ವಿಶ್ವ ಹಾಕಿ ಲೀಗ್ ಫೈನಲ್: ಭಾರತಕ್ಕೆ ಕಂಚು
Team Udayavani, Dec 11, 2017, 6:00 AM IST
ಭುವನೇಶ್ವರ: ಹಾಕಿ ವಿಶ್ವ ಲೀಗ್ ಫೈನಲ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿದೆ. ಕಂಚಿಗಾಗಿ ನಡೆದ ಹೋರಾಟದಲ್ಲಿ ಭಾರತ 2-1 ಗೋಲುಗಳ ಅಂತರದಿಂದ ಬಲಿಷ್ಠ ಜರ್ಮನಿ ತಂಡವನ್ನು ಸೋಲಿಸಿದೆ.
ಕನ್ನಡಿಗ ಸುನೀಲ್ ತಂದುಕೊಟ್ಟ ಮುನ್ನಡೆ: ಭಾರತ ತಂಡಕ್ಕೆ ಕನ್ನಡಿಗ ಎಸ್.ವಿ.ಸುನೀಲ್ 20ನೇ ನಿಮಿಷದಲ್ಲಿ ಮೊದಲ ಗೋಲು ತಂದುಕೊಟ್ಟರು. ಇದರಿಂದ ಭಾರತ 1-0 ಅಂತರದ ಮುನ್ನಡೆ ಪಡೆಯಿತು. ಆದರೆ ಇದಾಗಿ ಒಟ್ಟು 16 ನಿಮಿಷ ಜರ್ಮನಿ ಇನ್ನಿಲ್ಲದ ಹೋರಾಟ ನಡೆಸಿತು. ಪ್ರಯತ್ನಕ್ಕೆ ತಕ್ಕ ಫಲ ಎನ್ನುವಂತೆ 36ನೇ ನಿಮಿಷದಲ್ಲಿ ಮಾರ್ಕ್ ಅಪ್ಪೆಲ್ ಗೋಲು ದಾಖಲಿಸಿಯೇ ಬಿಟ್ಟರು. ಇದರಿಂದಾಗಿ ಜರ್ಮನಿ 1-1 ಗೋಲುಗಳಿಂದ ಸಮಸಾಧಿಸಿಕೊಂಡಿತು. ಪ್ರಬಲ ಹೋರಾಟ ನಡೆಸುವ ಮುನ್ಸೂಚನೆ ನೀಡಿತು. ಇಲ್ಲಿಂದ ನಂತರ ಎರಡೂ ತಂಡಗಳು 50 ನಿಮಿಷಗಳ ತನಕ ಗೋಲಿಗಾಗಿ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ.
ಹರ್ಮನ್ ತಂದ ಜಯ: ಎರಡೂ ತಂಡಗಳ ಪ್ರಯತ್ನ ಮುಂದುವರಿಯುತ್ತಿತ್ತು. ಕೆಲವೊಂದು ಉತ್ತಮ ಅವಕಾಶಗಳನ್ನು ಭಾರತೀಯ ಆಟಗಾರರು ಕೈಚೆಲ್ಲಿದರು. ಆದರೆ ಪಂದ್ಯದ 54ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ದಾಖಲಿಸಿದರು. ಭಾರತ ತಂಡಕ್ಕೆ 2-1 ಗೋಲುಗಳ ಮುನ್ನಡೆ ಒದಗಿಸಿದರು. ಬಳಿಕ ಗೋಲು ದಾಖಲಿಸಿ ಡ್ರಾ ಸಾಧಿಸಿಕೊಳ್ಳಲು ಜರ್ಮನಿ ನಿರಂತರ ಪ್ರಯತ್ನ ನಡೆಸಿತಾದರೂ ಕೊನೆಯ 6 ನಿಮಿಷದಲ್ಲಿ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ಗೆಲುವಿನ ನಗು ಬೀರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.