ಮೊದಲ ಏಕದಿನ ಪಂದ್ಯ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಪ್ರಸಿದ್ಧ ಗೆಲುವು
Team Udayavani, Mar 23, 2021, 9:37 PM IST
ಪುಣೆ: ಅಮೋಘ ಬ್ಯಾಟಿಂಗ್ ಜತೆಗೆ ಅಷ್ಟೇ ಪರಿಣಾಮಕಾರಿ ಬೌಲಿಂಗ್ ಆಕ್ರಮಣ ನಡೆಸಿದ ನಡೆಸಿದ ಭಾರತ, ವಿಶ್ವ ಚಾಂಪಿಯನ್ ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ 66 ರನ್ನುಗಳ ಜಯಭೇರಿ ಮೊಳಗಿಸಿದೆ.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ನಾಲ್ವರ ಅರ್ಧ ಶತಕದ ನೆರವಿನಿಂದ 5 ವಿಕೆಟಿಗೆ 317ರನ್ನು ಗಳ ಬೃಹತ್ ಸ್ಕೋರ್ ದಾಖಲಿಸಿತು. ಇಂಗ್ಲೆಂಡ್ ಉತ್ತಮ ಆರಂಭದ ಹೊರತಾಗಿಯೂ 42.1 ಓವರ್‌ಗಳಲ್ಲಿ 251ಕ್ಕೆ ಆಲೌಟ್ ಆಯಿತು.
ಪ್ರಸಿದ್ಧ್ ಕೃಷ್ಣ 54 ರನ್ನಿಗೆ 4 ವಿಕೆಟ್ ಕಿತ್ತು ಸ್ಮರಣೀಯ ಪದಾರ್ಪಣೆಗೈದರು. ಅವರು ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಉರುಳಿಸಿದ ಭಾರತದ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು.
ಭಾರತದ ಬೃಹತ್ ಮೊತ್ತಕ್ಕೆ ಇಂಗ್ಲೆಂಡ್ ದಿಟ್ಟ ರೀತಿಯಲ್ಲೇ ಜವಾಬು ನೀಡಿತು. ಜಾನಿ ಬೇರ್‌ಸ್ಟೊ-ಜಾಸನ್ ರಾಯ್ ಅತ್ಯಂತ ಆಕ್ರಮಣಕಾರಿ ಬ್ಯಾಟಿಂಗಿಗೆ ಮುಂದಾದರು. ಬ್ಯಾಟಿಂಗಿಗೆ ಸಹಕರಿಸುತ್ತಿದ್ದ ಪುಣೆ ಟ್ರ್ಯಾಕ್‌ನಲ್ಲಿ ಭಾರತೀಯರ ಬೌಲಿಂಗ್ ಯಾವುದೇ ಫಲ ನೀಡಲಿಲ್ಲ. ಮೊದಲ ವಿಕೆಟಿಗೆ ಕೇವಲ 14.2 ಓವರ್‌ಗಳಲ್ಲಿ ಈ ಜೋಡಿ 135 ರನ್ ಪೇರಿಸಿತು. ಆಗ ಪ್ರಸಿದ್ಧ್ ಕೃಷ್ಣ ಮೊದಲ ಯಶಸ್ಸು ತಂದಿತ್ತರು. 46 ರನ್ ಮಾಡಿದ ರಾಯ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.
