ಕೊಹ್ಲಿ ಭರ್ಜರಿ ಶತಕ ; ಆಸೀಸ್ ವಿರುದ್ಧ 6 ವಿಕೆಟ್ ಜಯ ; ಸರಣಿ ಸಮಬಲ
Team Udayavani, Jan 15, 2019, 11:33 AM IST
ಅಡಿಲೇಡ್ : ಇಲ್ಲಿ ಮಂಗಳವಾರ ನಡೆದ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ದ ಏಕದಿನ ಸರಣಿಯ ದ್ವಿತೀಯ ಪಂದ್ಯವನ್ನು ಕೊಹ್ಲಿ ಪಡೆ 6 ವಿಕೆಟ್‌ಗಳಿಂದ ಗೆಲ್ಲುವ ಮೂಲಕ 3 ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಟಾಸ್‌ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್, ಶಾನ್ ಮಾರ್ಶ್ ಅವರ 131 ರನ್‌ಗಳ ಭರ್ಜರಿ ಶತಕದ ಆಟದಿಂದಾಗಿ 9 ವಿಕೆಟ್ ನಷ್ಟಕ್ಕೆ 298 ರನ್‌ಗಳನ್ನು ಕಲೆ ಹಾಕಿ ಭಾರತಕ್ಕೆ ಗೆಲ್ಲಲು 299 ರನ್‌ಗಳ ಗುರಿ ಮುಂದಿಟ್ಟಿತು. ಭಾರತದ ಪರ ಭುವನೇಶ್ವರ್ ಕುಮಾರ್ 4 , ಮೊಹಮದ್ ಶಮಿ 3 ಮತ್ತು ರವೀಂದ್ರ ಜಡೇಜಾ 1 ವಿಕೆಟ್ ಪಡೆದು ಗಮನ ಸೆಳೆದರು.
ಗುರಿ ಬೆನ್ನಟ್ಟಿದ ಭಾರತ 49.2 ಓವರ್‌ಗಳಲ್ಲಿ 299 ರನ್‌ಗಳಿಸುವ ಮೂಲಕ ಜಯದ ನಗೆ ಬೀರಿತು. ಭಾರತದ ಬ್ಯಾಟಿಂಗ್‌ನಲ್ಲಿ ಕ್ಯಾಪ್ಟನ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದರು. 104 ರನ್‌ಗಳಿಸಿ ಔಟಾದರು. ರೋಹಿತ್ ಶರ್ಮಾ 43, ಧವನ್ 32, ಅಂಬಟಿ ರಾಯುಡು 24, ಧೋನಿ 55 ಮತ್ತು ದಿನೇಶ್ ಕಾರ್ತಿಕ್ 25 ರನ್‌ಗಳಿಸಿ ಅಜೇಯರಾಗಿ ಉಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.