿ 593 ರನ್‌ ಪೇರಿಸಿದ್ದರು. ಕಪ್ತಾನನಿಗೆ ಸೂಕ್ತ ಬೆಂಬಲ ನೀಡುವಲ್ಲಿ ಪೂಜಾರ, ರಹಾನೆ ಮೊದಲಾದವರು ಯಶಸ್ವಿಯಾದರೆ ಭಾರತದ ಮೇಲಿರಿಸಿದ ನಿರೀಕ್ಷೆಗಳೂ ಸಾಕಾರಗೊಳ್ಳತೊಡಗುತ್ತವೆ.

ಕೊಹ್ಲಿಗೆ ನಾಯಕತ್ವದ ಬಾಗಿಲು ತೆರೆದ ಅಡಿಲೇಡ್‌
ವಿರಾಟ್‌ ಕೊಹ್ಲಿ ಪಾಲಿಗೆ ಅಡಿಲೇಡ್‌ ಟೆಸ್ಟ್‌ ಪಂದ್ಯ ಸ್ಮರಣೀಯ. ಕಳೆದ ಸಲ, ಅಂದರೆ 2014-15ರ ಆಸ್ಟ್ರೇಲಿಯ ಪ್ರವಾಸದ ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲೇ ಕೊಹ್ಲಿಗೆ ಮೊದಲ ಸಲ ಟೆಸ್ಟ್‌ ತಂಡದ ನಾಯಕತ್ವ ವಹಿಸುವ ಅವಕಾಶ ಲಭಿಸಿತ್ತು. ಧೋನಿ ಗಾಯಾಳಾಗಿ ಹೊರಗುಳಿದುದರಿಂದ ಕೊಹ್ಲಿ ಟೀಮ್‌ ಇಂಡಿಯಾ ಸಾರಥ್ಯ ವಹಿಸಿದ್ದರು.

ನಾಯಕನಾದ ಮೊದಲ ಟೆಸ್ಟ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಅಪರೂಪದ ದಾಖಲೆ ಸ್ಥಾಪಿಸಿದ್ದು ಕೊಹ್ಲಿ ಪಾಲಿನ ಹೆಗ್ಗಳಿಕೆಯಾಗಿತ್ತು (115 ಮತ್ತು 148 ರನ್‌). ಗೆಲುವಿನ ಅಂಚಿನ ತನಕ ಬಂದಿದ್ದ ಭಾರತ ಈ ಪಂದ್ಯವನ್ನು 48 ರನ್ನುಗಳಿಂದ ಕಳೆದುಕೊಳ್ಳಬೇಕಾಯಿತು.

ಮುಂದಿನೆರಡು ಟೆಸ್ಟ್‌ಗಳಿಗೆ ಧೋನಿ ಮರಳಿದರು. ಆದರೆ ಸಿಡ್ನಿಯ ಅಂತಿಮ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತ ತಂಡದಲ್ಲಿ ಅಚ್ಚರಿಯ ವಿದ್ಯಮಾನವೊಂದು ಸಂಭವಿಸಿತು. ಧೋನಿ ದಿಢೀರನೇ ಟೆಸ್ಟ್‌ ಕ್ರಿಕೆಟಿಗೆ ವಿದಾಯ ಘೋಷಿಸಿದರು. ಕೊಹ್ಲಿ ಪೂರ್ಣ ಪ್ರಮಾಣದಲ್ಲಿ ಭಾರತ ತಂಡದ ಟೆಸ್ಟ್‌ ನಾಯಕರಾಗಿ ಆಯ್ಕೆಗೊಂಡರು.