ಮುಂದಿನ ಓವರಿನಲ್ಲೇ ಪ್ರಸಿದ್ಧ್ ಕೃಷ್ಣ ದೊಡ್ಡ ಬೇಟೆಯಾಡಿದರು. ಭಡ್ತಿ ಪಡೆದು ಬಂದಿದ್ದ ಅಪಾಯಕಾರಿ ಬೆನ್ ಸ್ಟೋಕ್ಸ್ (1) ಅವರನ್ನು ಅಷ್ಟೇ ಬೇಗ ವಾಪಸ್ ಕಳುಹಿಸಿದರು. ಠಾಕೂರ್ ಮ್ಯಾಜಿಕ್ ಮುಂದಿನದು ಶಾದೂìಲ್ ಠಾಕೂರ್ ಮ್ಯಾಜಿಕ್. ಇನ್ನೊಂದು ತುದಿಯಲ್ಲಿ ಬೇರು ಬಿಟ್ಟು ನಿಂತಿದ್ದ ಬೇರ್‌ಸ್ಟೊ ಶತಕದತ್ತ ದೌಡಾ ಯಿಸುತ್ತಿದ್ದರು. ಆದರೆ ಅವರಿಗೆ 11ನೇ ಸೆಂಚುರಿ ಮರೀಚಿಕೆಯಾಯಿತು. 94 ರನ್ ಮಾಡಿದ ವೇಳೆ ಠಾಕೂರ್ ಮೋಡಿಗೆ ಸಿಲುಕಿದರು.
ಬೇರ್‌ಸ್ಟೊ ವಿಕೆಟ್ ಬೇಟೆಯಾಡಿದ ಬಳಿಕ ಠಾಕೂರ್ ಇನ್ನಷ್ಟು ಘಾತಕವಾಗಿ ಪರಿ ಣಮಿಸಿದರು. ಒಂದೇ ಓವರಿನಲ್ಲಿ ನಾಯಕ ಇಯಾನ್ ಮಾರ್ಗನ್ (22) ಮತ್ತು ಜಾಸ್ ಬಟ್ಲರ್ (2) ವಿಕೆಟ್ ಉಡಾಯಿಸಿ ಪಂದ್ಯಕ್ಕೆ ದೊಡ್ಡದೊಂದು ತಿರುವು ಕೊಟ್ಟರು.
ಫೀಲ್ಡಿಂಗ್ ವೇಳೆ ಶ್ರೇಯಸ್ ಅಯ್ಯರ್ ಗಾಯಾಳಾಗಿದ್ದು, ಮುಂದಿನ ಪಂದ್ಯಗಳಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.
ಇದನ್ನೂ ಓದಿ :ಮಾನವ ಹಕ್ಕುಗಳ ಉಲ್ಲಂಘನೆ : ವಿಶ್ವಸಂಸ್ಥೆಯಲ್ಲಿ ಲಂಕೆ ವಿರುದ್ಧ ನಿರ್ಣಯ
ಭಾರತದ ಬ್ಯಾಟಿಂಗ್ ಪವರ್
ಶಿಖರ್ ಧವನ್, ನಾಯಕ ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಮತ್ತು ಕೃಣಾಲ್ ಪಾಂಡ್ಯ ಅವರ ಬ್ಯಾಟಿಂಗ್ ಪರಾಕ್ರಮ ಭಾರತದ ಸರದಿಯ ಹೈಲೈಟ್ ಎನಿಸಿತು. ಇವರೆಲ್ಲರಿಂದಲೂ ಅರ್ಧ ಶತಕ ದಾಖಲಾಯಿತು. ಆದರೆ ಧವನ್ ಕೇವಲ 2 ರನ್ನಿನಿಂದ ಶತಕ ತಪ್ಪಿಸಿಕೊಂಡರು. ಧವನ್ ಮತ್ತು ರಾಹುಲ್ ಇತ್ತೀಚಿನ ದಿನಗಳಲ್ಲಿ ತೀವ್ರ ಬ್ಯಾಟಿಂಗ್ ಬರಗಾಲದಲ್ಲಿದ್ದರೆಂಬುದನ್ನು ಮರೆಯುವಂತಿಲ್ಲ.
ಧವನ್-ಕೊಹ್ಲಿ ಮತ್ತು ರಾಹುಲ್-ಕೃಣಾಲ್ ಜೋಡಿಯಿಂದ ಶತಕದ ಜತೆಯಾಟ ದಾಖಲಾಯಿತು. ಧವನ್ ಮತ್ತು ಕೊಹ್ಲಿ ದ್ವಿತೀಯ ವಿಕೆಟಿಗೆ 105 ರನ್ ಒಟ್ಟುಗೂಡಿಸಿದರು. ಕೊನೆಯ 9.3 ಓವರ್‌ಗಳನ್ನು ತಮ್ಮ ಸ್ಫೋಟಕ ಆಟಕ್ಕೆ ಮೀಸಲಿರಿಸಿದ ರಾಹುಲ್- ಕೃಣಾಲ್ ಮುರಿಯದ 6ನೇ ವಿಕೆಟಿಗೆ 112 ರನ್ ರಾಶಿ ಹಾಕಿದರು.
