ಭಾರತಕ್ಕೊಲಿದ ಅಂಡರ್-19 ಏಷ್ಯಾ ಕಪ್
ಬೌಲರ್‌ಗಳ ಮೆರೆದಾಟ, ಭಾರತೀಯರಿಗೆ ರೋಚಕ ಗೆಲುವು
Team Udayavani, Sep 14, 2019, 8:00 PM IST
ಕೊಲಂಬೊ: ಮುಂಬಯಿಯ ಬೆಸ್ಟ್’ ಬಸ್ ನಿರ್ವಾಹಕಿಯ ಪುತ್ರ, ಎಡಗೈ ಸ್ಪಿನ್ನರ್ ಅಥರ್ವ ಅಂಕೋಲೆಕರ್ ಅವರ ಅಮೋಘ ಬೌಲಿಂಗ್ ಪರಾಕ್ರಮದಿಂದ ಭಾರತ ಅಂಡರ್-19 ಏಷ್ಯಾ ಕಪ್ ಏಕದಿನ ಕ್ರಿಕೆಟ್ ಚಾಂಪಿಯನ್ ಆಗಿದೆ.
ಶನಿವಾರ ಕೊಲಂಬೊದಲ್ಲಿ ನಡೆದ ಪ್ರಶಸ್ತಿ ಕಾಳಗ ಬೌಲರ್‌ಗಳ ಮೆರೆದಾಟಕ್ಕೆ ಸಾಕ್ಷಿಯಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 32.4 ಓವರ್‌ಗಳಲ್ಲಿ 106 ರನ್ನಿಗೆ ಆಲೌಟಾಗಿಯೂ ಈ ಮೊತ್ತವನ್ನು ಉಳಿಸಿಕೊಂಡದ್ದು ಅಸಾಮಾನ್ಯ ಸಾಧನೆ. ಜವಾಬಿತ್ತ ಬಾಂಗ್ಲಾದೇಶ 33 ಓವರ್‌ಗಳಲ್ಲಿ 101 ರನ್ನಿಗೆ ಕುಸಿಯಿತು.
ಅಂಕೋಲೆಕರ್ 28ಕ್ಕೆ 5
ಅಂಕೋಲೆಕರ್ ಸಾಧನೆ 28ಕ್ಕೆ 5 ವಿಕೆಟ್. ಇದರಲ್ಲಿ 2 ವಿಕೆಟ್‌ಗಳನ್ನು ಪಂದ್ಯದ ಕೊನೆಯ ಓವರ್‌ನಲ್ಲಿ ಉಡಾಯಿಸಿ ಭಾರತದ ಗೆಲುವು ಸಾರಿದರು. ಅವರೆಸೆದ 8 ಓವರ್‌ಗಳಲ್ಲಿ 2 ಮೇಡನ್ ಆಗಿತ್ತು. ಅಂಕೋಲೆಕರ್‌ಗೆ ಆಕಾಶ್ ಸಿಂಗ್ ಅವರಿಂದ ಉತ್ತಮ ಬೆಂಬಲ ಲಭಿಸಿತು. ಆಕಾಶ್ 12 ರನ್ನಿಗೆ 3 ವಿಕೆಟ್ ಕಿತ್ತರು. ವಿದ್ಯಾಧರ್ ಪಾಟೀಲ್, ಸುಶಾಂತ್ ಮಿಶ್ರಾ ಉಳಿದೆರಡು ವಿಕೆಟ್ ಹಂಚಿಕೊಂಡರು.
ಚೇಸಿಂಗ್ ವೇಳೆ 16 ರನ್ನಿಗೆ 4 ವಿಕೆಟಿಗೆ ಉರುಳಿಸಿಕೊಂಡ ಬಾಂಗ್ಲಾ ತೀವ್ರ ಒತ್ತಡಕ್ಕೆ ಸಿಲುಕಿತು. ನಾಯಕ ಅಕºರ್ ಅಲಿ (23) ಮತ್ತು ಮೃತ್ಯುಂಜಯ್ ಚೌಧರಿ (21) ಹೋರಾಟ ಮುಂದುವರಿಸಿದರೂ, ಈ ಜೋಡಿ ಬೇರ್ಪಟ್ಟ ಬಳಿಕ ಮತ್ತೆ ಭಾರತದ ಬೌಲರ್‌ಗಳ ಕೈ ಮೇಲಾಯಿತು.
ಜುರೆಲ್, ಕರುಣ್
ಭಾರತದ ಬ್ಯಾಟಿಂಗ್ ಸರದಿಯಲ್ಲಿ ನಾಯಕ ಧ್ರುವ್ ಜುರೆಲ್ (33) ಮತ್ತು ಕೆಳ ಕ್ರಮಾಂಕದ ಆಟಗಾರ ಕರುಣ್ ಲಾಲ್ (37) ಉತ್ತಮ ಪ್ರದರ್ಶನವಿತ್ತರು. ಇವರ ಪ್ರಯತ್ನದಿಂದ ತಂಡದ ಮೊತ್ತ ನೂರರ ಗಡಿ ದಾಟಿತು.
ಎಡಗೈ ಪೇಸರ್ ಮೃತ್ಯುಂಜಯ್ ಚೌಧರಿ (18ಕ್ಕೆ 3), ಆಫ್ ಸ್ಪಿನ್ನರ್ ಶಮಿಮ್ ಹೊಸೈನ್ (8ಕ್ಕೆ 3) ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಅಪಾಯಕಾರಿಯಾಗಿ ಗೋಚರಿಸಿದರು. ಎರಡಂಕೆಯ ಸ್ಕೋರ್ ದಾಖಲಿಸಿದ ಮತ್ತೂಬ್ಬ ಆಟಗಾರ ಶಾಶ್ವತ್ ರಾವತ್ (19). ಭಾರತದ ಮೊದಲ 3 ವಿಕೆಟ್ 8 ರನ್ನಿಗೆ ಉರುಳಿತ್ತು. ಭಾರೀ ಮಳೆಯಿಂದಾಗಿ ಎರಡೂ ಸೆಮಿಫೈನಲ್ ಪಂದ್ಯಗಳು ರದ್ದಾಗಿದ್ದವು.
ಸಂಕ್ಷಿಪ್ತ ಸ್ಕೋರ್: ಭಾರತ 32.4 ಓವರ್‌ಗೆ 106 (ಕರಣ್ ಲಾಲ್ 37, ಜುರೆಲ್ 33, ಶಮಿಮ್ 8ಕ್ಕೆ 3). ಬಾಂಗ್ಲಾದೇಶ 33 ಓವರ್‌ಗೆ 101 (ಅಕºರ್ ಅಲಿ 23, ಚೌಧರಿ 21, ಅಂಕೋಲೆಕರ್ 28ಕ್ಕೆ 5).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.