ಅಡಿಲೇಡ್‌ನ‌ಲ್ಲಿ ಒಲಿದದ್ದು ಒಂದೇ ಗೆಲುವು
ಆಸ್ಟ್ರೇಲಿಯದಲ್ಲಿ ಭಾರತದ ಟೆಸ್ಟ್‌ ಸಾಧನೆ ಅತ್ಯಂತ ಕಳಪೆ. ಇದರಲ್ಲಿ ಅನುಮಾನವೇ ಇಲ್ಲ. ಈವರೆಗೆ 11 ಸರಣಿ ಆಡಿದರೂ ಒಮ್ಮೆಯೂ “ಸಿರೀಸ್‌ ವಿನ್‌’ ಆದದ್ದಿಲ್ಲ.ಭಾರತದ ಸೋಲಿನಲ್ಲಿ “ಅಡಿಲೇಡ್‌ ಓವಲ್‌’ನದೂ ಸಿಂಹಪಾಲು. ಇಲ್ಲಿ ಆಡಿದ 11 ಟೆಸ್ಟ್‌ಗಳಲ್ಲಿ ಭಾರತ ಜಯಿಸಿದ್ದು ಒಂದರಲ್ಲಿ ಮಾತ್ರ. ಏಳನ್ನು ಸೋತಿದೆ. ಮೂರನ್ನು ಡ್ರಾ ಮಾಡಿಕೊಞಡಿದೆ. ಆ ಏಕೈಕ ಗೆಲುವು ಒಲಿದದ್ದು 2003-04ರ ಸರಣಿ ವೇಳೆ. ಸ್ಟೀವ್‌ ವೋ ಮತ್ತು ಸೌರವ್‌ ಗಂಗೂಲಿ ನಾಯಕರಾಗಿದ್ದರು. ಇದು ಇರ್ಫಾನ್‌ ಪಠಾಣ್‌ ಪಾಲಿನ ಪದಾರ್ಪಣ ಪಂದ್ಯವೂ ಆಗಿತ್ತು. 4 ಪಂದ್ಯಗಳ ಸರಣಿಯ 2ನೇ ಟೆಸ್ಟನ್ನು 4 ವಿಕೆಟ್‌ಗಳಿಂದ ಗೆದ್ದ ಭಾರತ 1-0 ಮುನ್ನಡೆ ಸಾಧಿಸಿತ್ತು.

ಇದೊಂದು ದೊಡ್ಡ ಮೊತ್ತದ ಮೇಲಾಟವಾಗಿತ್ತು. ಪಾಂಟಿಂಗ್‌ ಅವರ ದ್ವಿಶತಕ ಸಾಹಸದಿಂದ (242) ಆಸ್ಟ್ರೇಲಿಯ 556 ರನ್‌ ಪೇರಿಸಿತು. ಭಾರತಕ್ಕೆ ಆಸರೆಯಾದವರು ದ್ರಾವಿಡ್‌-ಲಕ್ಷ್ಮಣ್‌. “ಫಾಲೋಆನ್‌ ಟೆಸ್ಟ್‌’ ಬಳಿಕ ಕಾಂಗರೂಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಈ ಜೋಡಿ 303 ರನ್‌ ಸೂರೆಗೈದಿತು. ದ್ರಾವಿಡ್‌ 233 ರನ್‌ ಬಾರಿಸಿದರೆ, ಲಕ್ಷ್ಮಣ್‌ 148 ರನ್‌ ಹೊಡೆದರು. ಭಾರತದ ಮೊತ್ತ 523ರ ತನಕ ಏರಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜಿತ್‌ ಅಗರ್ಕರ್‌ ಅಮೋಘ ದಾಳಿ ಸಂಘಟಿಸಿ (41ಕ್ಕೆ 6) ಕಾಂಗರೂವನ್ನು 196ಕ್ಕೆ ಹಿಡಿದು ನಿಲ್ಲಿಸಿದರು. ಭಾರತಕ್ಕೆ 230 ರನ್‌ ಗುರಿ ಲಭಿಸಿತು. ಮತ್ತೆ ದ್ರಾವಿಡ್‌ ಆಪತಾºಂಧವರಾದರು (ಔಟಾಗದೆ 72). ಸೆಹವಾಗ್‌ 47, ತೆಂಡುಲ್ಕರ್‌ 37, ಲಕ್ಷ್ಮಣ್‌ 32 ರನ್‌ ಹೊಡೆದರು. ಭಾರತ 6ಕ್ಕೆ 233 ರನ್‌ ಬಾರಿಸಿ ಗೆದ್ದು ಬಂದಿತು. ಬಳಿಕ 4 ಪಂದ್ಯಗಳ ಈ ಸರಣಿ 1-1ರಿಂದ ಸಮನಾಯಿತು.