ರೋಹಿತ್ ಶರ್ಮ 28 ರನ್ ಮಾಡಿದರು. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು ಶ್ರೇಯಸ್ ಅಯ್ಯರ್ (6) ಮತ್ತು ಹಾರ್ದಿಕ್ ಪಾಂಡ್ಯ (1) ಮಾತ್ರ.
ರೋಹಿತ್- ಧವನ್ ಬಹಳ ಎಚ್ಚರಿಕೆಯ ಆರಂಭ ಒದಗಿಸಿದರು. 15.1 ಓವರ್‌ಗಳಲ್ಲಿ 64 ರನ್ ಒಟ್ಟುಗೂಡಿತು. ತೀವ್ರ ಒತ್ತಡದಲ್ಲಿದ್ದ ಧವನ್ ನಿಧಾನವಾಗಿ ಬ್ಯಾಟಿಂಗ್ ಲಯಕ್ಕೆ ಮರಳಿದರು. 18ನೇ ಶತಕವನ್ನೂ ಸಮೀಪಿಸಿದರು. ಆದರೆ ನೂರರ ಗಡಿಯಲ್ಲಿ ಅದೃಷ್ಟ ಕೈಕೊಟ್ಟಿತು. 98 ರನ್ನಿಗೆ ವಿಕೆಟ್ ಕೈಚೆಲ್ಲಿ ನಿರಾಶರಾಗಿ ಮರಳಿದರು (106 ಎಸೆತ, 11 ಬೌಂಡರಿ, 2 ಸಿಕ್ಸರ್). ಅವರು ನರ್ವಸ್ ನೈಂಟಿಗೆ ಸಿಲುಕಿದ 5ನೇ ಸಂದರ್ಭ ಇದಾಗಿದೆ. ಹೀಗಾಗಿ ಇದು ಅವರ 31ನೇ ಅರ್ಧ ಶತಕವಾಗಿ ದಾಖಲಾಯಿತು.
ಇದಕ್ಕೂ ಮೊದಲು ಕೊಹ್ಲಿ ಟಿ20 ಫಾರ್ಮ್ ಮುಂದುವರಿಸಿ 61ನೇ ಅರ್ಧ ಶತಕ ದಾಖಲಿಸಿದರು. ಕಪ್ತಾನನ ಕೊಡುಗೆ 56 ರನ್. 60 ಎಸೆತಗಳ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಒಳಗೊಂಡಿತ್ತು.
ಮುನ್ನೂರರ ಗಡಿಯಾಚೆ…
ಒಂದು ಹಂತದಲ್ಲಿ ಭಾರತ ಪಟಪಟನೆ ವಿಕೆಟ್ ಕಳೆದುಕೊಂಡು ಕುಸಿತದ ಭೀತಿಗೆ ಸಿಲುಕಿತು. ಕೊಹ್ಲಿ, ಅಯ್ಯರ್, ಧವನ್ ಮತ್ತು ಹಾರ್ದಿಕ್ ಪಾಂಡ್ಯ ಕೇವಲ 36 ರನ್ ಅಂತರದಲ್ಲಿ ಪೆವಿಲಿಯನ್ ಸೇರಿಕೊಂಡರು. 41ನೇ ಓವರ್ ವೇಳೆ 205ಕ್ಕೆ 5 ವಿಕೆಟ್ ಕಳೆದುಕೊಂಡ ಭಾರತ ಮುನ್ನೂರರ ಗಡಿ ಮುಟ್ಟುತ್ತದೆಂಬ ಯಾವ ನಿರೀಕ್ಷೆಯೂ ಇರಲಿಲ್ಲ. ಆದರೆ ರಾಹುಲ್-ಕೃಣಾಲ್ ಸೇರಿಕೊಂಡು ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.
ರಾಹುಲ್ ಕೂಡ ಆರಂಭದಲ್ಲಿ ನಿಧಾನಿ ಯಾಗಿದ್ದರು. ಆದರೆ ಕೃಣಾಲ್ ಜತೆಗೂಡಿದ ಬಳಿಕ ಬಿರುಸಿನ ಆಟಕ್ಕೆ ಮುಂದಾದರು. 43 ಎಸೆತಗಳಿಂದ 62 ರನ್ ಬಾರಿಸಿ ಅಜೇಯರಾಗಿ ಉಳಿದರು. ಸಿಡಿಸಿದ್ದು 4 ಫೋರ್, 4 ಸಿಕ್ಸರ್. ಇದು ಅವರ 9ನೇ ಫಿಫ್ಟಿ.
ಕೃಣಾಲ್ ಫಿಫ್ಟಿ ದಾಖಲೆ
ಕೃಣಾಲ್ ಪಾಂಡ್ಯ ಪಾಲಿಗೆ ಇದು “ಡ್ರೀಮ್ ಓಪನಿಂಗ್’ ಆಗಿತ್ತು. ಪದಾರ್ಪಣ ಏಕದಿನ ಪಂದ್ಯದಲ್ಲೇ ಅತೀ ಕಡಿಮೆ 26 ಎಸೆತಗಳಿಂದ ಅರ್ಧ ಶತಕ ಪೂರ್ತಿಗೊಳಿಸಿದ ದಾಖಲೆಗೆ ಭಾಜನರಾದರು. ನ್ಯೂಜಿಲ್ಯಾಂಡಿನ ಜಾನ್ ಮಾರಿಸ್ ದಾಖಲೆಯನ್ನು ಮುರಿದರು (35 ಎಸೆತ). 7ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಕೃಣಾಲ್ 31 ಎಸೆತಗಳಿಂದ 58 ರನ್ ರಾಶಿ ಹಾಕಿದರು. ಇದರಲ್ಲಿ 7 ಬೌಂಡರಿ, 2 ಸಿಕ್ಸರ್ ಒಳಗೊಂಡಿತ್ತು.
ಕೃಣಾಲ್ ಪಾಂಡ್ಯ ಚೊಚ್ಚಲ ಏಕದಿನದಲ್ಲೇ ಅರ್ಧ ಶತಕ ದಾಖಲಿಸಿದ ಭಾರತದ 15ನೇ ಆಟಗಾರ. 2016ರಲ್ಲಿ ಫಯಾಜ್ ಫಜಲ್ ಬಳಿಕ ಕಂಡುಬಂದ ಮೊದಲ ನಿದರ್ಶನ ಇದಾಗಿದೆ. 1974ರಲ್ಲಿ ಬೃಜೇಶ್ ಪಟೇಲ್ ಮೊದಲ ಸಲ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಸ್ಕೋರ್ ಪಟ್ಟಿ
ಭಾರತ
ರೋಹಿತ್ ಶರ್ಮ ಸಿ ಬಟ್ಲರ್ ಬಿ ಸ್ಟೋಕ್ಸ್ 28
ಶಿಖರ್ ಧವನ್ ಸಿ ಮಾರ್ಗನ್ ಬಿ ಸ್ಟೋಕ್ಸ್ 98
ವಿರಾಟ್ ಕೊಹ್ಲಿ ಸಿ ಅಲಿ ಬಿ ವುಡ್ 56
ಶ್ರೇಯಸ್ ಅಯ್ಯರ್ ಸಿ ಲಿವಿಂಗ್‌ಸ್ಟೋನ್ ಬಿ ವುಡ್ 6
ಕೆ.ಎಲ್. ರಾಹುಲ್ ಔಟಾಗದೆ 62
ಹಾರ್ದಿಕ್ ಪಾಂಡ್ಯ ಸಿ ಬೇರ್‌ಸ್ಟೊ ಬಿ ಸ್ಟೋಕ್ಸ್ 1
ಕೃಣಾಲ್ ಪಾಂಡ್ಯ ಔಟಾಗದೆ 58
ಇತರ 8
ಒಟ್ಟು (50 ಓವರ್‌ಗಳಲ್ಲಿ 5 ವಿಕೆಟಿಗೆ) 317
ವಿಕೆಟ್ ಪತನ: 1-64, 2-169, 3-187, 4-197, 5-205.