ಅಡಿಲೇಡ್‌ನ‌ಲ್ಲಿ ಭಾರತ-ಆಸ್ಟ್ರೇಲಿಯ ಸಾಧನೆ
ವರ್ಷ    ಫ‌ಲಿತಾಂಶ

1948    ಆಸ್ಟ್ರೇಲಿಯಕ್ಕೆ ಇನ್ನಿಂಗ್ಸ್‌/16 ರನ್‌ ಜಯ
1967    ಆಸ್ಟ್ರೇಲಿಯಕ್ಕೆ 146 ರನ್‌ ಜಯ
1978    ಆಸ್ಟ್ರೇಲಿಯಕ್ಕೆ 47 ರನ್‌ ಜಯ
1981    ಡ್ರಾ
1985    ಡ್ರಾ
1992    ಆಸ್ಟ್ರೇಲಿಯಕ್ಕೆ 38 ರನ್‌ ಜಯ
1999    ಆಸ್ಟ್ರೇಲಿಯಕ್ಕೆ 285 ರನ್‌ ಜಯ
2003    ಭಾರತಕ್ಕೆ 4 ವಿಕೆಟ್‌ ಜಯ
2008    ಡ್ರಾ
2012    ಆಸ್ಟ್ರೇಲಿಯಕ್ಕೆ 298 ರನ್‌ ಜಯ
2014    ಆಸ್ಟ್ರೇಲಿಯಕ್ಕೆ 48 ರನ್‌ ಜಯ

ಅಡಿಲೇಡ್‌ನ‌ಲ್ಲಿ ಭಾರತ
ಟೆಸ್ಟ್‌: 11
ಜಯ: 01
ಸೋಲು: 07
ಡ್ರಾ: 03

ತಂಡಗಳು
ಭಾರತ

ಕೆ.ಎಲ್‌. ರಾಹುಲ್‌, ಮುರಳಿ ವಿಜಯ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್‌ ಶರ್ಮ, ಹನುಮ ವಿಹಾರಿ, ರಿಷಬ್‌ ಪಂತ್‌ (ವಿ.ಕೀ.), ಆರ್‌. ಅಶ್ವಿ‌ನ್‌, ಇಶಾಂತ್‌ ಶರ್ಮ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ.

ಆಸ್ಟ್ರೇಲಿಯ 
ಮಾರ್ಕಸ್‌ ಹ್ಯಾರಿಸ್‌, ಆರನ್‌ ಫಿಂಚ್‌, ಉಸ್ಮಾನ್‌ ಖ್ವಾಜಾ, ಟ್ರ್ಯಾವಿಸ್‌ ಹೆಡ್‌, ಶಾನ್‌ ಮಾರ್ಷ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಟಿಮ್‌ ಪೇನ್‌ (ನಾಯಕ), ನಥನ್‌ ಲಿಯೋನ್‌, ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌, ಜೋಶ್‌ ಹ್ಯಾಝಲ್‌ವುಡ್‌.
ಆರಂಭ: ಬೆಳಗ್ಗೆ 5.30
ಪ್ರಸಾರ: ಸೋನಿ ಸಿಕ್ಸ್‌

ಟಾಪ್ ನ್ಯೂಸ್

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

Newborn baby’s body found in toilet pit!

Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prithvi shaw

Mumbai Cricket: ಸಚಿನ್‌ ತೆಂಡೂಲ್ಕರ್‌ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

virat-sachin-Dhoni

Brand Value: ಬಾಲಿವುಡ್‌ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್‌ ಮೌಲ್ಯ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

4(1

Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.