ಬೌಲಿಂಗ್:
ಮಾರ್ಕ್ ವುಡ್ 10-1-75-2
ಸ್ಯಾಮ್ ಕರನ್ 10-1-48-0
ಟಾಮ್ ಕರನ್ 10-0-63-0
ಬೆನ್ ಸ್ಟೋಕ್ಸ್ 8-1-34-3
ಆದಿಲ್ ರಶೀದ್ 9-0-66-0
ಮೊಯಿನ್ ಅಲಿ 3-0-28-0
ಇಂಗ್ಲೆಂಡ್
ಜಾಸನ್ ರಾಯ್ ಸಿ ಸೂರ್ಯ ಬಿ ಪ್ರಸಿದ್ಧ್ 46
ಜಾನಿ ಬೇರ್‌ಸ್ಟೊ ಸಿ ಕುಲದೀಪ್ ಬಿ ಠಾಕೂರ್ 94
ಬೆನ್ ಸ್ಟೋಕ್ಸ್ ಸಿ ಗಿಲ್ ಬಿ ಪ್ರಸಿದ್ಧ್ 1
ಇಯಾನ್ ಮಾರ್ಗನ್ ಸಿ ರಾಹುಲ್ ಬಿ ಠಾಕೂರ್ 22
ಜಾಸ್ ಬಟ್ಲರ್ ಎಲ್‌ಬಿಡಬ್ಲ್ಯು ಠಾಕೂರ್ 2
ಸ್ಯಾಮ್ ಬಿಲ್ಲಿಂಗ್ಸ್ ಸಿ ಕೊಹ್ಲಿ ಬಿ ಪ್ರಸಿದ್ಧ್ 18
ಮೊಯಿನ್ ಅಲಿ ಸಿ ರಾಹುಲ್ ಬಿ ಭುವನೇಶ್ವರ್ 30
ಸ್ಯಾಮ್ ಕರನ್ ಸಿ ಗಿಲ್ ಬಿ ಕೃಣಾಲ್ 12
ಟಾಮ್ ಕರನ್ ಸಿ ಸಿ ಭುವನೇಶ್ವರ್ ಬಿ ಪ್ರಸಿದ್ಧ್ 11
ಆದಿಲ್ ರಶೀದ್ ಸಿ ರಾಹುಲ್ ಬಿ ಭುವನೇಶ್ವರ್ 0
ಮಾರ್ಕ್ ವುಡ್ ಔಟಾಗದೆ 2
ಇತರ 13
ಒಟ್ಟು (42.1 ಓವರ್‌ಗಳಲ್ಲಿ ಆಲೌಟ್) 251
ವಿಕೆಟ್ ಪತನ: 1-135, 2-137, 3-169, 4-175, 5-176, 6-217, 7-237, 8-239, 9-241.
ಬೌಲಿಂಗ್:
ಭುವನೇಶ್ವರ್ ಕುಮಾರ್ 9-0-30-2
ಪ್ರಸಿದ್ಧ್ ಕೃಷ್ಣ 8.1-1-54-4 ಶಾದೂìಲ್ ಠಾಕೂರ್ 6-0-37-3 ಕೃಣಾಲ್ ಪಾಂಡ್ಯ 10-0-59-1
ಕುಲದೀಪ್ ಯಾದವ್ 9-0-68-0
ಪಂದ್ಯಶ್ರೇಷ್ಠ: ಶಿಖರ್ ಧವನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.